This page was exported from Vikrama [ http://vikrama.in ]
Export date: Sun Mar 11 4:55:07 2018 / +0000 GMT

ಅಂಡಮಾನ್ ದ್ವೀಪದಲ್ಲಿ ಎಬಿವಿಪಿ ಸಮ್ಮೇಳನಪೋರ್ಟ್‌ಬ್ಲೇರ್:  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಲ್ಲಿನ ಪಥೇರ್ ಗುಡ್ಡದಲ್ಲಿ ತನ್ನ 5ನೇ ವಿದ್ಯಾರ್ಥಿ ಸಮ್ಮೇಳನವನ್ನು ಮಾ. 29ರಂದು ಹಮ್ಮಿಕೊಂಡಿತ್ತು. ಸಂಘದ ಕ್ಷೇತ್ರ ಪ್ರಚಾರಕ್ ಪ್ರಮುಖ್ ರಾಮಪಾದ ಪೌಲ್ ಅವರು ಉದ್ಘಾಟಿಸಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ವೀರ ಸಾವರ್ಕರ್ ಕೇಂದ್ರೀಯ ವಿಶ್ವವಿದ್ಯಾಲಯ, ನೇತಾಜಿ ಸುಭಾಷ್‌ಚಂದ್ರ ಬೋಸರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ ನಿರ್ಮಾಣ ಹಾಗೂ ಇಲ್ಲಿನ ಪದವಿ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳನ್ನು ಹೆಚ್ಚಿಸುವುದು, ಪದವಿ ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ಪ್ರಾಂಶುಪಾಲ ಹುದ್ದೆಗಳ ಖಾಯಮಾತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಭೆಯಲ್ಲಿ ಮಾತನಾಡಿದ ಪ್ರಮುಖರು ಆಗ್ರಹಿಸಿದರು.
ಅಮಿತಾಬ್ ಚಕ್ರವರ್ತಿ, ಆಶಿಷ್‌ಮಂಡಲ್, ಡಾ. ಕಂದಿಮುತ್ತು ಮೊದಲಾದವರು ಈ ಸಂದರ್ಭದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಎಬಿವಿಪಿಯ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

 

 


Post date: 2015-04-30 10:31:51
Post date GMT: 2015-04-30 05:01:51
Post modified date: 2015-04-30 14:32:06
Post modified date GMT: 2015-04-30 09:02:06

Powered by [ Universal Post Manager ] plugin. MS Word saving format developed by gVectors Team www.gVectors.com