ಅತಿ ವ್ಯಾಯಾಮವೂ ಮಾರಕ

ಆರೋಗ್ಯ ; ಲೇಖನಗಳು - 0 Comment
Issue Date : 30.05.2016

-ಮಂಗಲಾ

ದೇಹದ ತೂಕವನ್ನು ಇಳಿಸುವುದು ಇತ್ತೀಚಿನ ದಿನಗಳಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ದೇಹಕ್ಕೆ ಶ್ರಮ ನೀಡದಿರುವುದು, ಅನಾರೋಗ್ಯಕರ ಆಹಾರ ಶೈಲಿ, ಅನಿಯಂತ್ರಿತ ಬೊಜ್ಜು ಪದಾರ್ಥಗಳ ಸೇವನೆ, ಒತ್ತಡ ಈ ಎಲ್ಲವೂ ಸೇರಿ ದೇಹದ ತೂಕವನ್ನು ಹೆಚ್ಚಿಸುತ್ತವೆ. ನಾಲ್ಕು ಜನರೆದುರು ಓಡಾಡುವುದಕ್ಕೂ ಮುಜುಗರವಾಗುವ ರೀತಿಯಲ್ಲಿ ದೇಹದ ವಿಕಾರವಾಗಿ ಬೆಳೆದು ಜಾಹೀರಾತುಗಳಲ್ಲಿ ತೋರಿಸುವ ತರಹೇವಾರಿ ಔಷಧಗಳನ್ನು ಸೇವಿಸಿಯಾದರೂ ದೇಹದ ತೂಕ ಇಳಿಸಿಕೊಳ್ಳಬೇಕೆಂಬ ಇಚ್ಛೆ ಉಂಟಾಗುತ್ತದೆ. ದೇಹದ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಯಾವುದೋ ಒಂದು ಔಷಧದಿಂದ ಸಾಧ್ಯವಾಗುವುದಿಲ್ಲ. ಅದಕ್ಕೆ ಸತತ ಪರಿಶ್ರಮಬೇಕು. ದೇಹವನ್ನು ದಂಡಿಸಬೇಕು, ಅದಕ್ಕೆ ಸಾಕಷ್ಟು ಶ್ರಮ ನೀಡಿ, ವ್ಯಾಯಾಮ ಮಾಡಬೇಕು, ಹಾಗೆಯೇ ತಿನ್ನುವ ಆಹಾರದಲ್ಲೂ ಪಥ್ಯ ಅನುಸರಿಸಬೇಕು. ಇವೆಲ್ಲ ಇದ್ದರೆ ತೂಕ ಕಡಿಮೆಯಾಗುತ್ತದೆ. ಹಾಗಂತ ತಕ್ಷಣವೇ ದೇಹದ ತೂಕ ಇಳಿಸಿಕೊಳ್ಳಬೇಕೆಂದು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ದೇಹದ ಆರೋಗ್ಯಕ್ಕೆ ಮಾರಕ ಎಂಬುದು ತಜ್ಞರ ಅಭಿಪ್ರಾಯ.

 •  ಹೆಚ್ಚು ವ್ಯಾಯಾಮ ಮಾಡುವುದರಿಂದ ಪದೇ ಪದೇ ಅನಾರೋಗ್ಯದಿಂದ ಬಳಲಬೇಕಾಗಬಹುದು.
 •  ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
 •  ಶಕ್ತಿಯುತರಾಗುವ ಬದಲು ಮತ್ತಷ್ಟು ಬಲಹೀನರಾಗಬೇಕಾಗುತ್ತದೆ.
 •  ಹೆಚ್ಚು ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಒತ್ತಡವನ್ನು ಸೃಷ್ಟಿಸುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದರಿಂದಾಗಿ ನಿದ್ರಾಹೀನತೆಯೂ ಆರಂಭವಾಗಬಹುದು.
 •  ರಕ್ತದೊತ್ತಡ ಹೆಚ್ಚಾಗುತ್ತದೆ.
 •  ಹೃದಯದ ಆರೋಗ್ಯಕ್ಕೂ ತೊಂದರೆ.
 •  ಸಕ್ಕರೆ ಕಾಯಿಲೆ ಉಲ್ಬಣವಾಗುವ ಸಾಧ್ಯತೆಯಿದೆ.
 •  ಕೊಬ್ಬಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
 •  ಹಸಿವು ಹೆಚ್ಚಾಗುವುದು ಅಥವಾ ಆಗದೇ ಇರಬಹುದು.
 •  ಮಾನಸಿಕ ಅಸ್ವಾಸ್ಥ್ಯ ಮತ್ತು ಖಿನ್ನತೆಗೆ ಕಾರಣವಾಗಬಹುದು.
 •  ಅತಿಯಾದ ವ್ಯಾಯಾಮ ಮಾಂಸಖಂಡಗಳಿಗೆ, ಮೂಳೆಗಳಿಗೆ ಹಾನಿಯನ್ನುಂಟುಮಾಡಬಹುದು.

ಪ್ರತಿದಿನವೂ ದೇಹಕ್ಕೆ ವ್ಯಾಯಾಮ ಬೇಕು. ಬೇಕೇ ಬೇಕು. ಅದು ದೇಹದ ಆರೋಗ್ಯವನ್ನು ಸದೃಢಗೊಳಿಸುತ್ತದೆ. ಆದರೆ ಅದು ಅತಿಯಾದರೆ ಮಾತ್ರ ಪ್ರಾಣಕ್ಕೂ ಕಂಟಕವಾಗಬಹುದು. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದ ತೂಕವೂ ಸುಸ್ಥಿತಿಯಲ್ಲಿರುತ್ತದೆ. ಆಗ ಒಮ್ಮೆಲೇ ದೇಹದ ತೂಕವನ್ನು ಇಳಿಸಿಕೊಳ್ಳುವ ಪ್ರಮೇಯ ಬರುವುದಿಲ್ಲ.

   

Leave a Reply