ಅಪಾರ್ಥ-ಅಪವಾದಕ್ಕೊಳಗಾದ ಪ್ರಾಚೀನ ವಿದ್ಯಾಜನೆ

ಇತಿಹಾಸ - 0 Comment
Issue Date :

‘ಭಾರತದ ಇತಿಹಾಸವೆಂದರೆ ಅವಶ್ಯಕವಾಗಿ ಹಿಂದೂಗಳ ಇತಿಹಾಸ. ಮತ್ತು ಅವರ ಕೊಡುಗೆಯೇ ಅದನ್ನು ವೈಶಿಷ್ಟ್ಯಮಯವಾಗಿ ಮಾಡಿರುವುದು’ ಎಂದು ಮೈಕೆಲ್ ಎಡ್‌ವರ್ಡ್‌ಡೆಸ್ ಹೇಳಿರುವುದು ವಿಮರ್ಶಾತ್ಮಕವಾಗಿದೆ. ‘ಭಾರತದ ಇತಿಹಾಸ’ ಎಂದರೆ ಹಿಂದೂಗಳ ಇತಿಹಾಸ ಎಂಬುದು ಕೆಲವರ ಶೀಘ್ರ ಪ್ರತಿಕ್ರಿಯೆಗೊಳಗಾಗುವ (ಚ್ಝ್ಝಛ್ಟಿಜಜ್ಚಿ) ಹೇಳಿಕೆಯಾಗಿದೆ. ಇಲ್ಲಿ ‘ಹಿಂದೂ’ಗಳೆಂದರೆ ಮೂಲ ಭಾರತೀಯರು ಎಂದರ್ಥವಾಗಿದೆ. ಆರಂಭದಲ್ಲಿ, ಬ್ರಿಟಿಷ್ ಇತಿಹಾಸಕಾರರು ಭಾರತದ ಇತಿಹಾಸವನ್ನು, ‘ಹಿಂದುಯುಗ-ಮುಸ್ಲಿಂ ಯುಗ-ಬ್ರಿಟಿಷ್ ಯುಗ’ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಿದ್ದರು. ಹಿಂದೂ ಯುಗ ಎಂಬುದು ಪ್ರಾಚೀನ ಭಾರತಕ್ಕೆ ಸಂಬಂಧಿಸಿದ್ದಾಗಿದೆ. ಈ ಕಾಲಾವಧಿಯಲ್ಲಿ ಕಂಡುಬರುವುದೇ ಭಾರತದ ಇತಿಹಾಸದಲ್ಲಿಯ ಹಿಂದೂಗಳ ಕೊಡುಗೆ. ಆ ರೀತಿಯ ಮಹತ್ತರವಾದ ಹಿಂದೂ ಕೊಡುಗೆಯ ಒಂದು ಕ್ಷೇತ್ರವೇ ಪ್ರಾಚೀನ ವಿದ್ಯಾರ್ಜನೆ.
ಪ್ರಾಚೀನ ವಿದ್ಯಾರ್ಜನಾ ಪದ್ದತಿಯನ್ನು ಹಾಗೂ ಅದರ ಉದ್ದೇಶವನ್ನು ತೀರಾ ಅಪಾರ್ಥಮಾಡಿಕೊಳ್ಳಲಾಗಿದೆ. ಬ್ರಿಟಿಷ್ ವಸಾಹತುಶಾಹೀ ಬರಹಗಾರರು ಪ್ರಾಚೀನ ವಿದ್ಯಾರ್ಜನಾ ಪದ್ಧತಿಯನ್ನು ಸಂಪೂರ್ಣವಾಗಿ ನಾಶಮಾಡಲು ಪ್ರಯತ್ನಿಸಿದರು. ಅವರ ಉದ್ದೇಶ ಮುಖ್ಯವಾಗಿ ಎರಡು ಅಂಶಗಳಿಂದ ಕೂಡಿತ್ತು. ಮೊದಲನೆಯದಾಗಿ, ಪ್ರಾಚೀನ ಭಾರತದ ಸಾಂಸ್ಕೃತಿಕ ಹಿರಿಮೆಯ ನಿರ್ಮೂಲನ (ಛ್ಚ್ಠ್ಝಿಠ್ಠ್ಟಿಜಿಠಿಜಿಟ್ಞ) ಮತ್ತು ಎರಡನೆಯದಾಗಿ ರಾಷ್ಟ್ರಾಭಿಮಾನವನ್ನು ಅಳಿಸುವುದಾಗಿತ್ತು (ಛ್ಞಿಠಿಜಿಟ್ಞಚ್ಝಜಿಠಿಜಿಟ್ಞ). ಪ್ರಾಚೀನ ಅಧ್ಯಯನ ಸ್ವಧರ್ಮ-ಸ್ವದೇಶಾಭಿಮಾನಕ್ಕೆ ಪೂರಕವಾಗಿದ್ದುದರಿಂದ ಅವುಗಳಿಗೆ ಆಘಾತ ನೀಡುವ ಉದ್ದೇಶ ವಿದೇಶಿಯರಿಗಿತ್ತು. ಆ ರೀತಿಯ ‘ಕೆಸರು-ಕಲ್ಲು’ (್ಛಟ್ಠ್ಞಠಿಜಿಟ್ಞ ಠಿಟ್ಞಛಿ) ಹಾಕಿದ ವಿದೇಶೀಯ ತಳಹದಿಯಲ್ಲಿ ಭಾರತೀಯರು ಗೋಡೆ-ಮಾಡು ನಿರ್ಮಿಸಿದರು! ನಮ್ಮಲ್ಲಿ ಕೆಲವರ ವಿಚಾರ ಲಹರಿಗಳು ಪ್ರಾಚೀನ ಮೌಲ್ಯಗಳನ್ನು ತಿಳಿದುಕೊಳ್ಳುವಲ್ಲಿ ವಿಫಲವಾದವು. ಪ್ರಾಚೀನ ವಿದ್ಯಾರ್ಜನೆಯ ತತ್ವ ಮತ್ತು ಸ್ವರೂಪವನ್ನು ಅಪಾರ್ಥ ಮಾಡಿಕೊಂಡವರು ಹಾಗೂ ಅಪವಾದ ಹೇರುವವರು ಸಾಮಾನ್ಯವಾಗಿ (ಖಠಿಛ್ಟಿಛಿಟಠಿಛಿ) ವಿಮರ್ಶಿಸುವ ಅಂಶಗಳು ಈ ರೀತಿಯಾಗಿವೆ:
(1) ಪ್ರಾಚೀನ ಪದ್ಧತಿಯಲ್ಲಿ ಬಾಯಿಪಾಠ ಅಥವಾ
ಕಂಠಪಾಠಕ್ಕೇ ಹೆಚ್ಚಿನ ಮಹತ್ವ ನೀಡಲಾಗಿದೆ.
(2) ಅದು ಕೇವಲ ಪುನರುಚ್ಚರಿಸುವುದೇ ವಿನಃ ಅದರ
ಅರ್ಥವನ್ನು ಅರಿತುಕೊಳ್ಳುವುದು ಆಗಿರಲಿಲ್ಲ.
(3) ಅದು ಹೆಚ್ಚಾಗಿ ಆಧ್ಯಾತ್ಮಿಕ (metaphysical) ಅಥವಾ
ಪಾರಮಾರ್ಥಿಕ ವಿಷಯಗಳಿಗೇ ಸಂಬಂಧಿಸಿದ್ದಾಗಿತ್ತೇ
ವಿನಃ ವಿಜ್ಞಾನ, ತಾಂತ್ರಿಕ ಮತ್ತು ಲೌಕಿಕ ವಿಷಯಗಳಿಗೆ
(secular) ಸಂಬಂಧಿಸಿದ್ದಾಗಿರಲಿಲ್ಲ.
(4) ಪ್ರಾಚೀನ ವಿದ್ಯಾಭ್ಯಾಸ ಕೇವಲ ಒಂದು ವರ್ಗದವರಿಗೇ
ಸೀಮಿತವಾಗಿತ್ತು. ಅದು ಜನಪರವಾಗಿರಲಿಲ್ಲ. ಅಲ್ಲಿ
ನಿಮ್ನ ವರ್ಗದವರಿಗೆ ಅವಕಾಶವಿರಲಿಲ್ಲ.
(5) ಆ ಪದ್ಧತಿ ಪುರೋಹಿತಶಾಹೀ ವ್ಯವಸ್ಥೆಯ
ಭಾಗವಾಗಿತ್ತು.
ಈ ಮೇಲಿನ ಆಪಾದನೆಗಳು ಮೇಲ್ನೋಟಕ್ಕೆ ವಿಮರ್ಶಾತ್ಮಕವಾಗಿ ಕಂಡರೂ ಅವುಗಳಲ್ಲಿನ ಸತ್ಯಾಂಶಗಳನ್ನು ತಿಳಿಯಲು ಪ್ರಾಚೀನ ವಿದ್ಯಾಭ್ಯಾಸದ ಸ್ವರೂಪ, ವಿಧಾನ, ಪದ್ಧತಿ, ಉದ್ದೇಶ……ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. (ಅವುಗಳನ್ನು ಯೋಗ್ಯ ನಿದರ್ಶನಗಳ ಮೂಲಕ ‘ವಿಕ್ರಮ’ದಲ್ಲಿಯ ‘ಪುರಾಣ ಪಥ‘ ಅಂಕಣದಲ್ಲಿ ಕಾಣಬಹುದು). ಡಾ. ಆರ್.ಕೆ.ಮುಖರ್ಜಿಯವರು ಪ್ರಾಚೀನ ಭಾರತದ ವಿದ್ಯಾಭ್ಯಾಸದ ಬಗ್ಗೆ ಬಹಳ ಅಧ್ಯಯನ ಮಾಡಿದ ವಿದ್ವಾಂಸರಾಗಿದ್ದಾರೆ. ಅವರ ಇತಿಹಾಸ ಕೃತಿಗಳಲ್ಲಿ (’ಅ್ಞ್ಚಜಿಛ್ಞಿಠಿ ಐ್ಞಜಿ’, ’ಏಜ್ಞಿಛ್ಠ ಇಜಿಜ್ಝಿಜಿಠಿಜಿಟ್ಞ’ ಚ್ಟಠಿ ಐ ಚ್ಞ ಚ್ಟಠಿ ಐಐ) ಆ ವಿದ್ಯಾಭ್ಯಾಸದ ಬಗ್ಗೆ ವಿವರವಾಗಿ ತರ್ಕಿಸಿರುತ್ತಾರೆ. ಅವರ ಹೇಳಿಕೆಯಂತೆ ಪ್ರಥಮ ಹಂತದಲ್ಲಿ ಮನೆಯೇ ಪಾಠಶಾಲೆಯಾಗಿತ್ತು. ಆಮೇಲೆ ‘ಗುರುಕುಲ’ ಹಾಗೂ ‘ಋಷ್ಯಾಶ್ರಮ’ಗಳು ಜ್ಞಾನಾರ್ಜನೆಯ ಮತ್ತು ನಡವಳಿಕೆ ರೂಪಿಸುವ (ಇಚ್ಟಚ್ಚಠಿಛ್ಟಿಚ್ಠಿಜ್ಝಿಜ್ಞಿಜ) ಕೇಂದ್ರಗಳಾಗಿದ್ದವು. ‘ಚರಕ’ ಎಂಬ ಅಲೆದಾಡುವ ವಿದ್ವಾಂಸರು (ಚ್ಞಛ್ಟಿಜ್ಞಿಜ ಖ್ಚಟ್ಝಚ್ಟ) ಬೋಧನಾನಿರತರಾಗಿ ವಿವಿಧೆಡೆಗಳಲ್ಲಿ ಸಂಚರಿಸುತ್ತಿದ್ದರು. ವಿದ್ವಜ್ಜನರ ಸಭೆಗಳೂ (ಔಛಿಚ್ಟ್ಞಛಿ ಇಟ್ಞ್ಛಛ್ಟಿಛ್ಞ್ಚಿಛಿ) ವಿದ್ಯಾಕೇಂದ್ರಗಳಾಗಿದ್ದವು. ಅಲ್ಲಿ ‘ಶ್ರವಣ, ಮನನ, ನಿಧಿಧ್ಯಾಸನ’ಗಳ ಮೂಲಕ ಜ್ಞಾನಾರ್ಜನೆಯಾಗುತ್ತಿತ್ತು. ಅದರೊಂದಿಗೇ ವಾದಮಂಡನೆ, ಪ್ರತಿವಾದ, ಚರ್ಚಾಕೂಟ, ವಿದ್ವತ್ ಪ್ರದರ್ಶನ, ಮುಂತಾದ ಚಟುವಟಿಕೆಗಳು ನಡೆಯುತ್ತಿದ್ದವು. ಪುರಾಣಿಕರು ಪುರಾಣವಾಚನದ ಮೂಲಕ ಪರೋಕ್ಷವಾಗಿ ಬೋಧನೆ ಮಾಡುತ್ತಿದ್ದರು. ಇವೆಲ್ಲಾ ಪುರಾಣ ಕಾಲದ ಹಾಗೂ ಉಪನಿಷತ್ಕ್ಕಾಲದ ವಿದ್ಯಾಭ್ಯಾಸವಾದರೆ, ಮುಂದೆ ವ್ಯವಸ್ಥಿತವಾದ ವಿಶ್ವವಿದ್ಯಾಲಯ ಕೇಂದ್ರಗಳೂ ತಲೆಯೆತ್ತಿದವು. ಅಲ್ಲಿ ಅನೇಕ ವಿಷಯಗಳ ವಿದ್ಯಾಭ್ಯಾಸ (ಞ್ಠ್ಝಠಿಜಿಜಿಠ್ಚಜಿಟ್ಝಜ್ಞಿಚ್ಟ ಛಿಛ್ಠ್ಚಠಿಜಿಟ್ಞ) ನೀಡುವುದಾಗಿತ್ತು. ಅವುಗಳಿಗೆ ಪ್ರವೇಶ ಸಿಗುವುದೂ ಕಷ್ಟಕರವಾಗಿತ್ತು. ‘ದ್ವಾರಪಂಡಿತ’ರು ಪ್ರವೇಶ ಪರೀಕ್ಷೆ ಮಾಡಿ ವಿದ್ಯಾರ್ಥಿಗಳನ್ನು ಸೇರಿಸುತ್ತಿದ್ದರು. ತಕ್ಷಶಿಲಾ, ನಾಲಂದಾ, ವಿಕ್ರಮಶಿಲಾ, ಉಜ್ಜೈನಿ, ಮಿಥಿಲಾ, ಗಾಂಧಾರ, ವಾರಾಣಸಿ, ಕಾಂಚಿ ಮೊದಲಾದ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಅಧ್ಯಯನ-
ಅಧ್ಯಾಪನಗಳು ಸಮರ್ಪಕವಾಗಿ ನಡೆಯುತ್ತಿದ್ದವು. ಆ ಒಂದೊಂದು ಕೇಂದ್ರಗಳೂ, ಒಂದೊಂದು ವಿಷಯದಲ್ಲಿ ಪರಿಣತಿಯ (ಖಛ್ಚಿಜಿಚ್ಝಜಿಠಿಜಿಟ್ಞ) ಕೇಂದ್ರಗಳಾಗಿದ್ದವು. ವಾರಣಾಸಿ ವೈದಿಕ ಜ್ಞಾನಕ್ಕೆ, ತಕ್ಷಶಿಲಾ ಔಷಧಿ ವಿಜ್ಞಾನಕ್ಕೆ (ಛಿಜ್ಚಿಚ್ಝ ಖ್ಚಜಿಛ್ಞ್ಚಿಛಿ), ಶಸ್ತ್ರಾಧ್ಯಯನ (ಜ್ಝಿಜಿಠಿಚ್ಟ ಖ್ಚಜಿಛ್ಞ್ಚಿಛಿ)ರಾಜನೀತಿ ಮುಂತಾದವುಗಳಿಗೆ ಹೆಸರುವಾಸಿಯಾಗಿತ್ತು. ಪ್ರಾಚೀನ ಕಲಿಕೆಯ ವಿಷಯಗಳ ಬಗ್ಗೆ ಛಾಂದೋಗ್ಯೋಪನಿಷತ್ ವಿವರ ನೀಡುತ್ತದೆ. ಅಂತಹ ವಿದ್ಯಾಕೇಂದ್ರಗಳನ್ನು ಮುಸಲ್ಮಾನ ಆಕ್ರಮಣಕಾರರು ಧ್ವಂಸಮಾಡಿ, ಗ್ರಂಥಗಳನ್ನು ಸುಟ್ಟು, ಅಲ್ಲಿಯ ಪಂಡಿತರನ್ನು ಹತ್ಯೆ ಮಾಡಿದ್ದರು!
ಪ್ರಾಚೀನ ವಿದ್ಯಾಭ್ಯಾಸದ ಉದ್ದೇಶ ಇಂತಹದ್ದೇ ಆಗಿತ್ತು ಎಂದು ಬೊಟ್ಟುಮಾಡಿ ಹೇಳಲು ಸಾಧ್ಯವಿಲ್ಲ. ಅದು ವಿವಿಧೋದ್ದೇಶಗಳನ್ನು ಹೊಂದಿತ್ತು. ಮುಖ್ಯವಾಗಿ ಅದು ಜ್ಞಾನ ಸಂಪಾದನೆ ಮತ್ತು ಸಾತ್ವಿಕ ಜೀವನ ಮಾರ್ಗಕ್ಕೆ ಆದ್ಯತೆ ನೀಡಿತ್ತು. ಅದು ಕೇವಲ ಆಧ್ಯಾತ್ಮ ವಿಷಯಗಳಿಗೆ ಸೀಮಿತವಾಗಿರಲಿಲ್ಲ. ಧಾರ್ಮಿಕ, ವೈಜ್ಞಾನಿಕ ಹಾಗೂ ಲೌಕಿಕ ವಿಷಯಗಳ ಜ್ಞಾನ, ತರಬೇತಿ ಮತ್ತು ಕೌಶಲ್ಯ (ಜ್ಝ್ಝಿ) ಗಳಿಸುವುದೇ ಅದರ ಧ್ಯೇಯವಾಗಿತ್ತು. (ಈ್ಟ. .ಖ.ಚ್ಞ, ಅ್ಟಠಿಜ್ಚ್ಝಿಛಿ ಜ್ಞಿ ಓಚ್ಝಚ್ಞ ಓಚ್ಝಠಿಚ್ಟ್ಠ, ಣ್ಚಠಿ. 2015). ‘‘ಎಲ್ಲೆಡೆಗಳಿಂದಲೂ ಜ್ಞಾನ ಬರಲಿ’’ ಎಂಬುದೇ ಧ್ಯೇಯವಾಕ್ಯವಾಗಿತ್ತು. (ಋಗ್ವೇದ. 89.1). ವಿಶೇಷವೆಂದರೆ, ಅದೊಂದು ನಿರಂತರ ಅಧ್ಯಯನವಾಗಿತ್ತು. ‘ಜ್ಞಾನಸಂಪಾದನೆ’ ಹಾಗೂ ‘ಜ್ಞಾನ ಪ್ರಸರಣ’ ಕಾರ್ಯಗಳಲ್ಲಿ ಗುರು-ಶಿಷ್ಯರೆಂಬ ವ್ಯತ್ಯಾಸವಿಲ್ಲದೆ ಅವರು ಕಾರ್ಯಮಗ್ನರಾಗಿದ್ದರು. ಅದು ಲಾಭ-ನಷ್ಟಗಳಿಲ್ಲದ ಕಲಿಕೆಯ ವ್ಯವಸ್ಥೆಯಾಗಿತ್ತು. ಜ್ಞಾನ ಸಂಪಾದನೆಯೊಂದಿಗೆ ಉತ್ತಮ ಗುಣ-ನಡತೆ-ಸ್ವಭಾವ ರೂಪಿಸುವ ಆದರ್ಶ ಅಂದಿನದಾಗಿತ್ತು. ಆ ಕಾಲದಲ್ಲಿ ಗುರು ಆಶ್ರಮಗಳಲ್ಲ್ಲೂ, ವಿಶ್ವವಿದ್ಯಾಲಯಗಳಲ್ಲೂ ಸಹೋದರತೆ, ಸಮಾನತೆ ಹಾಗೂ ನಿಯಮಿತ ಸ್ವಾತಂತ್ರ್ಯದ ಾತಾವರಣವಿತ್ತು. ಆ ವಿದ್ಯಾಭ್ಯಾಸ ಒಬ್ಬ ವ್ಯಕ್ತಿಯನ್ನು ಆದರ್ಶ ಗೃಹಸ್ಥನಾಗಿ, ಉತ್ತಮ ಪ್ರಜೆಯಾಗಿ, ಯೋಗ್ಯ ಸಂಘಜೀವಿಯಾಗಿ ಧರ್ಮಸಮ್ಮತವಾದ ಪುರುಷಾರ್ಥಗಳನ್ನು ಪೂರೈಸುವ ಮಾರ್ಗವಾಗಿತ್ತು. ವಿದ್ಯಾಭ್ಯಾಸ ಪೂರೈಸಿ ಹೋಗುವ ಶಿಷ್ಯನಿಗೆ, ಮುಂದಿನ ಜೀವನವನ್ನು ಹೇಗೆ ಧರ್ಮಸಮ್ಮತವಾಗಿ ನಿರ್ಮಿಸಬೇಕೆಂಬ ಹಿತವಚನವನ್ನು ತೈತ್ತಿರೀಯ ಉಪನಿಷತ್ತಿನಲ್ಲಿ ಕಾಣಬಹುದು. (ಶಿಕ್ಷಾವಲ್ಲಿ-121ನೇ ಅನುವಾಕ)
(1) ಪ್ರಾಚೀನ ಪದ್ಧತಿಯಲ್ಲಿ ಕಂಠಪಾಠಕ್ಕೆ ಪ್ರಾಶಸ್ತ್ಯವಿದ್ದುದು ಆ ಕಾಲದ ಅನುಕೂಲಕ್ಕಾಗಿ. ಇಂದಿನಂತೆ ಪುಸ್ತಕಗಳು-ಸಲಕರಣೆಗಳು ಇಲ್ಲದ ಆ ಕಾಲದಲ್ಲಿ ಜ್ಞಾನವನ್ನು ತಲೆಮಾರಿನಿಂದ ತಲೆಮಾರಿಗೆ ಚಾಚೂತಪ್ಪದೆ, ಉಚ್ಚಾರದಲ್ಲೂ ವ್ಯತ್ಯಾಸವಾಗದಂತೆ ಮುಂದುವರಿಸಿಕೊಂಡು ಹೋದುದೇ ಕಂಠಪಾಠದ ಮೂಲಕ. ಇವತ್ತಿಗೆ ಅದು ಅಪ್ರಸ್ತುತವಾಗಿ ಕಾಣುವುದು ವಿಶೇಷವಲ್ಲ. ಕಂಠಪಾಠ ಮಾಡಿದುದರ ಅರ್ಥವನ್ನು ನಿದರ್ಶನಗಳ ಮೂಲಕ ಅನುಭವಕ್ಕೆ ಬರುವಂತೆ ಬೋಧಿಸಲಾಗುತ್ತಿತ್ತು. ಕೆಲವೊಮ್ಮೆ ಯಾವುದೇ ಬೋಧನೆಗಳಿಲ್ಲದೆ ಜ್ಞಾನವರ್ಗಾವಣೆ ಮಾಡಲಾಗುತ್ತಿತ್ತು!
(3) ಆ ವಿದ್ಯೆ ಆಧ್ಯಾತ್ಮಕ್ಕೆ ಮಾತ್ರ ಸೀಮಿತವಾಗಿರುವುದಾಗಿರಲಿಲ್ಲ. ಸುಮಾರು 64 ಜ್ಞಾನದ ಮುಖ್ಯ ವಿಭಾಗಗಳೂ, ಅನೇಕ ಉಪವಿಭಾಗಗಳೂ ಇದ್ದವು. ವೈದ್ಯಕೀಯ ಶಾಸ್ತ್ರ, ಖಗೋಳಶಾಸ್ತ್ರ, ಗಣಿತ ವಿಜ್ಞಾನ, ರಸವಿದ್ಯೆ, ಭೂಗರ್ಭಶಾಸ್ತ್ರ, ಪಶುವೈದ್ಯಕೀಯ….. ಹೀಗೆ ಅನೇಕ ವೈಜ್ಞಾನಿಕ ವಿಷಯಗಳ ಅಧ್ಯಯನವಾಗುತ್ತಿತ್ತು!
(4) ‘ಪ್ರಾಚೀನ ವಿದ್ಯಾಭ್ಯಾಸ ಒಂದು ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು’ – ಎಂಬುದು ಹಿಂದಿನ ವ್ಯವಸ್ಥೆಯನ್ನು ಅಪಾರ್ಥಮಾಡಿ ಮಾಡಿದ ಅಪವಾದವಾಗಿದೆ. ಜ್ಞಾನಾರ್ಜನೆಯಲ್ಲಿ ಮತ್ತು ಪ್ರಸರಣದಲ್ಲಿ ವರ್ಣಭೇದ-ವರ್ಗಭೇದಗಳಿರಲಿಲ್ಲ. ಅವೈದಿಕ ಧರ್ಮಗಳಲ್ಲೂ ಅದ್ಭುತ ವಿದ್ವಾಂಸರಿದ್ದರು. ‘ಧರ್ಮವ್ಯಾಧ’ನಂತಹ ಜ್ಞಾನಿಗಳಿದ್ದರು. ಬ್ರಹ್ಮಸ್ವರೂಪದ ದೃಢವಾದ ಪ್ರಜ್ಞೆಯುಳ್ಳವನು ಚಾಂಡಾಲನಾಗಲೀ ಅಥವಾ ಬ್ರಾಹ್ಮಣನಾಗಲೀ ಅವನೇ ನಿಜವಾದ ಗುರು ಮತ್ತು ಅವನು ದೇವೇಂದ್ರನಿಂದಲೂ ನಮಸ್ಕರಿಸಲ್ಪಡಲು ಯೋಗ್ಯನಾದವನು ಎಂಬುದನ್ನು ’ಮನೀಷಾಪಂಚಕ’ದಲ್ಲಿ ತೋರಿಸಲಾಗಿದೆ. ಭಾರತೀಯ ಋಷಿ ಸಂಸ್ಕೃತಿ ವಿವಿಧ ವರ್ಗದವರ ಕೊಡುಗೆಯಾಗಿತ್ತು. ಅನೇಕ ಋಷಿಗಳು-ಮುನಿಗಳು ಪ್ರಾಜ್ಞರು ಬ್ರಾಹ್ಮಣರಾಗಿರಲಿಲ್ಲ.
(5) ‘ಪುರೋಹಿತಶಾಹೀ’ ಎಂಬ ಕಲ್ಪನೆ ಇತಿಹಾಸಾಧ್ಯಯನದ ಪಥದಲ್ಲಿಯ ಇತ್ತೀಚೆಗಿನ ಕಲ್ಪನೆಯಾಗಿದೆ. ಇದು ಭಾರತೀಯ
ಮಾರ್ಕ್ಸ್‌ವಾದೀ ಚಿಂತನೆಯ ಫಲಶ್ರುತಿಯಾಗಿ ಒಂದು ವರ್ಗದ ಚಿಂತಕರಿಂದ ಪೋಷಿಸಲ್ಪಟ್ಟಿದೆ. ನಮ್ಮ ಇತಿಹಾಸದ ಯಾವುದೇ ಕಾಲಘಟ್ಟವನ್ನು ಪುರೋಹಿತಶಾಹೀ ಆಡಳಿತ, ವ್ಯವಸ್ಥೆ ಅಥವಾ ಸಂಸ್ಕೃತಿ ಇರಲಿಲ್ಲ.
ಪ್ರಾಚೀನ ವಿದ್ಯಾರ್ಜನೆಯ ತುಚ್ಛೀಕರಣ ಸಲ್ಲದು. ಹಾಗೆಯೇ ಅದರ ವೈಭವೀಕರಣವೂ ಸಾಧುವಲ್ಲ. ಆ ಪ್ರಾಚೀನ ಪದ್ಧತಿಯ ಮೂಲತತ್ವಗಳನ್ನೂ, ಆದರ್ಶಗಳನ್ನೂ ಪರಿಷ್ಕರಿಸಿ ಸಮಕಾಲೀನ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಮಾಡಿದಾಗ ‘‘ನ ಹಿ ಜ್ಞಾನೇನ ಸದೃಶಂ’’ ಸತ್ಯವಾಗುವುದು.

   

Leave a Reply