ಅರಣ್ಯ ಕಾಯ್ದೆ ಮತ್ತು ಕೃಷಿಕ

ಶಿವಮೊಗ್ಗ - 0 Comment
Issue Date : 10.09.2014

ತೀರ್ಥಹಳ್ಳಿಯಲ್ಲಿ ಮಾಹಿತಿ ಕಾರ್ಯಾಗಾರ
ತೀರ್ಥಹಳ್ಳಿ: ಕಾಡು ಉಳಿಯಬೇಕು, ರೈತರೂ ಚೆನ್ನಾಗಿ ಕೃಷಿ ಮಾಡಬೇಕು, ಕೃಷಿ ಮತ್ತು ಅರಣ್ಯ ಪರಸ್ಪರ ಸಹಕಾರಿಯಾಗಿರುವಂತೆ ನೋಡಿಕೊಳ್ಳುವ ನಮ್ಮ ದೇಶದ ಕಾನೂನು ಏನು ಹೇಳುತ್ತದೆ ಮತ್ತು ರೈತರ ಹಕ್ಕುಗಳೇನು ಎಂದು ತಿಳಿಸುವ ವಿಶೇಷ ಕಾರ್ಯಕ್ರಮ ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಆವರಣದಲ್ಲಿ (ಸೆ.13ರಂದು ಶನಿವಾರ ಆರಂಭವಾಗಲಿದೆ) ನಡೆಯಲಿದೆ.
ಒಂದು ದಿನದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಹಾಗೂ ಪ್ರಸ್ತುತ ಲೋಕ ಆದಾಲತ್‌ನ ಸದಸ್ಯರೂ ಆಗಿರುವ ಡಾ. ಅ.ನ. ಯಲ್ಲಪ್ಪ ರೆಡ್ಡಿ ಮತ್ತು ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ಅಧ್ಯಾಪಕ ಡಾ. ಎಂ.ಕೆ. ರಮೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಪರಿಸರ ಕಾರ್ಯಕರ್ತರಾದ ಗಜೇಂದ್ರ ಗೊರಸುಕೊಡುಗೆ, ಹನಿಯ ರವಿ, ಬೆಳ್ಳೂರು ತಿಮ್ಮಪ್ಪ, ಶಿವಕುಮಾರ್ ವಾಲೆಮನೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿ ಪ್ರಯೋಗ ಪರಿವಾರ ಮತ್ತು ಪುರುಷೋತ್ತಮ ಸಾವಯವ ಕೃಷಿ ಪರಿವಾರ ಜಂಟಿಯಾಗಿ ಆಯೋಜಿಸುತ್ತಿರುವ ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ ಆಸಕ್ತಿ ವ್ಯಕ್ತಿಗಳು ತಮ್ಮ ಹೆಸರನ್ನು ನೋಂದಾಯಿಸಲು ಸೆ. 7ರ ಒಳಗಾಗಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರಕ್ಕೆ ಪತ್ರ ಮುಖೇನ ಅಥವಾ 9449623275/08181-228340 ದೂರವಾಣಿಗಳನ್ನು ಸಂಪರ್ಕಿಸಬಹುದು.

   

Leave a Reply