ಇಂಡೋನೇಷಿಯಾ

ಜಗದ್ಗುರು ಭಾರತ - 0 Comment
Issue Date : 30.04.2015

 • ಸಾವಿರಾರು ವರ್ಷಗಳ ಹಿಂದೆ ಇಂಡೋನೇಷಿಯಾದಲ್ಲಿ ದಕ್ಷಿಣ ಭಾರತದ ಬ್ರಾಹ್ಮಣ ಸಮುದಾಯಗಳು ನೆಲೆಸಿದ್ದನ್ನು ಅಲ್ಲಿಯ ಸಂಸ್ಕೃತ ಭಾಷೆ ಮತ್ತು ಹೆಸರುಗಳು ಸಾಬೀತುಪಡಿಸುತ್ತವೆ.
 • ಕ್ರಿ.ಶ. 1ನೇ ಶತಮಾನದ ಕಾಲದ್ದೆನ್ನಲಾದ ರಾಮಾಯಣ ಹಾಗೂ ಮಹಾಭಾರತದ ಹಸ್ತಪ್ರತಿಗಳು ಇಲ್ಲಿ ದೊರಕಿವೆ. ಇವು ದಕ್ಷಿಣ ಭಾರತೀಯರು ಬಳಸುವ ಸಂಸ್ಕೃತ ಶೈಲಿಯಲ್ಲಿದೆ.
 • ಈಗಲೂ ಅಲ್ಲಿ ಕೆಲವು ಇಸ್ಲಾಮ್ ಸಮುದಾಯಗಳು ಹಿಂದೂ ಹೆಸರುಗಳನ್ನಿಟ್ಟುಕೊಳ್ಳುತ್ತಾರೆ. ಇಂಡೋನೇಷಿಯಾದ ಅಧ್ಯಕ್ಷರಾಗಿದ್ದ ಸುಕರ್ಣೋ, ಅವರ ಮಗಳು ಮೇಘವತೀ ಸುಕರ್ಣೋಪುತ್ರಿ, ಅವರ ಮಗ ಸುಹಾರ್ತೊ ಕೆಲವು ಪ್ರಮುಖ ಉದಾಹರಣೆಗಳು.
 • ಇಂಡೋನೇಷಿಯಾದ ಮೂಲ ನಿವಾಸಿಗಳು ಭಾರತೀಯ ವಿಧಿವಿಧಾನಗಳನ್ನು ಅನುಸರಿಸುತ್ತಾರೆ. ಪ್ರಕೃತಿ ಪೂಜೆ ಹಾಗೂ ಪಿತೃ ಪೂಜೆಗಳು ಅವುಗಳಲ್ಲಿ ಮುಖ್ಯವಾದವು.
 • ಜಾವಾ ಭಾಷೆಯಲ್ಲಿರುವ ಪ್ರಾಚೀನ ತಂತು ಪಂಗೆಲರನ್ ಕಥಾ ಪುಸ್ತಕದ ತುಂಬೆಲ್ಲ ಸಂಸ್ಕೃತ ಪದಗಳು, ಭಾರತೀಯ ದೇವತೆಗಳ ಹೆಸರು ಹಾಗೂ ಹಿಂದೂ ರಿವಾಜುಗಳು ಢಾಳಾಗಿ ಕಂಡುಬರುತ್ತವೆ.
 • ಒಂದು ಸಾವಿರ ವರ್ಷಗಳಿಗಿಂತಲೂ ಪ್ರಾಚೀನವಾದ ಶಿವ ಲಿಂಗ, ಪಾರ್ವತಿ, ಗಣಪತಿ ಬ್ರಹ್ಮ ಹಾಗೂ ವಿಷ್ಣು ವಿಗ್ರಹಗಳು ಇಂಡೋನೇಷಿಯಾದಲ್ಲಿ ದೊರಕಿವೆ.
 • 5ನೇ ಶತಮಾನದ ಚೀನಾ ಯಾತ್ರಿ ಫಾ ಹಿಯಾನ್, ಇಂಡೋನೇಷಿಯಾದಲ್ಲಿ ಹಿಂದೂ ಧರ್ಮದ ಎರಡು ಶಾಖೆಗಳು ಬಹಳ ಪ್ರಭಾವಶಾಲಿಯಾಗಿದ್ದವೆಂದು ದಾಖಲಿಸಿದ್ದಾನೆ.
 • ಸಂಜಯ ಎಂಬ ಹಿಂದೂ ರಾಜನ ಹೊಲಿಂಗ್ (ಕಳಿಂಗ) ಸಾಮ್ರಾಜ್ಯವು ಅತ್ಯಂತ ಸಂಪದ್ಭರಿತ ರಾಜ್ಯವಾಗಿತ್ತೆಂದು ಎಂಟನೇ ಶತಮಾನದ ಚೀನೀ ಇತಿಹಾಸಕಾರರು ತಮ್ಮ ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ.
 • ಶ್ರೀವಿಜಯ, ಶೈಲೇಂದ್ರ, ಮಾತರಮ್, ಮಜಾಪಹಿತ್ ಹಾಗೂ ಕಳಿಂಗ ವಂಶಗಳು ಇಂಡೋನೇಷಿಯವನ್ನಾಳಿದ ಪ್ರಮುಖ ಹಿಂದೂ ರಾಜವಂಶಗಳು.
 • ಶೈಲೇಂದ್ರ ಸಾಮ್ರಾಜ್ಯವು ಹಿಂದೂ ಧರ್ಮದ ದಟ್ಟ ಪ್ರಭಾವಕ್ಕೊಳಗಾಗಿತ್ತು. ಈ ಸಾಮ್ರಾಜ್ಯದ ಉಛ್ರಾಯ ಕಾಲದಲ್ಲಿ ಹತ್ತಾರು ಪ್ರಮುಖ ದೇಗುಲಗಳು ನಿರ್ಮಾಣಗೊಂಡವು.
 • ಮಜಾಪಹಿತ್ ಸಾಮ್ರಾಜ್ಯವನ್ನು ಸೂರ್ಯವಂಶದ ಅರಸರು ಆಳಿದರು. ಮತ್ತು ಇದು ಸುಮಾತ್ರ ದ್ವೀಪದಿಂದ ಮನಿಲಾವರೆಗೆ ವಿಸ್ತಾರವಾಗಿ ಹರಡಿಕೊಂಡಿತ್ತು.
 • ಕೀರ್ತರಾಜಸ ಜಯವರ್ಧನ ಈ ವಂಶದ ಪ್ರಮುಖ ಅರಸನಾಗಿದ್ದು, ಹಿಂದೂ ಧರ್ಮ ಹಾಗೂ ಸಂಸ್ಕೃತ ಭಾಷೆಯ ವಿಸ್ತರಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದನು.
 • ಇಂಡೋನೇಷಿಯಾದ ಬಾಲಿ ದ್ವೀಪವು ತನ್ನ ದೇಶದಲ್ಲೇ ಅತಿ ಹೆಚ್ಚು ಸಂಖ್ಯೆಯ ಹಿಂದೂಗಳನ್ನು ಹೊಂದಿದೆ. ಈ ಪುಟ್ಟ ದ್ವೀಪದಲ್ಲಿ 17 ಹಿಂದೂ ದೇಗುಲಗಳಿರುವುದು ವಿಶೇಷ.
 • ಚಾಲ್ತಿಯಲ್ಲಿರುವ ಮಾ ಬೈಸಾಖಿಯ ದೇಗುಲವು ಇಂಡೋನೇಷಿಯಾದಲ್ಲೇ ಅತಿ ದೊಡ್ಡ ಹಿಂದೂ ದೇಗುಲವೆಂಬ ಮನ್ನಣೆ ಪಡೆದಿದೆ.
 • ಇಲ್ಲಿಯ ತೀರ್ಥ ಎಂಪುಲ ಪುರ ಎರಡು ಸಾವಿರ ವರ್ಷಗಳಷ್ಟು ಪುರಾತನವಾದದ್ದು. ಸಂಸ್ಕೃತದ ಪುರ ಬಾಲಿ ಭಾಷೆಯಲ್ಲಿ ದೇಗುಲ ಎಂಬ ಅರ್ಥ ಪಡೆದಿದೆ.
 • ಇಂಡೋನೇಷಿಯಾದ ಜಾವಾ ದ್ವೀಪದಲ್ಲಿ 15 ದೇಗುಲಗಳಿದ್ದು, ಸುಪ್ರಸಿದ್ಧ ಪ್ರಂಬನನ್ ಹಾಗೂ ಬೊರೊಬೊದುರ್ ದೇಗುಲಗಳು ಈ ಪಟ್ಟಿಯಲ್ಲಿವೆ.
 • ಜಾವಾ ಮತ್ತು ಸುಮಾತ್ರ ದ್ವೀಪಗಳಲ್ಲಿಯೂ ಪ್ರಮುಖ ದೇಗುಲಗಳಿದ್ದು ತಮ್ಮ ಪ್ರಾಚೀನತೆ ಹಾಗೂ ಕಲೆಗಾರಿಕೆಯಿಂದ ಗಮನ ಸೆಳೆಯುತ್ತವೆ.
 • ಬಾಲಿ ಮತ್ತು ಸುಮಾತ್ರ ದ್ವೀಪಗಳ ಹೆಸರು ನಮ್ಮ ಪುರಾಣಗಳಲ್ಲಿ ಮೇಲಿಂದ ಮೇಲೆ ಉಲ್ಲೇಖಗೊಂಡಿದ್ದು, ಬಾಲಿ ದ್ವೀಪವು ವಾನರನಾದ ವಾಲಿಯ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗುತ್ತದೆ.
 • ಜಾವಾ ದ್ವೀಪಕ್ಕೆ ಅಗಸ್ತ್ಯ ಋಷಿಗಳು ಭೇಟಿ ನೀಡಿದ್ದರ ಕುರಿತು ಸ್ಥಳ ಪುರಾಣಗಳ ಉಲ್ಲೇಖವಿದೆ ಹಾಗೂ ಅಗಸ್ತ್ಯರ ಕುರಿತಾದ ಹಲವು ಕಥನಗಳು ಇಲ್ಲಿ ಜನಪ್ರಿಯವಾಗಿವೆ.
 • ಜಾವಾ ಭಾಷೆಯಲ್ಲಿರುವ ಅಗಸ್ತ್ಯ ಪರ್ವ ಎನ್ನುವ ಕೃತಿಯು ಭಾರತೀಯ ಪುರಾಣ, ಸಾಂಖ್ಯ ಹಾಗೂ ವೇದಾಂತಗಳ ಆಯ್ದ ಭಾಗಗಳ ಸಂಕಲನವಾಗಿದೆ.
 • ಬಾಲಿ ದ್ವೀಪದ ಜನರ ಮುಖ್ಯ ದೇವತೆ ಅಚಿಂತ್ಯ. ಇಲ್ಲಿನ ಜನರು ತಮ್ಮದು ಆಗಮ ಹಿಂದೂ ಧರ್ಮ ಎಂದು ಹೇಳಿಕೊಳ್ಳುತ್ತಾರೆ.
 • ಆಗಮ ಹಿಂದೂ ಧರ್ಮ ಮುಖ್ಯವಾಗಿ ವೇದೋಪನಿಷತ್ತುಗಳನ್ನು ಆಧರಿಸಿದ್ದಾಗಿದೆ. ಇಂಡೋನೇಷಿಯಾದ ಹಿಂದೂಗಳು ತಮ್ಮನ್ನು ಶುದ್ಧ ಹಿಂದೂಗಳೆಂದು ಕರೆದುಕೊಳ್ಳುತ್ತಾರೆ.
 • ಇವರು ಏಕದೇವೋಪಾಸನೆಯ ಪ್ರತಿಪಾದಕರಾಗಿದ್ದು, ಈ ಚಿಂತನೆಯನ್ನು ಇದಾ ಸಂಗ್‌ಯಂಗ್ ವಿಧಿವಾಸ ಎಂದು ಕರೆಯುತ್ತಾರೆ.
 • ಇಲ್ಲಿನ ಹಿಂದೂಗಳು ಎಲ್ಲ ದೇವದೇವತೆಗಳೂ ಅಚಿಂತ್ಯನ ಅವತಾರಗಳೇ ಎಂದು ನಂಬುತ್ತಾರೆ. ಸಾಂಗ್ ಹ್ಯಾಂಗ್ ಅಚಿಂತ್ಯ ಅನ್ನುವ ಘೋಷಣೆ ಇದನ್ನು ಸಾರುತ್ತದೆ.
 • ಶಿವನನ್ನು ಇವರು ಬತರ ಗುರು ಹಾಗೂ ಮಹಾರಾಜ ದೇವ ಎನ್ನುವ ಹೆಸರುಗಳಿಂದ ಕರೆಯುತ್ತಾರೆ. ಉಳಿದಂತೆ ಸರಸ್ವತಿ ಇವರ ಮೆಚ್ಚಿನ ದೇವತೆ.
 • ರಾಮಾಯಣ ಹಾಗೂ ಮಹಾಭಾರತ ಕಥನಗಳನ್ನು ಛಾಯಾ ಗೊಂಬೆಯಾಟದ ಮೂಲಕ ಪ್ರದರ್ಶಿಸುವುದು ಈ ದೇಶದ ಪ್ರಾಚೀನ ಕಲಾಪ್ರಕಾರಗಳಲ್ಲಿ ಒಂದಾಗಿದೆ.
   

Leave a Reply