ಈಜಿಪ್ಟ್ – ಗ್ರೀಕ್

ಜಗದ್ಗುರು ಭಾರತ - 0 Comment
Issue Date : 30.04.2015

 •  ಅಮುನ್, ತಲೆಯ ಮೇಲೆರಡು ಗರಿಗಳನ್ನು ಹೊಂದಿರುವ ನೀಲಿ ಚರ್ಮದ ದೇವತೆ. ಈತ ಜನಸಾಮಾನ್ಯರ ಜೊತೆ ಇರುತ್ತಿದ್ದ ಸರಳ ಹೃದಯಿ.
 •  ಅಮುನ್, ಈಜಿಪ್ಷಿಯನ್ನರಿಗೆ ಪಾಲಿಗೆ ಮಹಾವಿಷ್ಣುವಿನಂತೆ ದೇವಾಧಿದೇವ. ಜಗನ್ನಿಯಾಮಕನೂ ನಿಯಂತ್ರಕನೂ ಆಗಿರುವನು.
 •  ಈಜಿಪ್ಷಿಯನ್ನರಿಗೆ ನಮ್ಮ ದೇವಗಂಗೆಯಷ್ಟೇ ಮಹತ್ವದ ನೈಲ್ ನದಿ ಹುಟ್ಟುವುದು ಅಮುನ್ ದೇವನ ಪಾದಗಳ ತುದಿಯಲ್ಲಿ.
 •  ಈಜಿಪ್ಷಿಯನ್ ಸೂರ್ಯ ದೇವತೆ ರಾನೊಡನೆ ಸಮೀಕರಿಸಿ ಅಮುನ್‌ನನ್ನು ಅಮುನ್ ರಾ ಎಂದೂ ಕರೆಯಲಾಗುತ್ತದೆ. ಇದು ಮೂಲತಃ ನಮ್ಮ ಸೂರ್ಯ ನಾರಾಯಣನ ಕಲ್ಪನೆ.
 •  ಕರ್‌ನಕ್‌ನಲ್ಲಿ ವರ್ಷಕ್ಕೊಮ್ಮೆ ನೈಲ್ ಪ್ರವಾಹದ ಅವಧಿಯಲ್ಲಿ ಇಪ್ಪತ್ತೆಂಟು ದಿನಗಳ ಅವಧಿಯ ತ್ರಿವಳಿ ಜಾತ್ರಾ ಉತ್ಸವ ನಡೆಯುತ್ತದೆ. ಇದು ಸಂಪೂರ್ಣವಾಗಿ ನಮ್ಮ ಜಗನ್ನಾಥ ರಥಯಾತ್ರೆಯ ವಿಧಿವಿಧಾನಗಳನ್ನೆ ಅನುಸರಿಸುತ್ತದೆ.
 •  ರಥಯಾತ್ರೆಯಲ್ಲಿ ಅಮುನ್ ಮತ್ತು ಆತನ ಪತ್ನಿ ಹಾಗೂ ಮಗನ ಮೂರ್ತಿಗಳ ಉತ್ಸವ ಮಾಡಲಾಗುತ್ತದೆ. ಇದಕ್ಕೆ ಒಪೆಟ್ ಉತ್ಸವ ಎಂಬ ಹೆಸರಿದೆ.
 •  ಕುಷಾನ ಅರಸರ ಮೂಲಕ ಈಜಿಪ್ತ್ ತಲುಪಿದ ಅಮುನ್ ದೇವತೆಯು, ಅನಂತರ ಈ ಪ್ರದೇಶದ ಸಾರ್ವಭೌಮನಾದನು ಎನ್ನುತ್ತದೆ ಈಜಿಪ್ತ್ ಪುರಾಣ. ಇದು ಸುಮಾರು ಕ್ರಿ.ಪೂ. ನಾಲ್ಕನೇ ಶತಮಾನದ ವಿದ್ಯಮಾನ.
 •  ಇಂದಿಗೂ ಕೆಲವು ಈಜಿಪ್ಷಿಯನ್ನರು ತಮ್ಮನ್ನು ಪಂಟ್ ಮೂಲದವರು ಎಂದು ಹೇಳಿಕೊಳ್ಳುತ್ತಾರೆ.
 •  ಭೌಗೋಳಿಕವಾಗಿ ಪಂಟ್, ಹಿಂದೂ ಮಹಾಸಾಗರದಲ್ಲಿನ ಒಂದು ದ್ವೀಪ. ಪ್ರಾಚೀನ ಭಾರತದ ಅಂಗಭಾಗ.
 •  ಯಾದವೀಕಲಹದ ನಂತರ ಕೃಷ್ಣನ ದ್ವಾರಕೆ ಮುಳುಗಡೆಯಾಗುವ ಸಂದರ್ಭದಲ್ಲಿ ಅಲ್ಲಿನ ಪ್ರಜೆಗಳು ಪಂಟ್ ದ್ವೀಪಕ್ಕೆ ವಲಸೆ ಹೋದರು ಎನ್ನಲಾಗುತ್ತದೆ.
 •  ಅರ್ಥತಃ ಪಂಟ್ ಎಂದರೆ ದೇವತೆಗಳ ಭೂಮಿ, ಪೂರ್ವಜರ ನಾಡು ಎಂದು. ಈಜಿಪ್ಷಿಯನ್ನರ ಪಾಲಿಗೆ ಭಾರತ ಏಕಕಾಲಕ್ಕೆ ಅವೆರಡೂ ಆಗಿತ್ತು.
 •  ಅನಂತರ ಪಶ್ಚಿಮ ದಿಕ್ಕಿಗೆ ಸಂಚರಿಸುತ್ತಾ ಈ ಭಾರತೀಯರು ಈಜಿಪ್ತನ್ನು ತಲುಪಿಕೊಂಡು ನೆಲೆಯೂರಿದರು.
 •  ಅವರು ತಮ್ಮ ಭಗವಂತ ಕೃಷ್ಣನನ್ನು ಅಲ್ಲಿಯ ಜನರಿಗೆ ಪರಿಚಯಿಸಿದರು ಮತ್ತು ಹೊಸ ಸಂಸ್ಕೃತಿಗೆ ನಾಂದಿ ಹಾಡಿದರು.
 •  ಈಜಿಪ್ಷಿಯನ್ನರ ಸರ್ವೋಚ್ಛ ದೇವತೆಯ ಮೂಲವೇ ಭಾರತ ಎಂದಾದ ಮೇಲೆ, ಅಲ್ಲಿಯ ಜನಾಂಗದ ಮೂಲನೆಲೆಯೂ ನಮ್ಮ ಹೆಮ್ಮೆಯ ನೆಲವೇ.
 •  ಅಮುನ್ ದೇವತೆ ಗ್ರೀಕ್ ನಾಗರಿಕತೆಯಲ್ಲಿ ಜಿಯುಸ್ ಅಮ್ಮೊನ್ ಆಗಿ ವಿಸ್ತರಿಸಿಕೊಂಡನು ಮತ್ತು ಅಲ್ಲಿಯ ಸಂಸ್ಕೃತಿಯಲ್ಲೂ ಮುಖ್ಯ ಭಾಗವಾದನು.
 •  ಗ್ರೀಕರೊಡನೆ ಭಾರತೀಯರ ನಂಟು ಪ್ರಪ್ರಾಚೀನ. ನಮ್ಮ ಪುರಾಣಗಳಲ್ಲಿ ಗ್ರೀಕರನ್ನು ಯವನರೆಂದು ಕರೆಯಲಾಗಿದೆ.
 •  ಕ್ರಿ.ಪೂ. 2ನೇ ಶತಮಾನದಲ್ಲಿ ಪತಂಜಲಿ ಮುನಿಯಿಂದ ರಚನೆಗೊಂಡ ಯುಗ ಪುರಾಣದ ಗಾರ್ಗಿ ಸಂಹಿತೆಯಲ್ಲಿ ಯವನರ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ.
 •  ಯವನರು ಅತಿಕ್ರಮಣ ಮಾಡುತ್ತ ತಮ್ಮ ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗಿದ್ದರು. ಆದರೆ ಅವರಿಗೆ ಗಾಂಧಾರವನ್ನು ದಾಟಿ ಭಾರತದ ಹೃದಯವನ್ನು ತಲುಪಲಾಗಲಿಲ್ಲ.
 •  ವಾಸ್ತವದಲ್ಲಿ ಗ್ರೀಸ್ ನಾಗರಿಕತೆಯ ಮೂಲ ಪುರುಷರು ಭಾರತೀಯರೇ ಆಗಿದ್ದರು. ಅವರನ್ನು ಇತಿಹಾಸವು ಗುರುತಿಸುವುದು ಇಂಡೋ – ಗ್ರೀಕ್ ಜನರು ಎಂತಲೇ.
 •  ಗ್ರೀಕ್ ಮಹಾಕಾವ್ಯ ಇಲಿಯಾಡ್‌ನ ಕಥೆಯ ಮೂಲಬೀಜ ನಮ್ಮ ರಾಮಾಯಣದಿಂದಲೇ ಆಯ್ದುಕೊಂಡಂತೆ ಇದೆ. ರಾಮಾಯಣದ ಕತೆಯನ್ನು ಅಲ್ಲಿಯ ಪ್ರಾದೇಶಿಕತೆಗೆ ಒಗ್ಗಿಸಿ ಪುನರ‌್ರಚಿಸಿದಂತೆ ತೋರುತ್ತದೆ.
 •  ಗ್ರೀಕ್ ತತ್ತ್ವಜ್ಞಾನಿ ಅರಿಸ್ಟಾಟಲ್ ಭಾರತವನ್ನು ಜ್ಞಾನದ ಕೇಂದ್ರವೆಂದು ಪರಿಗಣಿಸಿದ್ದ ಮತ್ತು ತನ್ನ ಶಿಷ್ಯರಿಗೆ ಭಾರತ ಯಾತ್ರೆ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದ.
 •  ಅಲೆಗ್ಸಾಂಡರ್ ಭಾರತಕ್ಕೆ ದಂಡಯಾತ್ರೆ ಹೊರಡುವೆನೆಂದಾಗ ಆತ ತನಗಾಗಿ ತರಲು ಹೇಳಿದ್ದು ಗಂಗೆಯ ಜಲ, ಭಾರತದ ಮಣ್ಣು ಮತ್ತು ಒಬ್ಬ ಸನ್ಯಾಸಿಯನ್ನು.
 •  ಗ್ರೀಕ್ ಗಣಿತಜ್ಞ ಪೈಥಾಗೊರಸ್ ಶಿಕ್ಷಣ ಪಡೆದಿದ್ದು ಭಾರತದಲ್ಲಿ. ಇಲ್ಲಿ ಕಲಿತ ಬೌದ್ಧಾಯನ ಸೂತ್ರವನ್ನೇ ಆತ ಪೈಥಾಗೊರಸ್ ಪ್ರಮೇಯವಾಗಿ ಪ್ರಚುರಪಡಿಸಿದ.
 •  ಕಲೆ, ಕತೆ, ಕಲಿಕೆಗಳಷ್ಟೇ ಅಲ್ಲದೆ, ಗ್ರೀಕರು ನಮ್ಮ ದೇವತೆಗಳ ಪರಿಕಲ್ಪನೆಯನ್ನೂ ಎರವಲು ಪಡೆದರು.
 •  ಗ್ರೀಕ್ ಪೌರಾಣಿಕ ದೇವತೆಗಳಲ್ಲಿ ಬಹುಪಾಲು ಭಾರತೀಯ ದೇವತೆಗಳ ಪ್ರಾದೇಶಿಕ ರೂಪವೇ ಆಗಿದೆ.
 •  ಪ್ರಸಿದ್ಧ ಇಂಡೋ ಗ್ರೀಕ್ ಸಾಮ್ರಾಟ ಮಿಲಿಂದನು ಭಾರತೀಯ ಚಿಂತನೆಗಳಿಂದ ಬಹಳ ಪ್ರಭಾವಿತನಾಗಿದ್ದ. ಬೌದ್ಧ ಗುರು ನಾಗಾರ್ಜುನನ ಶಿಷ್ಯತ್ವ ಸ್ವೀಕರಿಸಿದ್ದ ಮಿಲಿಂದ. ಆ ಧರ್ಮದ ಮಹಾಪೋಷಕನಾಗಿ ಪ್ರಚುರಪಡಿಸಿದ.

 

   

Leave a Reply