ಈಡನ್ ಗಾರ್ಡನ್ ನಲ್ಲಿ ಸಚಿನ್ ಮಯ!

ಕ್ರಿಕೆಟ್ - 0 Comment
Issue Date : 07.11.2013

ಸಚಿನ್ ಭಾವಚಿತ್ರದ ದೊಡ್ಡ ಕಟೌಟ್, ರಸ್ತೆಯುದ್ದಕ್ಕೂ ಸಚಿನ್ ಸಾಧನೆಯನ್ನು ಬಿಂಬಿಸುವ ಹಲವು ಭಿತ್ತಿ ಪತ್ರಗಳು, 199 ಬಲೂನ್ ಗಳನ್ನು ಗಾಳಿಯಲ್ಲಿ ಹಾರಿಸುವುದು, ಸಂಗೀತ ರಸಸಂಜೆ, ಹೆಲಿಕಾಪ್ಟರ್ ಮೂಲಕ ಸಚಿನ್ ಗೆ 199 ಗುಲಾಬಿ ಹೂವುಗಳಿಂದ ಪುಷ್ಪ ಗೌರವ, ಸಚಿನ್ ಮುಖವಾಡ ಅಭಿಮಾನಿಗಳಿಗೆ ನೀಡುವುದು ಇವೆಲ್ಲವೂ ಸ ಸಚಿನ್ ತೆಂಡೂಲ್ಕರ್ ರವರ 199 ನೇ ಟೆಸ್ಟ್ ನಡೆಯುವ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಸಚಿನ್ ಟೆಸ್ಟ್ ಹಬ್ಬದ ಚಿತ್ರಣ.

ಬುಧವಾರ ಈ ಕ್ರೀಡಾಂಗಣದಲ್ಲಿ ತಮ್ಮ ವಿದಾಯದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಡಲು ಕಣಕ್ಕಿಳಿದ ಸಚಿನ್ ಹಲವು ನೆನಪುಗಳನ್ನು ಮರುಕಳಿಸಿದರು.  ‘ಇಷ್ಟು ವರ್ಷ ನಮಗೆ ಮನರಂಜನೆ ನೀಡಿದ್ದಕ್ಕೆ ಧನ್ಯವಾದ ತೆಂಡೂಲ್ಕರ್ ‘ ಎಂಬ ಚುಟುಕು ಸಂದೇಶಗಳು ಈಡನ್ ಗಾರ್ಡನ್ಸ್ ಅಂಗಳದಲ್ಲಿರುವ ಸ್ಕೋರ್ ಬೋರ್ಡ್ ಮೇಲೆ ಬುಧವಾರ ಹರಿದಾಡುತ್ತಿದ್ದವು. ಈ ಪಂದ್ಯದಲ್ಲಿ ಎರಡು ಓವರ್ ಬೌಲ್ ಮಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.  ವಿಂಡೀಸ್ ತಂಡದ  ಶಿಲಿಂಗ್ ಪೋರ್ಡ್ ವಿಕೆಟ್ ಪಡೆದಾಗ ಸಚಿನ್ ಅವರು  ಚಿಕ್ಕ ಮಗುವಿನಂತೆ ಕುಣಿದಾಡಿದರು.

ಬಂಗಾಳ ಕ್ರಿಕೆಟ್ ಸಂಸ್ಥೆ ಬುಧವಾರ ತೆಂಡೂಲ್ಕರ್ ಗೆ ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಿತು.

   

Leave a Reply