ಊರ್ಧ್ವನಮಸ್ಕಾರಾಸನ

ಅಷ್ಟಾಂಗ ಯೋಗ - 0 Comment
Issue Date : 19.03.2014

ಸೂರ್ಯನಮಸ್ಕಾರದ ಎರಡನೇ ಸ್ಥಿತಿಯಲ್ಲಿ ಎರಡೂ ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ‘ಊರ್ಧ್ವ’ ಎಂದರೆ ಮೇಲೆ ಇರುತ್ತವೆ. ಆದ್ದರಿಂದಲೇ ಊರ್ಧ್ವನಮಸ್ಕಾರಾಸನವೆಂಬ ಹೆಸರು ಈ ಸ್ಥಿತಿಗೆ ಅನ್ವರ್ಥವಾಗಿದೆ.

ಮಾಡುವ ಕ್ರಮ:

1)   ಮೊದಲಿಗೆ ಎರಡೂ ಪಾದಗಳನ್ನು ಒಟ್ಟಿಗೆ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ಭೂಮಿಗೆ ಲಂಬವಾಗಿ ಮಂಡಿ ಚಿಪ್ಪುಗಳನ್ನು ಮೇಲಕ್ಕೆಳೆದು ನೇರವಾಗಿ ನಿಂತಿರಬೇಕು ( ಸ್ಥಿತಿ 1ರಂತೆ).

2)  ಅನಂತರ ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಾಯಿಸದೆ ಕೇವಲ ಕೈಗಳನ್ನು ನಮಸ್ಕಾರ ಮುದ್ರೆಯಲ್ಲೇ ಆದಷ್ಟೂ ಮೇಲಕ್ಕೆ ಆಕಾಶದೆಡೆಗೆ ಚಾಚಬೇಕು. ಹೀಗೆ ಚಾಚುತ್ತಾ ನಿಧಾನವಾಗಿ ಉಸಿರನ್ನೂ ಒಳಗೆ ತೆಗೆದುಕೊಳ್ಳಬೇಕು, ಮಂಡಿಚಿಪ್ಪನ್ನು ಎಳೆದಿರಬೇಕು. ಒಮ್ಮೆ ಚಿತ್ರದಲ್ಲಿರುವ ಸ್ಥಿತಿಯನ್ನು ತಲುಪಿದ ನಂತರ ಅದೇ ಭಂಗಿಯಲ್ಲಿದ್ದು ಸುಖವನ್ನು ಅನುಭವಿಸಬೇಕು. ಒಂದೊಂದು ಸ್ಥಿತಿಯಲ್ಲೂ ಆನಂದವನ್ನು ಕಾಣಬೇಕು. ಆದರೂ ಸಾಮನ್ಯವಾಗಿ ನಿಂತು ಎಲ್ಲ ಆಸನಗಳೂ ಕಷ್ಟಕರವೇ.

ಲಾಭಗಳು:

ಊರ್ಧ್ವನಮಸ್ಕಾರಾಸನದ ಅಭ್ಯಾಸದಿಂದ ಎದೆ ವಿಸ್ತಾರಗೊಳ್ಳುವುದು, ಬೆನ್ನು ಮತ್ತು ಭುಜಗಳ ಗಡಸುತನ ನಿವಾರಣೆಯಾಗುವುದು. ಹೊಟ್ಟೆ ತೆಳ್ಳಗಾಗುತ್ತದೆ. ದೀರ್ಘವಾದ ಉಸಿರಾಟಕ್ಕೆ ಇದು ಹೆಚ್ಚು ಸಹಕಾರಿ. ಹೊಟ್ಟೆಯ ಅನೇಕ ತೊಂದರೆಗಳು ದೂರವಾಗುತ್ತದೆ. ಯೋಗಾಭ್ಯಾಸಿಯು ಸ್ವಲ್ಪ ಉದ್ದ ಬೆಳೆಯಲೂ ಸಹಾಯಕಾರಿ. 

   

Leave a Reply