ಎಂಥ ಅಪರೂಪ ಈ ಚಿಟ್ಟೆ?

ಪ್ರಚಲಿತ - 0 Comment
Issue Date : 07.05.2015

ಚಿಟ್ಟೆಗಳ ಬದುಕು ಒಂದಷ್ಟು ದಿನದ್ದಾಗಿರಬಹುದು. ಆದರೆ ಅಷ್ಟೇ ದಿನ ಅವು ಬದು ಕುವ ರೀತಿ ಮಾತ್ರ ಆದರ್ಶಪ್ರಾಯ. ಬಣ್ಣ ಬಣ್ಣದ ರೆಕ್ಕೆ, ಆಕರ್ಷಕ ಚಿತ್ತಾರ ದೈವೀ ಸೃಷ್ಟಿಯ ವಿಸ್ಮಯ ದ ಬಗ್ಗೆ ಅಚ್ಚರಿ ಮೂಡಿಸುತ್ತದೆ. ತನ್ನ ಪಾಡಿಗೆ ತಾನಿ ದ್ದುಕೊಂಡು ಹೂವಿನ ಮಕರಂದ ಹೀರಿ, ಬದುಕು ನಡೆಸುವ ಚಿಟ್ಟೆಗಳನ್ನು ಇಷ್ಟಪಡದವರ‌್ಯಾರು? ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಚಿಟ್ಟೆ ಆಕರ್ಷಣೆಯ ಕೇಂದ್ರಬಿಂದುವೇ.
ಚಿಟ್ಟೆಗಳಲ್ಲಿ ಸಾಕಷ್ಟು ಪ್ರಭೇದಗಳಿವೆ. ಅವುಗಳಲ್ಲಿ ಹಲವು ಇಂದಿಗೂ ಗುರುತಿಗೆ ಸಿಕ್ಕಿಲ್ಲದಿರಬಹುದು. ಏಕೆಂದರೆ ಇಂದಿಗೂ ಹಲವೆಡೆ ಹೊಸ ಹೊಸ ಪ್ರಭೇದದ ಚಿಟ್ಟೆಗಳು ಪತ್ತೆಯಾಗುತ್ತಲೇ ಇವೆ. ಇದಕ್ಕೆ ತಾಜಾ ಸೇರ್ಪಡೆ ಸ್ಲೇಟ್ ಅವ್ಲೆಟ್ ಎಂಬ ಚಿಟ್ಟೆ. ಮಣಿಪುರದ ಯಾಂಗೌಪಾಂಕ್ಪಿ ವನ್ಯಜೀವಿ ಸಂಗ್ರಹಾಲಯದಲ್ಲಿ ಕಾಣಿಸಿಕೊಂಡ ಈ ಚಿಟ್ಟೆ ಭಾರತದಲ್ಲೆಲ್ಲೂ ಇದುವರೆಗೂ ಪತ್ತೆಯಾಗಿರಲಿಲ್ಲ ಎಂಬುದು ವಿಶೇಷ.
ಇತ್ತೀಚೆಗೆ ತೈಲಾಂಡ್‌ನಿಂದ ಈ ಪ್ರಭೇದದ ಚಿಟ್ಟೆಯನ್ನು ತರಲಾಗಿದೆ ಎಂದು ಸಂಗ್ರಹಾಲಯದ ತಜ್ಞರು ತಿಳಿಸಿದ್ದಾರೆ. ಸದ್ಯಕ್ಕೆ ಸ್ಲೇಟ್ ಅವ್ಲೆಟ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಇತರ ತಳಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ತಜ್ಞರು ಚಿಂತಿಸುತ್ತಿದ್ದಾರೆ. ಛಾಯಾಗ್ರಾಹಕರ ಗುರಿಯಂತೂ ಈ ಚಿಟ್ಟೆಯನ್ನು ಬಿಟ್ಟು ಕದಲುತ್ತಿಲ್ಲ. ತನಗಿಲ್ಲಿ ಪ್ರೈವೆಸಿಯೇ ಇಲ್ಲವೆಂದು ಸ್ಲೇಟ್ ಅವ್ಲೆಟ್ ದೂರು ನೀಡಿದರೂ ಅಚ್ಚರಿಯೇನಿಲ್ಲ!

   

Leave a Reply