ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಣೆ

ಅ.ಭಾ.ವಿ.ಪ - 0 Comment
Issue Date : 30.11.2013

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೂತನ ರಾಷ್ಟ್ರೀಯ ಅಧ್ಯಕ್ಞರಾಗಿ ಹೈದರಾಬಾದಿನ  ಪ್ರೊ. ಮುರಳಿ ಮನೋಹರ್ ಮತ್ತು ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ಬೊರಿಕಾರ್ ಅವರು 2013-14ನೇ ಸಾಲಿಗೆ ಆಯ್ಕೆಯಾಗಿದ್ದಾರೆ.  


                                    ಪ್ರೊ.ಪಿ.ಮುರಳಿ ಮನೋಹರ್              ಶ್ರೀಹರಿ ಬೋರಿಕರ್

ಮುರಳಿ ಮನೋಹರ್ ಅವರು ಮೆಹಬೂಬ್ ನಗರ ಜಿಲ್ಲೆಯ ಜಡ್ ಚರ್ಲಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, 1979ರಿಂದ ವಿದ್ಯಾರ್ಥಿ ಪರಿಷತ್‍ನ ಸಕ್ರಿಯ ಕಾರ್ಯಕರ್ತರು.  ಸಾಮಾಜಿಕ ಸಾಮರಸ್ಯ ವಿಷಯದ ಕುರಿತು ಆಳವಾದ ಅಧ್ಯಯನ ಉಳ್ಳವರು.  2007ರಲ್ಲಿ ಆಂಧ್ರ ಸರ್ಕಾರ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿತ್ತು.  1987ರಲ್ಲಿ ಪಾಲಮರ್‍ನ ಹಸಿವಿನ ಸಮಸ್ಯೆ ವಿರುದ್ಧ ‘ಹಸಿವಿನ ಯಾತ್ರೆ’ ನಡೆಸಿದ್ದರು.  1992-95ರ ಅವಧಿಯಲ್ಲಿ ಪ್ರಜಾಸಂಘರ್ಷಣ್ ಸಮಿತಿ ಅಡಿಯಲ್ಲಿ ಪಾಲಮರ್ ನ ನೀರಿನ ಸಮಸ್ಯೆ ಪರಿಹಾರಕ್ಕೆ ಸಾಮೂಹಿಕ ಆಂದೋಲನ ನಡೆಸಿ ಯಶಸ್ವಿಯಾಗಿದ್ದರು.  2002ರಿಂದ 2008ರವರೆಗೆ ಅವರು ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಮೂಲತಃ  ನಾಗಪುರದವರಾದ ಶ್ರೀಹರಿ ಬೋರಿಕರ್ 1990ರಿಂದ ಪರಿಷತ್ತಿನ ಸಕ್ರಿಯ ಕಾರ್ಯಕರ್ತರು, ವಿದ್ಯಾರ್ಥಿ ದೆಸೆಯಿಂದಲೂ ವಿವಿಧ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು.  ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ವಿಚಾರದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ.  ಈಶಾನ್ಯ ಭಾಗದ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.

 ಚುನಾಯಿತ ಅಧಿಕಾರಿಗಳ ಕಾರ್ಯ ಅವಧಿ ಒಂದು ವರ್ಷವಿದ್ದು, ಉತ್ತರ ಪ್ರದೇಶದ ಕಾಶಿಯಲ್ಲಿ ನಂ.30ರಂದು ನಡೆಯುವ ‘ಎಬಿವಿಪಿ ರಾಷ್ಟ್ರೀಯ ಸಭೆ‘ಯಲ್ಲಿ ತಮ್ಮ ಜವಾಬ್ದಾರಿಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.

   

Leave a Reply