ಎರಡೂವರೆ ಶತಮಾನದ ದೇವಾಲಯಕ್ಕೆ ಹೊಸ ಹೊಳಪು!

ಪ್ರವಾಸ - 0 Comment
Issue Date : 21.10.2013

ಹಿಮಾಚಲ ಪ್ರದೇಶದ ಚೆಯ್ನುಯಿಯ 250 ವರ್ಷಗಳಷ್ಟು ಹಳೆಯ ಹಿಡಿಂಬಾ ದೇವಿ ದೇವಾಲಯಕ್ಕೆ ಹೊಸ ರೂಪವನ್ನು ನೀಡಲಾಗಿದೆ. ಹಿಡಿಂಬಾ ದೇವಿಯನ್ನು ಪೂಜಿಸುವ ಅಪರೂಪದ ದೇವಾಲಯ ಇದಾಗಿದ್ದು, ಇದರ ನಿರ್ಮಾಣದಲ್ಲಿ ಉಪಯೋಗಿಸಿದ್ದ ಮರದ ತುಂಡುಗಳು ಹಾಳಾಗಿದ್ದರಿಂದ ಇವನ್ನು ಕೆಡವಿ ಹೊಸರೂಪ ನೀಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ದೇವಾಲಯವನ್ನು ಕೆಡವಿ ಒಂದೂವರೆವರ್ಷದೊಳಗೆ ಮರುನಿರ್ಮಾಣಮಾಡಲಾಗಿದ್ದು, ಹೊಸ ದೇವಾಲಯವು ಹಳೆಯದರ ಪ್ರತಿರೂಪವೇ ಆಗಿದೆ. ಯಾವುದೇ ಬದಲಾವಣೆಗಳೂ ಇಲ್ಲ. ದೇವಾಲಯವು ಹಿಂದು ಸಂಸ್ಕೃತಿಯ ಗತವೈಭವವನ್ನು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದೆ. ದಸರಾ ಸಮಯದಲ್ಲಿ ಇದರ ಮರುನಿರ್ಮಾಣ ಸಂಪೂರ್ಣವಾಗಿ, ನವರಾತ್ರಿಗೂ ಮೊದಲು ಇದನ್ನು ಪುನಃ ತೆರೆಯುವಂತೆ ಮೊದಲೇ ಯೋಜನೆ ನಿಗದಿಯಾಗಿತ್ತು. ಆದ್ದರಿಂದ ಈ ಬಾರಿಯ ದಸರಾ ಇಲ್ಲಿನ ಜನರಿಗೆ ಹೊಸ ಹುರುಪನ್ನು ನೀಡಿದೆ. ಈ ದೇವಾಲಯವನ್ನು 1553ರಲ್ಲೇ ನಿರ್ಮಿಸಲಾಗಿತ್ತು ಎಂಬ ಮಾತುಗಳೂ ಕೇಳಿಬರುತ್ತವೆ. ಪಾಂಡವರಲ್ಲಿ ಪ್ರಮುಖನಾದ ಭೀಮನ ಪತ್ನಿಯಾದ ಹಿಡಿಂಬಾ ಅಸುರ ಕುಲದವಳೇ ಆದರೂ ಭೀಮನ ಮನಸ್ಸನ್ನು ಗೆದ್ದವಳು. ಆದ್ದರಿಂದಲೇ ಆಕೆಯನ್ನು ದೇವಿಯೆಂದು ಪೂಜಿಸುವ ಪರಿಪಾಠ ಭಾರತದ ಕೆಲ ದೇವಾಲಯಗಳಲ್ಲಿದೆ. ಅಂಥ ಅಪರೂಪದ ದೇವಾಲಯಗಳಲ್ಲಿ ಹಿಡಿಂಬಾ ದೇವಿ ದೇವಾಲಯ ಕೂಡ ಒಂದು.

   

Leave a Reply