ಎಲ್ಲವೂ ಆಹಾರವಲ್ಲ, ಆಹಾರವೆಲ್ಲಾ ಆರೋಗ್ಯವಲ್ಲ ‘ಆಹಾರ’ ಎಂಬುದಕ್ಕಿದು ಸನಾತನ ಅರ್ಥ..!!

ಲೇಖನಗಳು - 0 Comment
Issue Date :

 

ನಾನು ಕಾಲೇಜಿನಿಂದ ಮನೆಗೆ ತೆರಳಬೇಕಾದರೆ ದಾರಿಬದಿಯಲ್ಲಿ ಒಂದು ಫಲಕವನ್ನು ನೇತುಹಾಕಿದ್ದರು. ಅದರಲ್ಲಿ ಅರ್ಥಪೂರ್ಣವಾದ ಒಂದು ಮಾತನ್ನು ಉಲ್ಲೇಖಿಸಲಾಗಿತ್ತು. ಬಹುಶಃ ಇವತ್ತಿನ ಪರಿಸ್ಥಿತಿಗೆ, ನಾವು ನಮ್ಮ ಜೀವನಶೈಲಿಯನ್ನು ಹಿರಿಯರು ಇಟ್ಟ ಮಾರ್ಗದರ್ಶನವನ್ನು ಮೀರಿ ಆಧುನಿಕ ರೀತಿಯಾಗಿ ರೂಪಿಸಿದ್ದೇವೆ ಎಂಬುದಾಗಿ ವಾದಿಸಿ, ಅಂತಿಮವಾಗಿ ನಮ್ಮ ಹಿರಿಯರು ಬದುಕುತ್ತಿದ್ದ ಕಾಲದ ಅಂತರಕ್ಕಿಂತ ಮುಂಚಿತವಾಗಿಯೇ ನಾವು ಅನಾರೋಗ್ಯಪೀಡಿತರಾಗಿ ಸಾಯುವುದನ್ನರಿತ, ಅದಕ್ಕೆ ಪ್ರಮುಖ ಕಾರಣವನ್ನು ಆ ವಾಕ್ಯ ತಿಳಿಸಿದಂತಿತ್ತು ಎಂಬುದು ಮಾತ್ರ ಸುಳ್ಳಲ್ಲ. ‘ಎಲ್ಲವೂ ಆಹಾರವಲ್ಲ, ಆಹಾರವೆಲ್ಲಾ ಆರೋಗ್ಯವಲ್ಲ’. ಇವತ್ತಿನ ದೈನಂದಿನ ಚಟುವಟಿಕೆಗಳನ್ನು ಗಮನಿಸುವಾಗ ಈ ವಾಕ್ಯವಾಸ್ತವತೆಯನ್ನು ಪ್ರತಿಧ್ವನಿಸುತ್ತದೆಂದೆನಿಸುತ್ತದೆ. ಅಷ್ಟರ ಮಟ್ಟಿಗೆ ಕಲುಷಿತವಾಗಿವೆ ನಮ್ಮ ಆಹಾರ ಮಾತ್ರವಲ್ಲ, ಆಹಾರವನ್ನು ಸೇವಿಸುವ ಪದ್ಧತಿ ಕೂಡ !!

ಪೌಷ್ಟಿಕಾಂಶದ ಕುರಿತಾದ ಅರಿವನ್ನು ಹಿಂದೂ  ಚಿಂತನೆಗಳು ಸದಾ ದಯಪಾಲಿಸುತ್ತಿದ್ದವು.  ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯದ ಗುಟ್ಟು ಆಹಾರ ಪದ್ಧತಿಗಳನ್ನು ಅವಲಂಬಿತವಾಗಿವೆ ಎಂಬುದನ್ನು  ನಂಬಿದ ಜನಾಂಗ ಸನಾತನ ಪರಂಪರೆಯ ಪ್ರಜೆಗಳು. ಒಂದು ಕಡೆ ತೈತ್ತಿರೀಯ ಉಪನಿಷತ್‌ನಲ್ಲಿ, ‘ಆಹಾರದಿಂದ … ಭೂಮಿಯ ಮೇಲೆ ವಾಸಿಸುವ ಜೀವಿಗಳು ಉತ್ಪಾದಿಸಲ್ಪಡುತ್ತವೆ; … ಆಹಾರದಿಂದ ಅವು ಬದುಕುತ್ತವೆ; … ಅವು ಅಂತಿಮವಾಗಿ ಹಾದು ಹೋಗುತ್ತವೆ … ನಿಜವಾಗಿ, ಆಹಾರವು ಎಲ್ಲಾ ಜೀವಿಗಳ ಮುಖ್ಯಸ್ಥ; ಇದನ್ನು ಪ್ಯಾನೇಸಿಯ ಎಂದು ಕರೆಯಲಾಗುತ್ತದೆ’ ಎನ್ನುತ್ತದೆ. ಪ್ಯಾನೇಸಿಯ ಅಂದರೆ  ಉತ್ತಮ ಜೀವನ ನಡೆಸಲು ರಾಮಬಾಣವೇ ಉತ್ತಮ ಆಹಾರ ಅನ್ನುವ ಅರ್ಥದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ಆಹಾರವು ಜೀವನವೇ ಎಂಬುದಾಗಿ ಗ್ರಂಥಗಳು ನಮಗೆ ಕಲಿಸುತ್ತವೆ. ಮಾನವ ದೇಹವು ನಾವು ತೆಗೆದುಕೊಳ್ಳುವ ಆಹಾರದಿಂದ ಮಾಡಲ್ಪಟ್ಟಿದೆ; ಮನಸ್ಸು ಕೂಡ ಸೂಕ್ಷ್ಮ ದೃಷ್ಟಿಕೋನದಿಂದ ಅವಲೋಕಿಸಿದರೆ ಆಹಾರದ ಪ್ರತಿರೂಪವೆಂದೇ ಹೇಳಬಹುದು. ಹೀಗಾಗಿ, ನಮ್ಮ ಆಹಾರವು ನಮ್ಮ ಚಿಂತನೆ ಸೇರಿದಂತೆ ನಮ್ಮ ಎಲ್ಲ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಇತ್ತೀಚೆಗೆ ಪಾಶ್ಚಾತ್ಯ ವಿಜ್ಞಾನವು ಈ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ, ‘ನಾವು ಏನನ್ನು ಸೇವಿಸುತ್ತೇವೋ ಅದೇ ರೀತಿಯಾದ ಬದುಕು ನಮ್ಮದಾಗುತ್ತವೆ‘. ಇದು ನವೀನ ಚಿಂತನೆಯಲ್ಲ. ಪ್ರತಿ ಬಾರಿಯೂ ನಾವು ಹೇಳುವಂತಹದ್ದೇ. ಆದರೂ ಮರೆತುಹೋಗಿದ್ದೇವೆ ಅಷ್ಟೇ..!!

 ಹಿಂದೂಗಳಿಗೆ, ತಮ್ಮ ದೈನಂದಿನ ಜೀವನವು ಧಾರ್ಮಿಕ ನಂಬಿಕೆಗಳು ಮತ್ತು ಬೋಧನೆಗಳೊಂದಿಗೆ ನಿಕಟ ಸಂಬಂಧವಿದೆ.  ಆಹಾರವನ್ನು ಎಷ್ಟರ ಮಟ್ಟಿಗೆ ಪವಿತ್ರವೆಂದು ಪರಿಗಣಿಸಲಾಗುತ್ತದೆಂದರೆ, ನೆಲದ ಮೇಲೆ ಬೀಳಿಸಿದ ಧಾನ್ಯವನ್ನು ಸಹ ನೆಲದಿಂದ ತೆಗೆದು ಹಾಕಲಾಗುತ್ತದೆ. ವೇದಗಳು  ಆಹಾರವನ್ನು ಸೇವಿಸುವುದು ಮಾತ್ರವಲ್ಲ, ಆರಾಧಿಸಬೇಕು ಎಂಬುದಾಗಿ ಹೇಳುತ್ತವೆ, ಏಕೆಂದರೆ ಅದು ಎಲ್ಲಾ ಬೋಧಕರ ಬಳಕೆಯನ್ನು ಶಕ್ತಗೊಳಿಸುತ್ತದೆ  ಮತ್ತು    ಸರಿಯಾದ ಹಾಗೂ ಸಮರ್ಪಕವಾದ ಆಹಾರದ ಮೂಲಕ ಎಲ್ಲಾ ಅಜ್ಞಾನವೂ ಅಂತ್ಯವಾಗಲಿವೆ ಎಂಬ ಚಿಂತನೆಯನ್ನು ನೀಡುತ್ತವೆ.

 ಆಹಾರವು ಜನರಲ್ಲಿ ಕೆಲವು ಬದಲಾವಣೆಗಳನ್ನು ತರಬಲ್ಲುದು.. ಈ ಬದಲಾವಣೆಗಳನ್ನು ಮೂರು ಗುಣಗಳಾಗಿ ವರ್ಗೀಕರಿಸಲಾಗಿದೆ  – ಸತ್ವ, ರಜಸ್ಸು ಮತ್ತು ತಮಸ್ಸು.  ಸಮಗ್ರ ಮತ್ತು ಸೂಕ್ಷ್ಮವಾದ ಮನಸ್ಸು, ಬುದ್ಧಿ ಮತ್ತು ಅಹಂ ಸೇರಿದಂತೆ  ಎಲ್ಲಾ ವಸ್ತುಗಳಲ್ಲೂ ವಿಭಿನ್ನ ಮಟ್ಟದಲ್ಲಿ ಇವು ಬೇರೂರಿವೆ. ಸತ್ವ ಗುಣವು ಒಂದು ಧಾರ್ಮಿಕ, ಸಹಾನುಭೂತಿ ಮತ್ತು ಒಳ್ಳೆಯ ನಡತೆಗೆ ಕಾರಣವಾದರೆ, ರಜೋಗುಣ ಒಬ್ಬ ಸಕ್ರಿಯ, ಶ್ರಮಶೀಲ, ಧೈರ್ಯಶಾಲಿ ಮತ್ತು ನಿರಂಕುಶವನ್ನಾಗಿಸುತ್ತದೆ. ತಮೋಗುಣ ಒಂದು ಅವ್ಯವಸ್ಥಿತ ಮತ್ತು ಅಪರಾಧ ವರ್ತನೆಗೆ ಕಾರಣವಾಗುತ್ತದೆ. ಹಾಲು ಮತ್ತು ಹಣ್ಣುಗಳಂತಹ ಸತ್ವಯುತ ಆಹಾರಗಳನ್ನು ಸದಾ ಇತರರಿಗೆ ಜ್ಞಾನವನ್ನು ನೀಡಬಯಸುವವರು, ಭಗವತ್ಪ್ರೀತ್ಯರ್ಥವಾಗಿ ಕಾರ್ಯ ಮಾಡುವವರು ಸಹಜವಾಗಿ ಸೇವಿಸುತ್ತಾರೆ. ಏಕೆಂದರೆ ಅವು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಉತ್ತಮ ಪಾತ್ರವನ್ನು ಉತ್ತೇಜಿಸುವಲ್ಲಿ ಸಹಕರಿಸಬಲ್ಲುದು. ರಜೋಗುಣಗಳನ್ನು ಹೊಂದಿದ  ಮಾಂಸದಂತಹ ಆಹಾರ, ಲಗತ್ತನ್ನು ಸೃಷ್ಟಿಸುತ್ತದೆ ಮತ್ತು ಯೋಧರಿಗೆ ಶಕ್ತಿಯನ್ನು ನೀಡುತ್ತದೆ. ಇತರ ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ಬೆಳ್ಳುಳ್ಳಿಯಂತಹ ತಾಮಸಿಕ ಆಹಾರವು ಸೋಮಾರಿತನವನ್ನು ಉಂಟುಮಾಡುತ್ತದೆಂದು ಭಾವಿಸಲಾಗಿದೆ. ಆದರೆ ಹಾಲುಣಿಸುವ ಮಹಿಳೆಯರಿಗೆ ವಿಶೇಷ ಸಂದರ್ಭಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

 ಹಿಂದೂ ಧರ್ಮ ಸಾಂಪ್ರದಾಯಿಕವಾಗಿ ಅಗತ್ಯಗಳ ಆಧಾರದ ಮೇಲೆ ಆಹಾರಗಳ ವಿನ್ಯಾಸವನ್ನು ಹಾಗೂ ಪದ್ಧತಿಯನ್ನು ರೂಪಿಸಿವೆ.ಆದರೆ ಸಾಮಾನ್ಯವಾಗಿ ಸಾತ್ವಿಕ ಆಹಾರಗಳ ಪ್ರಾಬಲ್ಯವು  ರಾಜಸಿಕ ಮತ್ತು ತಾಮಸಿಕ ಆಹಾರಗಳನ್ನು ಕಡಿಮೆ ಮಾಡುತ್ತದೆ.  ಇದು ವ್ಯಕ್ತಿಗಳಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗುತ್ತದೆ, ಇದರಿಂದಾಗಿ ಸಮಾಜವು ಅಪರಾಧ, ಜಗಳಗಳು, ದಾವೆಗಳು, ಇತ್ಯಾದಿಗಳ ದುಷ್ಪರಿಣಾಮಗಳಿಲ್ಲದೆ ಸಾಮರಸ್ಯದಿಂದ ಬಾಳಲು ಸಾಧ್ಯವಾಗುತ್ತದೆ ಎನ್ನುತ್ತವೆ. ಹಿಂದೂ ತತ್ತ್ವಸಿದ್ಧಾಂತಗಳು.

 ‘ಹಿಂದೂ ಔಷಧಿಗಳ ಪಿತಾಮಹ‘ ಎಂದೇ ಕರೆಯಲಾಗುತ್ತಿರುವ ಸುಶ್ರುತ ಕ್ರಿಸ್ತಪೂರ್ವ 600 ಯಲ್ಲಿ ಔಷಧಿ ಕುರಿತು ಸುಶ್ರುತ ಸಂಹಿತೆ ಎಂಬ ಬೃಹತ್ ಗ್ರಂಥವನ್ನು ಬರೆದಿದ್ದಾರೆ. ಅನೇಕ ರೋಗಗಳಿಗೆ ಕಾರಣಗಳು ಮತ್ತು ಅವುಗಳ ಚಿಕಿತ್ಸೆಗಳ ವಿಧಿ, ಶಸ್ತ್ರಚಿಕಿತ್ಸೆಯ ವಿಧಾನಗಳು, ಪೌಷ್ಟಿಕಾಂಶ ಇತ್ಯಾದಿಗಳನ್ನು ಅದು ಒಳಗೊಂಡಿದೆ. ಅವರು ಮಾನವ ದೇಹವನ್ನು ಮೂರು ವ್ಯವಸ್ಥೆಗಳಿಂದ ನಿಯಂತ್ರಿಸಲಾಗಿದೆ ಎನ್ನುತ್ತಾರೆ: ‘ವಾಯು’, ನರಮಂಡಲದ ವ್ಯವಸ್ಥೆ,  ‘ಪಿತ್ಥ’, ಜೀರ್ಣಕಾರಿ ವ್ಯವಸ್ಥೆ ಮತ್ತು ‘ಕಫ’, ಶ್ವಾಸಕೋಶ ವ್ಯವಸ್ಥೆ (ಮೂತ್ರಪಿಂಡಗಳು, ಚರ್ಮ, ಇತ್ಯಾದಿ ಸೇರಿದಂತೆ ವಿಸರ್ಜನಾ ವ್ಯವಸ್ಥೆಯನ್ನೂ ಸೇರಿಸಿ). ಈ ಮೂರು ವ್ಯವಸ್ಥೆಗಳಲ್ಲಿ ಸಮತೋಲನವನ್ನು ಕಾಪಾಡಿದರೆ ದೇಹವನ್ನು ರೋಗದಿಂದ ಮುಕ್ತವಾಗಿಸಬಹುದು. ನಾಡಿಗಳನ್ನು ಪರೀಕ್ಷಿಸುವ ಮೂಲಕ, ವೈದ್ಯರು ಅಥವಾ ಒಬ್ಬ ಅನುಭವಿ ಹಿರಿಯರು ಮೂರು ವ್ಯವಸ್ಥೆಗಳಲ್ಲಿ ಸಾಮಾನ್ಯವಾಗಿ ಏರುಪೇರಾಗಿದ್ದರೆ ಮರಳಿ ಸಮತೋಲನಕ್ಕೆ ತರಲು ನಿವಾರಿಸುವ ಆಹಾರವನ್ನು ಶಿಫಾರಸು ಮಾಡುತ್ತಾರೆ. ಹೀಗಾಗಿ, ಹಲವು ಸಂದರ್ಭಗಳಲ್ಲಿ ಔಷಧಿಗಳ ಪಾರ್ಶ್ವಪರಿಣಾಮಗಳ ನ್ಯೂನತೆಯಿಲ್ಲದೆಯೇ, ಸಾವಿರಾರು ವರ್ಷಗಳ ಹಿಂದೆ ಆರೋಗ್ಯ ನಿರ್ವಹಣೆಯ ಸರಳ, ಸಕಾಲಿಕ ಮತ್ತು ಪರಿಣಾಮಕಾರಿ ವ್ಯವಸ್ಥೆ ಅಸ್ತಿತ್ವದಲ್ಲಿತ್ತೆಂಬುದೇ ಒಂದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲ, ನಾವು ತಿಳಿಯಲೇಬೇಕಾದ ವಿಚಾರ ಕೂಡ. ಆ ಪದ್ಧತಿಗಳನ್ನು ದಿನನಿತ್ಯದ ಜೀವನದಲ್ಲಿ ನಿರಂತರವಾಗಿ ಬಳಸಲಾಗುತ್ತಿತ್ತು, ಒಂದು ಹೊತ್ತು ಆಹಾರವನ್ನು ಸೇವಿಸಿದ ತದನಂತರ, ಮುಂದಿನ ಊಟಕ್ಕೆ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಸರಿಪಡಿಸುವ ಕ್ರಮವನ್ನು ಕೂಡ ಕಲಿಸಿದೆ. ಪವಿತ್ರ ಕುರಾನ್ ಆಹಾರ ಪದ್ಧತಿಯ ಕುರಿತಾಗಿ, ‘ಹಿಂದಿನ ಊಟವು ಹೇಗೆ ಜೀರ್ಣವಾಗಿದೆಯೆಂದು ಪರಿಗಣಿಸಿದ ನಂತರ ಸರಿಯಾದ ಆಹಾರವನ್ನು ತೆಗೆದುಕೊಂಡರೆ ಯಾವುದೇ ಔಷಧಿಯ ಅಗತ್ಯವಿಲ್ಲ’ (ಶ್ಲೋಕ 942). ಎನ್ನುತ್ತದೆ.

ಹಿಂದೂ ದೃಷ್ಟಿಕೋನದಿಂದ ನೋಡಿದರೆ, ಆಹಾರ ಒಟ್ಟಾರೆ ದೇಹದ, ಮನಸ್ಸು, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಮಾಜದ ಭಾಗವಾಗಿ ಪರಿಣಮಿಸುತ್ತದೆ. ತಾಂತ್ರಿಕ ಮತ್ತು ವಿದೇಶಿ ಪ್ರಭಾವಗಳಿಂದಾಗಿ (ಉದಾಹರಣೆಗೆ ಕಾಫಿ, ಉತ್ತೇಜಕ ‘ಅನುಕೂಲತೆ’ ಆಹಾರಗಳು, ಮುಂತಾದ ಉತ್ತೇಜಕಗಳನ್ನು ತೆಗೆದುಕೊಳ್ಳುವಂತಹವು) ಆ ಮೌಲ್ಯಗಳಲ್ಲಿ ನಂಬಿಕೆಗಳನ್ನು ಕಳೆದುಕೊಂಡಿವೆಯಾದರೂ, ದೇಹ, ಆಹಾರ ಮತ್ತು ಔಷಧಿಗಳೊಂದಿಗೆ ವ್ಯವಹರಿಸುವಾಗ ಈ ಸನಾತನ ಪರಂಪರೆಯಲ್ಲಿ ಉಲ್ಲೇಖಿತವಾದ  ವಿಧಾನವು ವಾಸ್ತವ ಪ್ರಪಂಚಕ್ಕೂ ಅಗತ್ಯವಾದುದೇ ಎಂಬುದು ಮಾತ್ರ ಸ್ಫುಟ, ವಾಸ್ತವ.

ಕೃಪೆ : ಹಿಂದುಯಿಸಂ ಟುಡೇ.ಕಾಮ್

ಅನುವಾದ : ಜಯದೇವ ಹಿರಣ್ಯ

 

   

Leave a Reply