ಎಲ್ಲಾ ಮಾತೆಯರೂ ದುರ್ಗಾಮಾತೆಯಂತಾಗಬೇಕು: ಪೇಜಾವರಶ್ರೀ ಕರೆ

ಶಿವಮೊಗ್ಗ - 0 Comment
Issue Date : 03.02.2014

ಹಾದಿಗಲ್ಲು: ಮೋಸದ ಮತಾಂತರ, ಭಯೋತ್ಪಾದನೆ ಮಾಡುವ ಮತೀಯ ಶಕ್ತಿಗಳ ಆಕ್ರಮಣದಿಂದ ರಕ್ಷಣೆ ಪಡೆಯಲು ಎಲ್ಲ ಮಾತೆಯರೂ ದುರ್ಗಾ ಮಾತೆಯಂತಾಗಬೇಕು. ಭಾರತ ಮಾತೆಯಲ್ಲಿ ದುರ್ಗೆ, ಲಕ್ಷ್ಮೀ, ಸರಸ್ವತಿಯನ್ನು ಕಾಣಬೇಕೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ಕರೆ ನೀಡಿದರು.
ಇಲ್ಲಿನ ಕಾರಣಿಕ ಕ್ಷೇತ್ರದಲ್ಲಿ ನಡೆದ ಮಹಾಗಣಪತಿ ಯಾಗ, ಶತ ಚಂಡಿಕಾ ಯಾಗ, ನಾಗಮಂಡಲ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ನಾವು ಒಟ್ಟಾಗಿ ಎಲ್ಲ ಭೇದ ಮರೆತು ಸಂಸ್ಕೃತಿ ಹೀಗಳೆಯುವ ರಕ್ಕಸರನ್ನು ಜಯಿಸಲು ಸಂಘಟಿತ ಶಕ್ತಿ ನಿರ್ಮಿಸುವುದು ಕಾಲದ ಅಗತ್ಯ ಎಂದೂ ಅವರು ನುಡಿದರು.
ಯಜ್ಞಮಯ ಸಂಸ್ಕೃತಿ ನಮ್ಮದು. ಈಶ ಭಕ್ತಿ, ದೇಶಭಕ್ತಿ ಎರಡೂ ಮೇಳೈಸಿದ ಈ ಕಾರ್ಯಕ್ರಮದಿಂದ ನಮ್ಮ ದೇಶ ಶಕ್ತವಾಗುವುದೆಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥರು ನುಡಿದರು.
ಆರೆಸ್ಸೆಸ್‌ನ ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ವಿ.ನಾಗರಾಜ್ ಮಾತನಾಡಿ, ಮತಾಂತರ, ಭಯೋತ್ಪಾದನೆ, ಆತ್ಮಹೀನಾಯತೆ, ಅಸ್ಪೃಶ್ಯತೆ ವಿರುದ್ಧ ಜಾಗೃತರಾಗಬೇಕಾದ ಸಂದೇಶ ಈ ಯಜ್ಞದ್ದು ಎಂದರು. ವೇದಿಕೆಯಲ್ಲಿ ಗಾಯಕ ಹೊ.ನಾ.ರಾಘಣ್ಣ, ಹೆರ್ಗ ಹರಿಪ್ರಸಾದ್ ಭಟ್, ನಾಗ ಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗರು ಉಪಸ್ಥಿತರಿದ್ದರು.

   

Leave a Reply