ಒಗಟುಗಳ ಪರಿಚಯ

ಸ್ವದೇಶೀ ಕ್ರೀಡೆ - 0 Comment
Issue Date : 25.05.2015

ಈ ಬಾರಿಯ ಅಂಕಣದಲ್ಲಿ ಬುದ್ಧಿಗೆ ನೀಡುವ ವಿವರಣಾತ್ಮಕವಾದ ಒಗಟುಗಳ ಪರಿಚಯ ಮಾಡಿಕೊಳ್ಳೋಣ. ಕೆಲವೊಮ್ಮೆ ಉತ್ತರಗಳನ್ನು ಪಡೆಯಲು ತಿಣುಕಾಡಬೇಕಾಗಬಹುದು. ಆದರೂ ಬುದ್ಧಿವಂತರಿಗೆ ಇದು ಕ್ಲಿಷ್ಟಕರವಾಗೇನು ಇರಲಾರದು. ಪ್ರಯತ್ನಿಸಿ, ಉತ್ತರ ಸಿಗದಿದ್ದಲ್ಲಿ ಎಂದಿನಂತೆ ಉತ್ತರ ನೋಡಲು ಮುಂದಿನ ವಾರ ‘ವಿಕ್ರಮ’ ಓದಿ.
1. ‘ನ’ ಅದರ ಮೊದಲಲ್ಲಿ ಇದೆ. ‘ನ’ ಅದರ ಕೊನೆಯಲ್ಲಿ ಇದೆ. ಅದರ ಮಧ್ಯದಲ್ಲಿ ‘ಯ’ ಇದೆ. ನಿನಗೂ ಇದೆ. ನನಗೂ ಇದೆ. ಒಂದು ವೇಳೆ ತಿಳಿದಿದ್ದರೆ ಅದೇನೆಂದು ಹೇಳು?
2. ಕಪ್ಪು ಮುಖವುಳ್ಳದ್ದು ಅದರೆ ಹೆಣ್ಣು ಬೆಕ್ಕಲ್ಲ, ಎರಡು ನಾಲಿಗೆ ಉಳ್ಳದ್ದು ಆದರೆ ಹಾವು ಅಲ್ಲ. ಐದು ಜನ ಗಂಡಂದಿರನ್ನು ಉಳ್ಳದ್ದು ಆದರೆ ದ್ರೌಪದಿ ಅಲ್ಲ. ಯಾರು ಇದನ್ನು ತಿಳಿದಿದ್ದಾರೋ ಅವರು ಪಂಡಿತ.
3. ಮರದ ತುದಿಯಲ್ಲಿ ಹಣ್ಣು ಕಾಣಿಸುತ್ತದೆ. ಹಣ್ಣಿನ ತುದಿಯಲ್ಲಿ ಮರವು ಕಾಣಿಸುತ್ತದೆ. ‘ಅ’ ಅಕ್ಷರದಿಂದ ಆರಂಭವಾಗಿ ‘ಸ’ ಅಕ್ಷರದಿಂದ ಕೊನೆಗೊಳ್ಳುತ್ತದೆ. ಯಾರು ಇದನ್ನು ತಿಳಿದಿದ್ದಾರೋ ಅವರು ನಿಜವಾಗಲೂ ದಡ್ಡರಲ್ಲ.
4. ಒಂದೇ ಚಕ್ರ, ಆದರೆ ರಥಿಕನು ಸೂರ್ಯನಲ್ಲ. ಸಾರಥಿ ಭೂಮಿಯ ಮೇಲೆ ಕುಳಿತುಕೊಳ್ಳುತ್ತಾನೆ. ಅಗಸ್ತ್ಯನ ತಂದೆಯನ್ನು ಹುಟ್ಟಿಸುತ್ತಾನೆ. ಒಂದು ವೇಳೆ ಇದನ್ನು ತಿಳಿದಿದ್ದರೆ ತಕ್ಷಣ ಹೇಳಿ. ಹೆಚ್ಚು ಯೋಚಿಸಿದರೆ ಉತ್ತರ ಸಿಗದಿರಬಹುದು. (ಅಗಸ್ತ್ಯ ಮಹರ್ಷಿಯ ಜನ್ಮ ಕುಂಭದಲ್ಲಿ, ಸೂರ್ಯನ ರಥಕ್ಕೆ ಒಂದೇ ಚಕ್ರವೆಂದು ಪುರಾಣಗಳಲ್ಲಿ ಇದೆ).
5. ಒಬ್ಬ ಯಾಚಕ ರಾಜನ ಬಳಿ ಹೋಗಿ ‘‘ಮಹಾರಾಜ, ‘ದ’ ಮತ್ತು ‘ಪ’ಗಳ ನಡುವೆ ಏನು ಇದೆಯೋ, ಅದು ನಿನ್ನ ಬಳಿ ಇದೆ. ಅದು ನನ್ನ ಮನೆಯಲ್ಲಿ ಇಲ್ಲ. ಅದಕ್ಕಾಗಿ ನಾನು ಇಲ್ಲಿ ಬಂದಿದ್ದಾನೆ’’ ಎನ್ನುತ್ತಾನೆ. ಹಾಗಿದ್ದಲ್ಲಿ ಯಾಚಕ ಬೇಡಿದ್ದೇನು?
6. ಕುಂಬಾರನ ಮನೆಯಲ್ಲಿ ಅರ್ಧ ಇದೆ. ಅದರ ಉಳಿದ ಅರ್ಧ ಹಸ್ತಿನಾವತಿಯಲ್ಲಿ ಇದೆ. ಅದರ ಜೋಡಿ ಲಂಕೆಯಲ್ಲಿ ಇದೆ. ಯಾರು ಇದನ್ನು ತಿಳಿದಿದ್ದಾರೋ ಅವರು ಪಂಡಿತರು.
7. ಮರದ ತುದಿಯಲ್ಲಿದ್ದರೂ ಪಕ್ಷಿಗಳ ರಾಜನಲ್ಲ. ಮೂರು ಕಣ್ಣುಗಳು ಇದ್ದರೂ ಶಿವನಲ್ಲ. ಚರ್ಮದ ವಸ್ತ್ರ ಧರಿಸಿದ್ದರೂ ಯೋಗಿಯಲ್ಲ. ನೀರನ್ನು ಹೊಂದಿದ್ದರೂ ಕೊಡವಲ್ಲ, ಮೋಡವೂ ಅಲ್ಲ. ನಾನ್ಯಾರು?
8. ಹಕ್ಕಿ ಅಲ್ಲ, ಆದರೆ ಗಗನದಲ್ಲಿ ಹಾರುವುದು. ಬೇಗನೆ ಹೋಗುತ್ತದೆ, ಆದರೆ ಗಾಳಿ ಅಲ್ಲ. ಮೋಡವಲ್ಲ, ಆದರೆ ಭಾರವಾದದು. ಬಾಯಿ ಇಲ್ಲದಿದ್ದರೂ ತುಂಬಾ ಶಬ್ದ ಮಾಡುತ್ತದೆ ಇದೇನು?
9. ಎಲುಬುಗಳಿಲ್ಲ, ಶಿರಸ್ಸಿಲ್ಲ, ಕೈಗಳಿರುತ್ತದೆ, ಬೆರಳುಗಳು ಇರುವುದಿಲ್ಲ, ಪಾದಗಳು ಇಲ್ಲ. ಆದರೆ ಶರೀರರನ್ನು ಅಲುಗಿಸುತ್ತೇನೆ. ನನ್ನ ಹೆಸರು ಹೇಳಿ?
10. ಪಾದಗಳು ಇರದ್ದಿದ್ದರೂ ದೂರ ಹೋಗುತ್ತದೆ. ಅಕ್ಷರಗಳಿಂದ ಕೂಡಿದ್ದರೂ ಪಂಡಿತನಲ್ಲ, ಬಾಯಿ ಇಲ್ಲದಿದ್ದರೂ ಸ್ಪಷ್ಟವಾಗಿ ಬೋಧಿಸುತ್ತದೆ. ತಿಳಿದವರು ನಾನ್ಯಾರೆಂದು ಹೇಳಿ!
ಹಿಂದಿನ ವಾರದ ಒಗಟುಗಳ ಉತ್ತರ
\u3226?್ಟ (1) ಕೊಡೆ (2) ಬಾಳೆಹಣ್ಣು , ಖರ್ಚೂರ, ದ್ರಾಕ್ಷಿ, ಕಲ್ಲು ಸಕ್ಕರೆ

   

Leave a Reply