ಕನ್ಯಾಕುಮಾರಿ – ಭಾರತದ ಭೂಶಿರ

ಪ್ರವಾಸ - 0 Comment
Issue Date : 25.12.2013


ಕನ್ಯಾಕುಮಾರಿ ಭಾರತದ ದಕ್ಷಿಣ ಅಂಚಿನಲ್ಲಿ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳದಲ್ಲಿರುವ ಕ್ಷೇತ್ರ. ಇಲ್ಲಿಂದ ಕಾಣುವ ಸೂರ್ಯೋದಯ, ಸೂರ್ಯಾಸ್ಥಗಳ ದೃಶ್ಯ ರಮಣೀಯ, ಕಡಲ ತಡಿಯ ಮರಳು ರಾಶಿ ಮುತ್ತು ರತ್ನಗಳಂತೆ ಹೊಳೆಯುತ್ತಿರುತ್ತದೆ.  ಈ ಭೂಶಿರದಲ್ಲಿ ಸಮುದ್ರಕ್ಕೆ ಎದುರಾಗಿ ದಂಡೆಯ ಮರಳಿನ ಮೇಲೆ ಕುಳಿತು ದೃಷ್ಟಿ ಹರಿದಷ್ಟು ಹಾಯಿಸಿ ನಿರ್ಮಲ ಆಕಾಶ ಹಾಗೂ ಸಮುದ್ರದ ಅಲೆಗಳನ್ನು ವೀಕ್ಷಿಸಿ ಆನಂದಿಸುವುದು ಸುಯೋಗ ಎನ್ನಬಹುದು.ಕನ್ಯಾಕುಮಾರಿ ದೇವಾಲಯದಿಂದಾಗಿ ಈ ಊರಿಗೆ ಅದೇ ಹೆಸರು, ಮಾತೃ ತೀರ್ಥ, ಪಿತೃ ತೀರ್ಥ, ಗಾಯತ್ರಿ ತೀರ್ಥ ಹಾಗೂ ಸಾವಿತ್ರಿ ತೀರ್ಥಗಳಿವೆ.

ವಿವೇಕಾನಂದ  ರಾಕ್ ಮೆಮೋರಿಯಲ್ 

  ಭಾರತದ ದಕ್ಷಿಣದ ತುತ್ತತುದಿಯಲ್ಲಿ ಕನ್ಯಾಕುಮಾರಿಯಿಂದ ಸುಮಾರು 400 ಮೀಟರ್ ದೂರದಲ್ಲಿ ಹಿಂದೂ ಮಹಾಸಾಗರದಲ್ಲಿರುವ ಬಂಡೆಗಳ ಮೇಲೆ ವಿವೇಕಾನಂದ ರಾಕ್  ಮೆಮೋರಿಯಲ್ ನಿಂತಿದೆ.  1892ರಲ್ಲಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ  ಬಂಡೆಯ ಮೇಲೆ ಧ್ಯಾನಾಸಕ್ತರಾಗಿ ಕುಳಿತಿದ್ದರ ಸವಿ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.  ಈ ಸ್ಮಾರಕದಲ್ಲಿ ವಿವೇಕಾನಂದರ ಪೂರ್ಣಾಕಾರದ 2.2 ಮೀಟರ್ ಎತ್ತರದ ಕಂಚಿನ ವಿಗ್ರಹವಿದೆ.  ನೆಲಮಾಳಿಗೆಯಲ್ಲಿ ಧ್ಯಾನ ಮಂದಿರವಿದೆ.  ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಜೀವನ ಹಾಗೂ ಸಾಧನೆಗಳ ಬಗ್ಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವಿದೆ.  

ಕನ್ಯಾಕುಮಾರಿ ತೀರದಲ್ಲಿ ಮತ್ತೊಂದು ಬಂಡೆಯ ಮೇಲಿರುವ ತಮಿಳು ಮಹಾಕವಿ ತಿರುವಳ್ಳುವರ್ 133 ಅಡಿ ಕಾಂಕ್ರೀಟ್‍ನಲ್ಲಿ ನಿರ್ಮಿಸಿರುವ ಬೃಹತ್‍ ವಿಗ್ರಹವಿದೆ.  

ಶುಚೀಂದ್ರಂ

ಕನ್ಯಾಕುಮಾರಿಗೆ 13 ಕಿ.ಮೀ.ದೂರದಲ್ಲಿ ಶುಚೀಂದ್ರಂ ಇದೆ.  ಇಲ್ಲಿ 18 ಅಡಿ ಎತ್ತರದ ಬೃಹದಾಂಜನೇಯ ಮೂರ್ತಿ ಗಮನ ಸೆಳೆಯುತ್ತದೆ.  ಶಿವ ದೇವಾಲಯದಲ್ಲಿ ಸ್ಥಾಣುಮಲಯ ಎಂಬ ಲಿಂಗವಿದೆ.  

   

Leave a Reply