ಕಪಿಲ್ ದೇವ್ ಸಾಧನೆಗೆ ಬಿಸಿಸಿಐನ ಕರ್ನಲ್ ಸಿ.ಕೆ.ನಾಯ್ಡು ಜೀವಮಾನ ಪ್ರಶಸ್ತಿ

ಕ್ರಿಕೆಟ್ - 0 Comment
Issue Date :

ಭಾರತಕ್ಕೆ ಮೊದಲ ಏಕದಿನ ವಿಶ್ವಕಪ್ ತಂದುಕೊಟ್ಟ ಹಿರಿಯ ಕ್ರಿಕೆಟಿಗ ‘ಹರಿಯಾಣ ಹುರಿಕೇನ್’ ಎಂದು ಹೆಸರಾದ ಕಪಿಲ್ ದೇವ್ ಸಾಧನೆಗೆ ಬಿಸಿಸಿಐನ ಕರ್ನಲ್ ಸಿ.ಕೆ.ನಾಯ್ಡು ಜೀವಮಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಂದು ಡಿ.18 ರಂದು ಬಿಸಿಸಿಐ ಪ್ರಕಟಿಸಿದೆ. ಬಿಸಿಸಿಐ ಪ್ರಶಸ್ತಿ ಪತ್ರ, ಟ್ರೋಫಿ, ಹಾಗೂ 25 ಲಕ್ಷ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಇದನ್ನು ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು. ಎಂದು ಬಿಸಿಸಿಐ ಕಾರ್ಯದ‍ರ್ಶಿ ಸಂಜಯ ಪಟೇಲ್ ತಿಳಿಸಿದರು. ಆಯ್ಕೆ ಸಮಿತಿಯು ಬಿಸಿಸಿಐನ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರನ್ನೊಳಗೊಂಡಿತ್ತು.

ಕಪಿಲ್ ಅವರು ಪಡೆದ ಪ್ರಶಸ್ತಿಗಳು: ಅರ್ಜುನ್ ಪ್ರಶಸ್ತಿ, ಬಿಸಿಸಿಐ ನ ಕರ್ನಲ್ ಸಿ.ಕೆ.ನಾಯ್ಡು ಜೀವಮಾನ ಪ್ರಶಸ್ತಿ ಗಳಿಸಿದ್ದಾರೆ.

ಕಪಿಲ್ ದೇವ್ ರಾಮಲಾಲ್ ನಿಖಾಂಜ್ ಇವರು ಆಲ್ ರೌಂಡರ್ ಆಗಿದ್ದು ಭಾರತದ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರಲ್ಲದೇ 434 ವಿಕೆಟ್ ಸಂಪಾದಿಸಿದ್ದಾರೆ. ಟೆಸ್ಟ್ ನಲ್ಲಿ 5000 ರನ್ ಹಾಗೂ 400 ವಿಕೆಟ್ ಗಳಿಸಿದ ಮೊದಲ ಆಟಗಾರ ಎನ್ನುವ ಗರಿಮೆಗೆ ಪಾತ್ರರಾಗಿದ್ದಾರೆ. 1983 ರಲ್ಲಿ ನಡೆದ ವಿಶ್ವಕಪ್ ಫೈನಲ್ ನಲ್ಲಿ ಲಂಡನ್ ನಲ್ಲಿ ನಡೆದಾಗ ಅದರ ನಾಯಕತ್ವವನ್ನು ಕಪಿಲ್ ದೇವ ವಹಿಸಿದ್ದರು. ವೆಸ್ಟ್ ಇಂಡೀಸ್ ಎದುರಾಳಿ ತಂಡವಾಗಿತ್ತು.

 ಇವರು ನಿವೃತ್ತಿಯ ನಂತರ ಕೆಲಕಾಲ ಭಾರತ ತಂಡದ ಕೋಚ್ ಕೂಡ ಆಗಿದ್ದರು. ಆಯ್.ಸಿ.ಎಲ್. ಲೀಗ್ ಸ್ಥಾಪಿಸಿದ್ದರು. 2000ರಲ್ಲಿ ಇವರನ್ನು ವಿಸ್ಡನ್ ಶತಮಾನದ ಶ್ರೇಷ್ಠ ಆಟಗಾರ ಎಂದು ಕರೆದಿದ್ದರು.

ಸಮಾಜ ಸೇವೆ ಖುಷಿ ಎಂಬ ಸ್ವಯಂ ಸೇವಾ ಸಂಘಟನೆ ಸ್ಥಾಪಿಸಿ ಅದರ ಮೂಲಕ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕಪಿಲ್ ದೇವ್ 1983ರ ಭಾರತ ತಂಡದ ನಾಯಕರಾಗಿದ್ದರು. ಕ್ರಿಕೆಟ್ನ ಮತ್ತೊಬ್ಬ ದಂತ ಕಥೆಯಾದ ಸಚ್ಚಿನ್ ತೆಂಡೂಲ್ಕರ್ ಅವರಿಗೆ ಕಪಿಲ್ ದೇವ್  ಸ್ಪೂರ್ತಿಯಾಗಿದ್ದರು. ಕಪಿಲ್ ದೇವ್ ನಿವೃತ್ತಿಯ ನಂತರ ಗಾಲ್ಫ್ ಕ್ರೀಡೆಯ ಕಡೆಗೆ ತಮ್ಮ ಗಮನ ಹರಿಸಿದ್ದರು. ತಡವಾಗಿಯಾದರೂ ಅವರ ಪ್ರತಿಭೆಗೆ ಮನ್ನಣೆ ದೊರೆತಿರುವುದು ಸಂತಸದ ವಿಷಯ.

 

 

 

 

   

Leave a Reply