ಕರ್ನಾಟಕದ ಜೇನಿಗೆ ಜಾಗತಿಕ ಗೌರವ

ಲೇಖನಗಳು ; ಸಂದರ್ಶನಗಳು - 0 Comment
Issue Date :

ನೀವು ಒಬ್ಬ ಮಹಿಳೆಯಾಗಿ ಮನೆ ಹಾಗೂ ಉದ್ಯಮ ಎರಡನ್ನೂ ಹೇಗೆ ನಿಭಾಯಿಸುತ್ತೀರಿ ?
ಎಲ್ಲಾ ಹೆಂಗಸರಿಗೂ ಅದೊಂದು ಜನ್ಮತಃ ಬರುವ ಕಲೆ. ಅವರಿಗೆ ತಮ್ಮನ್ನು ತಾವು ಸಮಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವ ಗುಣ ಸ್ವಾಭಾವಿಕವಾಗಿ ಬರುತ್ತದೆ. ನಾವು ಮನೆ, ಉದ್ಯೋಗ, ಉದ್ಯಮ, ಸಮಾಜ ಯಾವುದರಲ್ಲೇ ಆದರೂ ಪೂರ್ಣ ಪ್ರಮಾಣದ ಮನಸ್ಸನ್ನು ತೊಡಗಿಸಿಕೊಂಡಾಗ ಎಲ್ಲವೂ ಸಾಧ್ಯವಾಗುತ್ತದೆ.
ನೀವು ಜೇನಿನ ವ್ಯಾಪಾರಕ್ಕೇ ತೊಡಗಿಸಿಕೊಳ್ಳಲು ಕಾರಣವೇನು ?
ಸುಮಾರು 10 ವರ್ಷದ ಹಿಂದೆ ನನ್ನ ಜೀವನದ ಮೂಲಾಧಾರವಾಗಿದ್ದ ತಂದೆಯ ಮರಣವಾದಾಗ ಒಂದೋ ತಾಯಿಯ ಆಧಾರ ಪಡೆದುಕೊಳ್ಳಬೇಕಿತ್ತು, ಇಲ್ಲಾ ನನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕಾಗಿತ್ತು, ನಾನು ಎರಡನೆಯದನ್ನು ಆರಿಸಿಕೊಂಡೆ. ಚಿಕ್ಕಂದಿನಿಂದಲೇ ಸಂಘದ ಸ್ವಯಂಸೇವಕ ತತ್ವಗಳು ನನ್ನ ಮೇಲೆ ಪರಿಣಾಮ ಉಂಟುಮಾಡಿದ್ದವು, ಸ್ವಯಂ ಉದ್ಯೋಗ ನನ್ನ ಸ್ವಾಭಾವಿಕ ಆಯ್ಕೆಯಾಯಿತು. ಹಳ್ಳಿಗಾಡಿನಲ್ಲೇ ಹುಟ್ಟಿ ಬೆಳೆದಿದ್ದು ಬೆಂಗಳೂರಂಥ ನಗರವನ್ನೇ ಕಂಡಿರದಿದ್ದ ನಾನು ಕಾಲೇಜು ಶಿಕ್ಷಣವನ್ನೂ ತೊರೆಯಬೇಕಾಯಿತು. ಆಗ ಅಂತರ್ಜಾಲ ವ್ಯವಸ್ಥೆ, ಸಾಮಾಜಿಕ ತಾಣಗಳ ಬಳಕೆ ನೆರವಿಗೆ ಬಂತು. ಅಲ್ಲಿ ನಡೆದ ಚರ್ಚೆಗಳು, ದೊರೆತ ಸಲಹೆಗಳು, ಮಾಹಿತಿಗಳಿಂದ ಸಹಾಯವಾಯಿತು. ಸಣ್ಣದಾಗಿ ಯಾವುದಾದರೂ ವ್ಯಾಪಾರೋದ್ಯಮ ಆರಂಭಿಸಲು ನಿರ್ಧರಿಸಿದೆ. ಆ ನಿರ್ಧಾರ ಆದಕೂಡಲೇ ಮನಸ್ಸಿಗೆ ಬಂದದ್ದೇ ಜೇನಿನ ವ್ಯಾಪಾರ, ಒಂದೊಮ್ಮೆ ಕೊಡಗಿನ ಜೇನಿಗೆ ವಿಶೇಷವಾದ ಸ್ಥಾನವಿತ್ತು. ಪೂನಾದ ಇಊಖ್ಕಐ ಸಂಸ್ಥೆಯನ್ನು ಸಂಪರ್ಕಿಸಿದೆ, ಅವರ ಸಲಹೆಗಳನ್ನೂ ಪಡೆದ ಮೇಲೆ ನನ್ನಲ್ಲಿದ್ದ ಉಳಿತಾಯ, ತಾಯಿಯವರ ಉಳಿತಾಯ ಹಾಗೂ ನಮ್ಮಿಬ್ಬರ ಒಡವೆಗಳನ್ನು ಅಡವಿಟ್ಟು ಸಂಸ್ಕರಣ ಘಟಕವನ್ನು ಸ್ಥಾಪಿಸಿದೆ.
ಕೊಡಗಿಗೂ ಜೇನಿಗೂ ಇರುವ ಮಧುರ ಅವಿನಾಭಾವ ಸಂಬಂಧದ ಬಗ್ಗೆ ಹೇಳಬಹುದೆ ?
15 ವರ್ಷದ ಹಿಂದೆ ಕೊಡಗಿನ ಜೇನುತುಪ್ಪಕ್ಕೆ ಅದೇ ಹೆಸರಿಟ್ಟು ಅದನ್ನು ಅಭಿಮಾನದಿಂದ ಮಾರುತ್ತಿದ್ದರು. ಅದಕ್ಕೆ ಕಾರಣ ಅಲ್ಲಿದ್ದ ಕಿತ್ತಳೆಬೆಳೆ ಹಾಗೂ ವೈವಿಧ್ಯಮಯ ಹೂಗಳ ಆಗರವು ದುಂಬಿಗಳನ್ನು ಬರಸೆಳೆದು ಜೇನುಕೃಷಿಗೆ ಬಹಳ ಅನುಕೂಲಕರ ವಾತಾವರಣವಿತ್ತು, ಈಗ ಅದೆಲ್ಲಾ ನೆನಪು ಮಾತ್ರ. ಥಾಯ್ಲ್ಯಾಂಡ್‌ನಿಂದ ಬಂದ ಸಾರ್ಕ್‌ಬ್ರೊಡ್ ಎಂಬ ವೈರಸ್ ಕಾರಣದಿಂದ ದುಂಬಿಗಳ ನಾಶವಾಯಿತು ಮಾತ್ರವಲ್ಲ ಕಿತ್ತಳೆಯೂ ದುಂಬಿಗಳ ಪರಾಗಸ್ಪರ್ಶ ಕಳೆದುಕೊಂಡು ರೋಗಗ್ರಸ್ಥವಾಯ್ತು. ಅಂದು ದೊರೆಯುತ್ತಿದ್ದ ಮಿಶ್ರ ಪರಾಗ ಜೇನಿನ ಸ್ವಾದ ನೆನಿಸಿಕೊಂಡರೆ ಇಂದಿಗೂ ನಾಲಿಗೆ ನೀರೂರುತ್ತದೆ ಅಷ್ಟು ಮಧುರವಾಗಿತ್ತು. ಆ ಹೆಸರು ಹೋಗಬಾರದೆಂದು ಶ್ರಮಿಸುತ್ತಿದ್ದೇನೆ, ನಮ್ಮ ಪೆಟ್ಟಿಗೆ ಜೇನಿನ ಒಂದು ಉತ್ತಮ ಜೇನಿಗೆ ಅದೇ ಹೆಸರನ್ನೇ ಇಟ್ಟಿದ್ದೇವೆ. ಪರಿಸ್ಥಿತಿಯನ್ನು ಸುಧಾರಿಸಲು ಅಲ್ಲೀಗ ಸಂಘಸಂಸ್ಥೆಗಳು ಶ್ರಮಿಸುತ್ತಿವೆ ಅವರೊಂದಿಗೆ ನಾನೂ ಕೈ ಜೋಡಿಸಿದ್ದೇನೆ.

ನಿಮ್ಮ-ಜೇನಿನ ಅನುಬಂಧದಲ್ಲಿ ಹೇಳಿಕೊಳ್ಳುಬಹುದಾದ ಮಧುರ ಮತ್ತು ಕಹಿಯಾದ ನೆನಪುಗಳನ್ನು ಹಂಚಿಕೊಳ್ಳುವಿರಾ ?
ಇಂದು ನನಗೆ ಪ್ರಸಿದ್ಧಿ ಏನೇ ಬಂದಿದ್ದರೂ, ಭಾರತದಲ್ಲಿ ಮಾತ್ರವಲ್ಲದೆ ಹೊರದೇಶಗಳಿಗೂ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದು ಜೇನುತುಪ್ಪದಿಂದ. ಕೃಷಿ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸಂಸ್ಥೆ ನಮ್ಮದಾಗಿದೆ. ಈ ಸಂಬಂಧದ ಕ್ಟೃಟಛ್ಠ್ಚಠಿಜಿಜಿಠಿ ಟ್ಛ ಅಜ್ಟಜ್ಚ್ಠ್ಝಿಠ್ಠ್ಟಿಛಿ ಜ್ಞಿ ಅಜಿ (ಏಷಿಯಾದಲ್ಲಿ ಕೃಷಿ ಉತ್ಪಾದನೆ) ಸಂಸ್ಥೆ 3 ತಿಂಗಳ ಹಿಂದೆ 18 ದೇಶಗಳು ಸೇರಿ ಒಂದು ವಿಚಾರ ಸಂಕಿರಣ ಏರ್ಪಡಿಸಿದ್ದರು. ಅದರಲ್ಲಿ ಸಂಪನ್ಮೂಲ ವ್ಯಕ್ತಿಗಳ ಪೈಕಿ ಮೂವರಲ್ಲಿ ಒಬ್ಬಳಾಗಿ ನನ್ನನ್ನು ಆಯ್ಕೆಮಾಡಿ ಆಹ್ವಾನಿಸಿದ್ದರು. ಎಂದಿಗೂ ಅಂಥ ವೇದಿಕೆಗಳನ್ನು ಹತ್ತಿದ ಅನುವವೇ ಇರಲಿಲ್ಲ ನನಗೆ, ಆದರೂ ನನ್ನ ಉಪನ್ಯಾಸದ ನಂತರ ಬರುತ್ತಿರುವ ಪ್ರತಿಕ್ರಿಯೆಗಳಿಂದ ಬಹಳ ಆನಂದ ಉಂಟಾಗುತ್ತಿದೆ. ಮತ್ತೆ ನನ್ನನ್ನು ಶ್ರೀಲಂಕಾದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸಂಪನ್ಮೂಲ ವ್ಯಕ್ತಿಯಾಗುವಂತೆ ಆಹ್ವಾನಿಸಿದ್ದಾರೆ.
ಭಾರತದಲ್ಲಿ ಉದ್ಯಮಗಳಿಗೆ ಕೊಡಮಾಡುವ ಅತ್ಯಂತ ಗೌರವದ ಇಘೆಆಇ ಪ್ರಶಸ್ತಿಗೆ ಮಂಡ್ಯದ ಪುಟ್ಟ ಹಳ್ಳಿಯ ನಮ್ಮ ಘಟಕವನ್ನು ಗುರುತಿಸಿ ಕಳೆದ ವರ್ಷ ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿರುವುದು ಹೆಮ್ಮೆ ಎನಿಸುತ್ತದೆ. ನಮ್ಮ ಬ್ರ್ಯಾಂಡ್ ಕೇಂದ್ರದ ಮಧ್ಯಮ ಕೈಗಾರಿಕಾ ಇಲಾಖೆಯ ರಾಷ್ಟ್ರೀಯ ಪ್ರಶಸ್ತಿಗೂ ಶಿಪಾರಸ್ಸು ಪಡೆದಿದೆ. 20-30 ವರ್ಷಗಳಿಂದಲೂ ಡೆಕೆನ್‌ಬರ್ಗ್, ಡಾರ್ಬೋನಂಥ ಜರ್ಮನಿ, ಪ್ರಾನ್ಸ್ ಇತ್ಯಾದಿ ವಿವಿಧ ಪರದೇಶಗಳ ಜೇನು ಬ್ರ್ಯಾಂಡ್ಗಳು ಏಕಸ್ವಾಮ್ಯತೆ ಸಾಧಿಸುತ್ತಾ ಬಂದಿದ್ದವು. ನಾವು ಆ ಏಕಸ್ವಾಮ್ಯತೆಯನ್ನು ಭಗ್ನಗೊಳಿಸಿ ಸ್ವದೇಶದ ಔನತ್ಯವನ್ನು ಸಾಧಿಸಿದ್ದೇವೆ. ಅದಕ್ಕಾಗಿಯೇ ಖಾದಿಗ್ರಾಮೋದ್ಯೋಗ ನಮಗೆ ರಾಷ್ಟ್ರೀಯ ಪ್ರಶಸ್ತಿಗೆ ಶಿಪಾರಸ್ಸು ಮಾಡಿದೆ.
ನೀವು ಕಹಿ ಘಟನೆಯನ್ನೂ ಕೇಳಿದಿರಿ. ಅದು ಯಾವತ್ತೂ ನಮ್ಮಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ. ಅದರಲ್ಲೂ ಉದ್ಯಮಜೀವನವೇ ಸಮಸ್ಯೆಗಳಿಂದ ತುಂಬಿಕೊಂಡಿರುತ್ತದೆ. ಅದು ನಿತ್ಯ ಹೋರಾಟಗಳ ಪರಂಪರೆ. ಕಚ್ಚಾವಸ್ತು ಸಂಗ್ರಹಣೆ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ, ಏಜೆಂಟರನ್ನು ನೇಮಿಸುವಲ್ಲಿ ಎಲ್ಲೆಡೆ ಸಮಸ್ಯೆಗಳು ಕಹಿಯನ್ನು ದಿನವೂ ಉಣಿಸುತ್ತಿರುತ್ತವೆ.
ಈ ಉದ್ಯಮಕ್ಕೆ ಬಂದಮೇಲೆ ನಾನು ಹೆಣ್ಣಾಗಿರುವುದರಿಂದ ಅನ್ಯಾಯವಾಯಿತು ಎಂದು ಅನಿಸಿದ್ದಿದೆಯೆ ?
ನಾವು ಹೆಂಗಸರು ಅಬಲೆಯರು ಅನ್ನೋದೆ ಒಂದು ಪೂರ್ವಾಗ್ರಹದ ಕಲ್ಪನೆ. ಇಂದು ಹೆಣ್ಣು ಎಲ್ಲದರಲ್ಲೂ ಸಮಾನತೆ ಬಯಸುತ್ತಾ ಹೋರಾಟಗಳಲ್ಲಿ ನಿರತಳಾಗಿದ್ದಾಳೆ ಎನ್ನುವಾಗ ಅದನ್ನು ಪಡೆದುಕೊಳ್ಳುವ ಯೋಗ್ಯತೆಗಳನ್ನೂ ಸಂಪಾದಿಸಿಕೊಳ್ಳಬೇಕು ಎಂಬುದನ್ನು ಮರೆಯುತ್ತಿದ್ದಾಳೆ. ಗಂಡಸರಿಗಿರುವಷ್ಟೇ ಸಮಸ್ಯೆಗಳು ಅಡೆತಡೆಗಳು ನಮಗೂ ಇವೆಯೇ ಹೊರತು ಸಮಸ್ಯೆಗಳಿಗೆ ಹೆಣ್ಣು ಎಂಬ ಹೊದಿಕೆ ಹೊದಿಸಿ ಮುಚ್ಚಿಟ್ಟರೆ ಪರಿಹಾರವಾಗುವುದಿಲ್ಲ, ಹೆಣ್ಣು ಎಂಬುದು ಸೋಲಿಗೆ ಒಂದು ನೆಪ ಆಗಬಾರದು.

ಸರಿ, ಹೆಣ್ಣಾಗಿದ್ದರಿಂದಲೇ ಲಾಭವಾಯಿತು ಎನಿಸಿದೆಯೆ?
ನಿಜ ಹೇಳಬೇಕೆಂದರೆ ಇದೀಗ ನಮ್ಮ ದೇಶದಲ್ಲಿ ಮಹಿಳೆಯರಿಗಾಗಿ ಹಲವಾರು ವಿಶೇಷ ಸವಲತ್ತುಗಳನ್ನು ನೀಡಲು ಸರ್ಕಾರ ಉತ್ಸುಕವಾಗಿದೆ. ಆದರೆ ನಾನು ಇಲ್ಲಿವರೆಗೆ ಯಾವುದೇ ಮಹಿಳಾ ವಿಶೇಷ ಸವಲತ್ತು ಪಡೆದಿಲ್ಲವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಅದರಿಂದಲೇ ಎಲ್ಲರೊಂದಿಗೆ ಸಮಾನವಾಗಿ ಸ್ಪರ್ಧಿಸಲು, ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಾ ಹೆಚ್ಚೆಚ್ಚು ಉತ್ತಮಗೊಳ್ಳಲು ಸಾಧ್ಯವಾಯಿತು. ಇಡೀ ಉದ್ಯಮದಲ್ಲಿ ಉನ್ನತಿಯನ್ನು ಸಾಧಿಸಲು ಪ್ರೇರಣೆಯಾಯಿತು. ಎಂದರೆ, ನಾವು ಅತ್ತೂ ಕರೆದು ಪಡೆಯದೆ, ಭಿಕ್ಷಾಟನೆ ಮಾಡದೆ ಅಪ್ಪಟ ಸಂಪೂರ್ಣ ಶ್ರಮಾಧಾರಿತ, ಬೆಲೆಗೆ ತಕ್ಕ ವಸ್ತು ನೀಡುವ ಯೋಗ್ಯ ನೇರ ವ್ಯಾಪಾರವನ್ನಷ್ಟೇ ಮಾಡುತ್ತಿದ್ದೇವೆ. ನಾವೀಗ ಖರೀದಿಸಿರುವ ಜಾಗದಲ್ಲಿಯೂ ಸಹ ಖಾದಿಗ್ರಾಮೋದ್ಯೋಗದ ಮಹಿಳಾ ಉತ್ತೇಜನದ ಯೋಜನೆಯಡಿ ಸ್ಥಾಪಿಸಿದ್ದ ರೋಗಗ್ರಸ್ಥ ಘಟಕವೇ ಇತ್ತು. ಮಹಿಳೆಯರಾಗಲಿ ಪುರುಷರಾಗಲಿ ಯಾರೇ ಆಗಿರಲಿ ಉತ್ತೇಜನ ಯೋಜನೆಗಳಲ್ಲಿ ಸುಲಭವಾಗಿ ತಾತ್ಕಾಲಿಕ ಲಾಭಗಳಿಸಬಹುದಾದ ಆಮಿಷಗಳಿಗೆ ಬಲಿಯಾಗಿ ಸರಿಯಾದ ತಯಾರಿ ನಡೆಸದೆ, ಅಗತ್ಯ ಶ್ರಮವಹಿಸದೆ, ಅದಕ್ಕೆ ಬೇಕಾಗುವ ಮಾನಸಿಕ ಸಿದ್ಧತೆಯಿಲ್ಲದೆ, ಸಮಾಜಕ್ಕೆ ಉಪಕಾರಿಯಾಗದೆ, ಸಮಾಜಕ್ಕೆ ಹೊರೆಯಾಗುವಂತೆ ಉದ್ಯಮದಲ್ಲಿ ತೊಡಗಿದರೆ ಯಶಸ್ವಿಯಾಗುವುದು ದೇಶಕ್ಕೆ ಕೀರ್ತಿ ತರುವುದು ಸಾಧ್ಯವಿಲ್ಲ. ಏನನ್ನಾದರೂ ಮಾಡುವ ಮೊದಲು ಸ್ವಂತ ಕಾಲಿನ ಮೇಲೆ ನಿಲ್ಲುವುದನ್ನು ರೂಢಿಸಿಕೊಳ್ಳಬೇಕು, ಸದೃಢವಾಗಿ ಹೆಜ್ಜೆ ಇಡುವುದನ್ನು ಕಲಿತು ನಂತರ ವೇಗ ವರ್ಧಿಸಿಕೊಳ್ಳುತ್ತಾ ಯಶಸ್ಸಿನ ಶಿಖರವೇರಿ ಕೂರಬೇಕು.

ನಿಮ್ಮ ಉದ್ಯಮದ ಆರಂಭದ ದಿನಗಳ ಬಗ್ಗೆ ಹೇಳಬಹುದೆ ?
ನನಗೆ ಉತ್ತಮ ಜೇನುತುಪ್ಪವನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆಗೆ ನೀಡಬೇಕೆಂಬ ಅಭಿಲಾಷೆ ಇತ್ತೇ ಹೊರತು ಅದನ್ನು ಹೇಗೆ ಮಾಡಬೇಕೆಂದು ತಿಳಿದಿರಲಿಲ್ಲ. ಮಾರ್ಗದರ್ಶನವೂ ಅನುಭವವೂ ಇರಲಿಲ್ಲ, ಆದ್ದರಿಂದ ತುಂಬಾ ಕಷ್ಟಪಟ್ಟೆ. ಸಂರಕ್ಷಿತ ವಾತಾವರಣದಲ್ಲಿ ಬೆಳೆದಿದ್ದವಳು ಏಕಾಂಗಿಯಾಗಿ ಘಟಕವನ್ನು ಸ್ಥಾಪಿಸಿದೆ. ಆಗಲೇ ನನಗನಿಸಿದ್ದು ಗ್ರಾಮೀಣ ಪ್ರದೇಶದಲ್ಲಿನ ನನ್ನಂಥ ಆಕಾಂಕ್ಷಿಗಳಿಗೆ ಸಹಾಯ ಮಾಡಬೇಕೆಂದು. ಅದಕ್ಕಾಗೆ ಗ್ರಾಮೀಣ ಯುವಕ ಯುವತಿಯರಿಗೆ ಪ್ರಾಶಸ್ತ್ಯ ನೀಡಿದೆ. ಆಗ ಡಾಬರ್ ಬ್ರಾಂಡ್ ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಸ್ಥಾಪನೆ ಆಗಿಬಿಟ್ಟಿತ್ತು. ನಾವು ಖಾಲಿಇರುವ ವಿಭಾಗಕ್ಕೆ ನುಗ್ಗಲು ಯೋಚಿಸಿ ವಿದೇಶಿ ಉತ್ಪನ್ನಗಳು ಮಾರಾಟವಾಗುತ್ತಿದ್ದ ಭಾರತೀಯ ಉಪಚಾರ ಉದ್ಯಮ (ಏಟಜಿಠಿಚ್ಝಜಿಠಿ ಐ್ಞಛ್ಠಠ್ಟಿ)ದಲ್ಲಿ ವಿದೇಶಿ ಬ್ರಾಂಡ್ಗಳೊಂದಿಗೆ ಸೆಣೆಸಿ ಮಾರುಕಟ್ಟೆಯನ್ನು ನಮ್ಮದಾಗಿಸಿಕೊಳ್ಳಲು ಅವರ ಮಟ್ಟಕ್ಕೂ ಮೀರಿದ ಗುಣಮಟ್ಟದ ಜೇನು ತಯಾರಿಸಲು ನಿರ್ಧರಿಸಿ ಅತ್ಯುತ್ತಮವಾದುದನ್ನೇ ನೀಡಿದೆ. ಮೊದಲಿಗೆ ಲೀ ಮೆರಿಡಿಯನ್ ಹೋಟೇಲಿನ ಪ್ರಧಾನ ಬಾಣಸಿಗ ವಿಜಯಭಾಸ್ಕರನ್ ಅವರಿಗೆ ನಮ್ಮ ಜೇನು ತುಪ್ಪದ ಮಾದರಿ ನೀಡಿದೆ. ಅದನ್ನು ತಿಂದ ಅವರ ಮೊದಲ ಉದ್ಗಾರ ನನ್ನ ಜೀವನದಲ್ಲಿ ತಿಂದಿರುವ ಎಲ್ಲಾ ಜೇನುತುಪ್ಪಗಳಲ್ಲಿ ಅತ್ಯತ್ತಮ ಎಂಬುದಾಗಿತ್ತು. ಅಲ್ಲಿಂದ ವಿದೇಶಿ ಕಂಪನಿಗಳ ಏಕಸ್ವಾಮ್ಯ ಮುರಿಯುವ ಯದ್ಧ ಆರಂಭವಾಯಿತು. ಆಗ ಕೆಲವರು ಜೇನು ಒಂದನ್ನೇ ನೀಡುತ್ತಿದ್ದ ನಮ್ಮಿಂದ ಪಡೆಯಲು ಹಿಂದೇಟು ಹಾಕುತ್ತಿದ್ದರು, ವಿದೇಶಿಕಂಪನಿಗಳಂತೆ ನಾವೂ ಜಾಮ್, ಸಾಸ್, ಮಯೋನೈಸ್ನಂತ ಕೆಲ ಸಹವಸ್ತುಗಳನ್ನೂ ಸರಬರಾಜು ಮಾಡಲು ಕೇಳುತ್ತಿದ್ದರು. ಅದರಂತೆ ಪುಟ್ಟಪುಟ್ಟ ಗ್ರಾಮೀಣ ಘಟಕಗಳಲ್ಲಿ ಅತ್ಯುತ್ತಮ ತಯಾರಿಕೆ ವಿಧಾನ ರೂಪಿಸಿ ಅವರಿಂದ ಬಂದ ವಸ್ತುಗಳನ್ನು ಪರಿಶೀಲಿಸಿ ನಮ್ಮ ‘ನೆಕ್ಟಾರ್ ಪ್ರೆಶ್’ ಹೆಸರಿನಲ್ಲೇ ಮಾರಾಟ ಮಾಡಲು ಆರಂಭಿಸಿದೆ. ಜಗತ್ತಿನ ಮುಂಚೂಣಿ ಉಪಚಾರ ಉದ್ಯಮಿಗಳಾದ ಹಯಾಟ, ವಾಲ್ಮಾರ್ಟ್, ತಾಜ್ ಮುಂತಾದವರು ನಮ್ಮ ತಯಾರಿಕೆಗಳನ್ನು ಪಡೆಯುತ್ತಿದ್ದಾರೆ. ಕೆಲವು ಬುಡಕಟ್ಟು ಹಾಡಿಗಳನ್ನು ದತ್ತು ತೆಗೆದುಕೊಂಡು ಅವರಿಗೆ ನಮ್ಮ ವಸ್ತುಗಳ ಉತ್ಪಾದನೆಯಲ್ಲಿ ತರಬೇತಿ ನೀಡಿ ನಮ್ಮ ನೆಕ್ಟಾರ್ ಪ್ರೆಶ್ ಅಡಿಯಲ್ಲೇ ಮಾರಾಟ ಮಾಡಲು ತೀರ್ಮಾನಿಸಿದ್ದೇವೆ. ನಮ್ಮಲ್ಲಿ ಕೆಲಸ ಮಾಡುತ್ತಿರುವ ಯುವಕರು ಬಹಳಷ್ಟು ಜನ ಉತ್ತಮ ವಿದ್ಯಾಭ್ಯಾಸ ದೊರಕದವರು. ಆದರೆ ಅವರಿಗೆ ನಾವು ಅಗತ್ಯ ತರಬೇತಿ ನೀಡಿದ ಮೇಲೆ ಅವರು ಶ್ರದ್ಧೆಯಿಂದ ತಯಾರಿಸುತ್ತಿರುವ ವಸ್ತುಗಳು ವಿಶ್ವದ ಅತ್ಯುತ್ತಮವೆನಿಸಿದ ಬ್ರ್ಯಾಂಡಿನ ವಸ್ತುಗಳಿಗೆ ಪೈಪೋಟಿನೀಡುವಲ್ಲಿ ಸಮರ್ಥವಾಗಿವೆ, ನಿಜಕ್ಕೂ ಭಾರತೀಯರ ಕರ್ತೃತ್ವ ಶಕ್ತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.

ನಿಮ್ಮ ತಂದೆತಾಯಿಯರಿಂದಲೇ ಗ್ರಾಮೀಣಾಭಿವೃದ್ಧಿ ಬಗ್ಗೆ ತಮಗೆ ಆಸಕ್ತಿ ಉಂಟಾಯಿತೆಂದು ಹೇಳಿದಿರಿ, ಅವರ ಬಗ್ಗೆ ವಿವರಿಸಬಹುದೆ ?
ನಮ್ಮ ತಂದೆ ತಾಯಿ ಕಾಫಿ ಪ್ಲಾಂಟರ್ಸ್‌ ಆಗಿದ್ದವರು, ದಕ್ಷಿಣ ಕೊಡಗಿನಲ್ಲಿದ್ದ ಅವರು ಇಬ್ಬರೂ ಉಪಾಧ್ಯಾಯರುಗಳೂ ಆಗಿದ್ದರು. ನಮ್ಮಲ್ಲಿ ಒಳ್ಳೆ ಶಾಲೆಗಳು ಕಡಿಮೆ ಇದ್ದುದರಿಂದ ನಾನು ಹೊರಗಿನ ಬೋರ್ಡಿಂಗ್ ಶಾಲೆಗಳಲ್ಲೇ ಹೆಚ್ಚಾಗಿ ಓದಿದ್ದು. ಆದರೆ ರಜೆಗಳಲ್ಲಿ ಮನೆಗೆ ಹೋದಾಗ ಕಾಣುತ್ತಿದ್ದ ದೃಶ್ಯವೆಂದರೆ, ನಮ್ಮ ತಂದೆ ಕೆಲಸದವರ ಮಕ್ಕಳನ್ನು ಸ್ವಂತ ಮಕ್ಕಳಂತೆ ಜೊತೆಯಲ್ಲೇ ಶಾಲೆಗೆ ಕರೆದುಕೊಂಡು ಹೋಗಿ ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದುದು. ಇಡೀ ಕೊಡಗಿನಲ್ಲೇ ಸುಮಾರು 12 ವರ್ಷಗಳ ಮೊದಲು ರಕ್ತದಾನ ಮಾಡುವ ಬಗ್ಗೆಯೇ ಹಿಂಜರಿಯುತ್ತಿದ್ದ ವಾತಾವರಣದಲ್ಲಿ ಸಂಪೂರ್ಣದೇಹದಾನ ನೀಡುವಂತೆ ನೋಂದಾಯಿಸಿ, ನನ್ನ ತಾಯಿಯನ್ನು ಸಿದ್ಧ ಪಡಿಸಿದ್ದ ನನ್ನ ತಂದೆಯ ಪರೋಪಕಾರಾರ್ಥಮಿದಂ ಶರೀರಂ ತತ್ವ ನನ್ನ ಮೇಲೆ ಗಾಢ ಪರಿಣಾಮ ಬೀರಿತ್ತು. ಅವರ ಆಶಯದಂತೆ ಅವರ ದೇಹವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ಪ್ರಯೋಗ ಶಾಲೆಗೆ ದಾನ ನೀಡಲಾಯಿತು. ಅದಕ್ಕಾಗೆ ನನ್ನ ಹೆಸರಿನ ಜೊತೆಗೆ ನಂಜಪ್ಪ ಎಂಬ ನನ್ನ ತಂದೆಯ ಹೆಸರನ್ನೇ ಚಿರಸ್ಥಾಯಿಯಾಗಿಸಿಕೊಂಡೆ. ಅವರದೇ ಆದರ್ಶದಂತೆ ನಮ್ಮ ತಾಯಿ ಮತ್ತು ನಾನು ದೇಹದಾನಕ್ಕಾಗಿ ನೋಂದಾಯಿಸಿಕೊಂಡಿದ್ದೇವೆ.
ಸಂಘದ ಆದರ್ಶಗಳು ನಿಮ್ಮ ಮೇಲೆ ಗಾಢ ಪ್ರಭಾವ ಬೀರಿದವು ಎಂದು ಹೇಳಿದಿರಿ, ಆ ಆದರ್ಶ, ಸಂಘದ ಸಂಪರ್ಕ ಹಾಗೂ ಒಡನಾಟದ ಬಗ್ಗೆ ಹೇಳಬಹುದೆ ?
ಹೌದು, ನನಗೆ ಸಂಘದ ಆದರ್ಶಗಳು ಮೊದಲಿನಿಂದಲೂ ಬಹಳ ಪರಿಣಾಮ ಬೀರಿವೆ. ಅದು ಬಹಳ ಸಣ್ಣವಳಿಂದಲೂ ನನ್ನ ಸುತ್ತಮುತ್ತಲ ಪರಿಸರದಲ್ಲಿನ ಹಿಂದುತ್ವ-ಸಹೋದರರು ನಡೆದುಕೊಳ್ಳುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ದೊರೆತ ಸಂಘ ಮೂಲದ ಸ್ನೇಹಿತರು ಅವನ್ನು ನನಗೆ ಧಾರೆ ಎರೆದು ನನ್ನಲ್ಲಿ ತುಂಬಿಕೊಳ್ಳುವಂತೆ ಮಾಡಿದರು. ಆ ನಂತರ ನಾನು ನೇರವಾಗಿ ಮೈ.ಚ.ಜೈದೇವ್ ಅವರನ್ನೇ ಸಂಪರ್ಕಿಸಿದೆ. ಅವರ ಸರಳತೆ ಹಾಗೂ ಅವರ ಸುತ್ತಲಿದ್ದವರ ಪರಿಸರ ನನಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಪ್ರೇರಣೆಯಾಯಿತು. ಪ್ರವೀಣ್ ತೊಗಾಡಿಯಾಜಿಯವರ ಬಗ್ಗೆ ನನಗೆ ಇದ್ದ ನಂಬಿಕೆಗಳಿಂದ ನನಗೆ ಅವರ ಬಗೆಗೆ ಹೆಚ್ಚು ತಿಳಿಯುವಂತೆ ಪ್ರೇರೇಪಿಸಿತ್ತು. ನಾನು ವಿಶ್ವ ಹಿಂದೂ ಪರಿಷತ್ತಿನ ಮೈಸೂರು ಪ್ರಾಂತಕ್ಕೆ ಉಪಾಧ್ಯಕ್ಷೆಯಾಗಿ ನೇಮಕವಾದೆ. ಹಿಂದೂ ಮಹಿಳಾ ವೇದಿಕೆಯಲ್ಲಿಯೂ ತೊಡಗಿಸಿಕೊಂಡಿದ್ದೇನೆ, ಅದರಂಗವಾಗಿ ಅಲ್ಲಿಗೆ ನಮ್ಮ ಇಊಖ್ಕಐ ನಿರ್ದೇಶಕರನ್ನೇ ಕರೆದುಕೊಂಡು ಹೋಗಿದ್ದೆ. ಅಲ್ಲಿಯ ಚಟುವಟಿಕೆಗಳಿಂದ ಪ್ರಭಾವಿತರಾದ ಅವರು ವಿಶೇಷ ತರಬೇತಿ ತರಗತಿಗಳನ್ನು ನಡೆಸುವ ಜೊತೆಗೆ ಹೊಸದಾಗಿ ಉದ್ಯಮ ಆರಂಭಿಸಲು ಮುಂದಾಗುವ ಮಹಿಳೆಯರಿಗೆ ಬಂಡವಾಳ ಹೂಡಲೂ ಮುಂದೆ ಬಂದಿದ್ದಾರೆ. ಅವರ ಉತ್ಪಾದನೆಗಳನ್ನು ಮಾರಾಟಮಾಡಲು ನಮ್ಮ ನೆಕ್ಟಾರ್ ಪ್ರೆಶ್ ಸದಾ ಸಿದ್ಧವಾಗಿಯೇ ಇದೆ. ವನವಾಸಿ ಕಲ್ಯಾಣ, ಲಘು ಉದ್ಯೋಗ್ ಭಾರತಿ ಹೀಗೆ ಹಲವಾರು ವಿಚಾರಗಳಲ್ಲಿ ತೊಡಗಿಸಿಕೊಂಡೆ. ಬೇರೆಲ್ಲಾ ಕಡೆಗಳಲ್ಲಿ ಏನನ್ನಾದರೂ ಮಾಡಲು ನನಗೇನು ಸಿಗುತ್ತದೆ ಎಂದು ಯೋಚಿಸಿದರೆ, ಸಂಘ ಸಮಾಜಕ್ಕೆ ಏನು ಕೊಡಬಹುದು ಎಂದು ಯೋಚಿಸುವಂತೆ ಪ್ರೇರೇಪಿಸುತ್ತದೆ. ಹೀಗೆ ನನಗೆ ಸಂಘದ ನಿಃಸ್ವಾರ್ಥತೆ, ವಯಕ್ತಿಕ ಜೀವನದಲ್ಲಿ ಪಾರದರ್ಶಕತೆ, ಸಮಾಜ ಸೇವೆಗಳು ಜೊತೆಯಾದವು ಎಂದುಕೊಳ್ಳುತ್ತೇನೆ.

ನಿಮ್ಮ ಉದ್ಯಮದ ಸಿದ್ಧಾಂತ ಏನು ?
ಪ್ರಥಮವಾಗಿ ಅತ್ಯುತ್ತಮ ಗುಣಮಟ್ಟ, ಮತ್ತು ಸಮಾಜಕ್ಕೆ ಏನು ಮತ್ತು ಹೇಗೆ ಹಿಂತಿರುಗಿಸಿ ಕೊಡುವುದು ಎಂಬ ಚಿಂತನೆ ಆಗಿದೆ. ಅದರೊಂದಿಗೆ ನಿರಂತರತೆ, ಶಾಶ್ವತತೆ ಅತ್ಯವಶ್ಯ. ಉದಾಹರಣೆಗೆ : ನಮ್ಮ ಮಂಡ್ಯಾ ಸುತ್ತಲೂ ಇರುವ ಫಾರಂಗಳಲ್ಲಿ ಅನೇಕ ಹಣ್ಣುಗಳನ್ನೂ ದೊಡ್ಡ ದೊಡ್ಡ ಪ್ರಮಾಣದಲ್ಲೇ ಬೆಳೆಯತ್ತಾರೆ. ಆದರೆ ಅವರ ಬೆಳೆಗಳಿಗೆ ಅವುಗಳ ಫಸಲಿನ ಸಮಯದಲ್ಲಿ ಬೆಲೆ ದೊರೆಯುವುದಿಲ್ಲ ಅದಕ್ಕಾಗೆ ನಾವು ಜಾಮ್ ತಯಾರಿಕೆಗೆ ಉತ್ತೇಜನ ನೀಡುತ್ತಿದ್ದೇವೆ. ಈಗ ತಿಂಗಳಿಗೆ 30ಟನ್ ಉತ್ಪಾದನೆಗೆ ಏರಿದೆ. ಅದರ ವಿಶೇಷವೆಂದರೆ ಯಾವುದೇ ಕೃತಕ ಬಣ್ಣ ಮತ್ತು ಪ್ರಿಸರ‌್ವೇಟೀವ್‌ಗಳನ್ನು ಬಳಸದೆ ಸ್ವಾಭಾವಿಕವಾಗಿ ತಯಾರಿಸುವ ತಂತ್ರಜ್ಞಾನವನ್ನು ಇಊಖ್ಕಐನಿಂದ ಪಡೆದು ಭಾರತದಲ್ಲೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಉತ್ಪಾದನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ನಿಮ್ಮ ಉದ್ಯಮದ ಸ್ವರೂಪ ಮತ್ತು ಸಫಲತೆ ಕುರಿತು ತಿಳಿಸಿ.
ನಮ್ಮ ಉದ್ಯಮದ ಆಧಾರಸ್ಥಂವಾಗಿರುವುದು ರಾಜಪ್ಪ ಮತ್ತವರ ತಂಡ. ಅವರು ಉತ್ಪಾದನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದೀಗ ನಾನು ಮಾರ್ಕೆಟಿಂಗ್ ವಿಭಾಗಕ್ಕೆ ಹೆಚ್ಚು ಗಮನ ನೀಡುತ್ತಿದ್ದೇನೆ. ಅವರು ನಮ್ಮ ಉತ್ಪಾದನೆಯ ಜವಾಬ್ದಾರಿ ವಹಿಸಿಕೊಂಡ ಮೇಲಂತೂ ನಮ್ಮ ವಸ್ತುಗಳ ಸಂಖ್ಯೆಯೂ ಹೆಚ್ಚಾಗುವ ಜೊತೆಜೊತೆಗೆ ಅಂತರರಾಷ್ಟ್ರೀಯ ಗುಣಮಟ್ಟಕ್ಕೂ ಮಿಗಿಲಾದ ಹೊಸಹೊಸ ಹೆಜ್ಜೆಗಳನ್ನು ಮಾದರಿಯಾಗಿ ನೀಡುತ್ತಿದ್ದಾರೆ. ಎಂದರೆ ನನ್ನ ಎಲ್ಲಾ ಯಶಸ್ಸಿನ ನಿಜವಾದ ಗೌರವ ಅವರಿಗೆ ಸಲ್ಲತಕ್ಕದ್ದು, ಈಗ ಕಚ್ಚಾಜೇನು ಸಂಗ್ರಹಣಾ ತಂಡವಿದೆ, ಉತ್ಪಾದನಾ ತಂಡ, ಅವಿಷ್ಕಾರ ಮತ್ತು ಪ್ಯಾಕೇಜಿಂಗ್ ತಂಡ ಹೀಗೆ ಹಲವು ವಿಭಾಗಗಳನ್ನು ಮಾಡಲಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ನಮ್ಮ ಉತ್ಪಾದನೆ ಎರಡರಷ್ಟಾಗುವ ನಿರೀಕ್ಷೆಯಿದೆ. ಉತ್ಪಾದನಾ ಗುಣಮಟ್ಟ ಅತ್ಯುನ್ನತವಾಗಿರೋದ್ರಿಂದಲೇ ನಾವು ಸುಲಭವಾಗಿ ಮಾರ್ಕೆಟಿಂಗ್ ಮಾಡಲು ಸಾಧ್ಯವಾಗಿದೆ. ಉದಾಹರಣೆಗೆ ನಮ್ಮ ಉತ್ಪಾದನೆಯ ಜೇನನ್ನು ಹಿಮಾಲಯ ಡ್ರಗ್ಸ್ ಕಂಪನಿಯವರು ತಮ್ಮ ಐಡ್ರಾಪ್ಸ್ ತಯಾರಿಸಲು ಬಳಸುತ್ತಾರಂತೆ. ನಮ್ಮ ಜೇನು ವಿಶ್ವದ ಅತ್ಯುತ್ತಮ ಎನಿಸಿಕೊಂಡ ಕ್ಯಾಪಿಲಾನ್ ಎಂಬ ಆಸ್ಟ್ರೇಲಿಯಾ ಬ್ರ್ಯಾಂಡ್ಗಿಂತ ಶೇ.20ರಷ್ಟು ಹೆಚ್ಚಿನ ಗುಣಮಟ್ಟ ಸಾಧಿಸಿದೆ. ವಿಶ್ವಾದ್ಯಂತ ಎಲ್ಲಿಗೇ ಹೋದರೂ ನಮ್ಮ ಉತ್ಪಾದನೆ ಸ್ವೀಕೃತವಾಗುವಲ್ಲಿ ರಾಜಪ್ಪ ಮತ್ತವರ ತಂಡದ ಶ್ರದ್ಧೆ, ಶ್ರಮ ಎದ್ದುಕಾಣುತ್ತದೆ. ನಮ್ಮ ಉತ್ಪಾದನೆಯ ಶೇ.70 ಭಾಗ ಹೊರದೇಶಗಳಿಗೆ ತಲುಪುವಂತಾಗಿರುವುದು ಅದರ ಗುಣಮಟ್ಟದಿಂದಲೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆ ವಿದೇಶಿ ಬ್ರ್ಯಾಂಡ್ಗಳ ತವರಲ್ಲೇ ಹೋಗಿ ನಾವು ಅವರ ಜಾಗದಲ್ಲಿ ಸ್ಪರ್ಧೆ ಒಡ್ಡುತ್ತಿದ್ದೇವೆ ಎಂಬುದು ನಿಜಕ್ಕೂ ನಮ್ಮ ಹೆಗ್ಗಳಿಕೆ ಮಾತ್ರವಲ್ಲ, ದೇಶದ ಹೆಸರಿಗೆ ಗರಿ ಎಂಬುದಾಗಿದೆ.

ಸಮಾಜದಿಂದ ಯಾವ ರೀತಿಯ ಪ್ರತಿಕ್ರಿಯೆ ಬಯಸುತ್ತೀರಿ ?
ದಯವಿಟ್ಟು ಕ್ಷಮಿಸಿ, ನಾವು ಸಮಾಜದಿಂದ ಏನನ್ನೂ ಬಯಸುವುದಿಲ್ಲ, ಇದು ಅಹಂಕಾರವಲ್ಲ. ಏನನ್ನೂ ಬಯಸದೆ ಮಾಡುವ ಕೆಲಸದಿಂದ ಬಹಳ ತೃಪ್ತಿ ದೊರೆಯುತ್ತದೆ. ನಿರೀಕ್ಷೆಗಳು ನಿರಾಶೆಯನ್ನೂ ನೀಡುವ ಸಂಭವವಿದೆ. ಅದಕ್ಕಾಗೆ ಹಾಗೆ ಹೇಳಿದೆ. ನಮಗೆ ಈ ಸಮಾಜ ಏನನ್ನೂ ಬಯಸದೆ ಎಲ್ಲವನ್ನೂ ತಾನಾಗೆ ನೀಡುತ್ತಿದೆ, ಉದಾಹರಣೆಗೆ: ಒಮ್ಮೆ ಕಾರಿನಲ್ಲಿ ಬರುತ್ತಿರುವಾಗ ಪತ್ರಿಕೆಯಲ್ಲಿ ಒಂದು ಪ್ರಕಟಣೆ ನೋಡಿದರು ರಾಜಪ್ಪ. ಅದು ಒಬ್ಬ ಇಸ್ರೇಲಿ ಸಾಧು ಒಬ್ಬರ ಶವಸಂಸ್ಕಾರಕ್ಕಾಗಿ ಭಾರತದಲ್ಲಿ ಸ್ಥಳ ಬೇಕಾಗಿದೆ ಎಂಬುದಾಗಿತ್ತು. ಕೂಡಲೇ ನಾವೇಕೆ ನೀಡಬಾರದು ಎಂಬ ರಾಜಪ್ಪ ಅವರ ಪ್ರಶ್ನೆಗೆ ತಕ್ಷಣದ ಒಪ್ಪಿಗೆ ನೀಡಿದ್ದೆ. ಆ ಸಾಧುವಿನ ಬಗ್ಗೆ ನಮಗೇನೂ ಗೊತ್ತಿರಲಿಲ್ಲ. ಆದರೂ ಕೂಡಲೆ ನಮ್ಮ ಒಪ್ಪಿಗೆಯನ್ನು ಸೂಚಿಸಿದೆವು. ಅವರು ನಮ್ಮ ಕೊಡಗಿನ ತೋಟದ ಆವರಣದಲ್ಲಿ ಸಂಸ್ಕಾರ ಮಾಡಿದರು, ಆ ಸಾಧುವಾದರೋ ಹಿಂದುತ್ವದ ಮೇಲಿನ ಅಭಿಮಾನದಿಂದ ಇಸ್ಲಾಂ ತ್ಯಜಿಸಿ ನಾರದಮುನಿ ಎಂಬ ಹೆಸರಿನಿಂದ ಗುರುತಿಸಿಕೊಂಡು ಭಾರತದಲ್ಲೇ ಹಲವು ವರ್ಷ ನೆಲೆಸಿ ಸುಮಾರು 20 ಕುಟುಂಬಗಳಿಗೆ ಆಶ್ರಯವನ್ನೂ ನೀಡಿದ್ದರಂತೆ, ಇದೀಗ ಅವರ ಅನುಯಾಯಿಗಳು ನಮ್ಮಿಂದ ಪಡೆದ ಒಂದು ಎಕರೆಯಷ್ಟು ಪ್ರದೇಶದಲ್ಲಿ ಆಶ್ರಮ ನಿರ್ಮಿಸಿ ಸೋಹಂ ಯೋಗದ ವಿಶೇಷತೆಯಿಂದ ಆಟಿಸಂಗೆ ಒಳಗಾಗಿರುವ ಮಕ್ಕಳಿಗೆ ಪರಿಹಾರ ನೀಡುತ್ತಿದ್ದಾರೆ, ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದಾಗ ನಮಗೂ ಹೆಚ್ಚಿನದೇ ಸಂದಿದೆ. ಅವರ ಭಾರತದ ಮೇಲಿನ ಅಭಿಮಾನಕ್ಕೆ ನಾವು ಭಾರತೀಯರಾಗಿರುವುದಕ್ಕೆ ಜನ್ಮಜನ್ಮದ ಪುಣ್ಯ ಎನಿಸುತ್ತದೆ.

ಮುಂಬರುವ ಉದ್ಯಮಿಗಳಿಗೆ ನಿಮ್ಮ ಸಂದೇಶವೇನು ?
ಯಾವುದೇ ಉದ್ಯಮಿಯಾಗಿದ್ದರೂ ತಮ್ಮ ದಾರಿ ಸುಲಭವೆಂದುಕೊಂಡು ಎಂದಿಗೂ ಮುನ್ನಡಿ ಇಡಬೇಡಿ. ಸುಲಭವೇ ಆಗಿರಬೇಕೆಂದು ಬಯಸುವವರು ಉದ್ಯಮಿ ಆಗುವುದು ಸಾಧ್ಯವೇ ಇಲ್ಲ, ಮುಳ್ಳಿನ ದಾರಿಯಲ್ಲಿ ಅಡೆತಡೆಗಳನ್ನು ದಾಟಿ ಮುನ್ನಡೆಯುವ ಛಲದೊಂದಿಗೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ನಿಧಾನವಾಗಿ ಆರಂಭಿಸಿ ವೇಗ ವರ್ಧಿಸಿಕೊಂಡು ಯಶಸ್ಸಿನ ತುತ್ತತುದಿಯ ಶಿಖರವನ್ನು ತಲುಪಿರಿ ಎಂದು ಹಾರೈಸುತ್ತೇನೆ.

   

Leave a Reply