ಕಲಬುರ್ಗಿ: ಆಚಾರ್ಯರ ಅಭ್ಯಾಸ ವರ್ಗ

ಯಾದಗಿರಿ - 0 Comment
Issue Date : 02.05.2015

ಯಾದಗಿರಿ: ಸುರಪುರ ತಾಲೂಕಿನ ದಕ್ಷಿಣ ಕಾಶಿ ಎಂದೇ ಹೆಸರಾದ ತಿಂಥಣಿಯ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ವನವಾಸಿ ಕಲ್ಯಾಣದ ಕಲಬುರ್ಗಿ ವಿಭಾಗದ ಆಚಾರ್ಯರ ಅಭ್ಯಾಸ ವರ್ಗ ಏ. 6, 7, 8ರಂದು ನಡೆಯಿತು.
ಮೈಸೂರಿನ ಆರೆಸ್ಸೆಸ್ ವಿಭಾಗ ಸಂಪರ್ಕ ಪ್ರಮುಖ ಪ್ರದ್ಯುಮ್ನ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ 2 ಅವಧಿ ಬೌದ್ಧಿಕ ತೆಗೆದುಕೊಂಡರು. ವನವಾಸಿ ಕಲ್ಯಾಣದ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಶ್ರೀಪಾದ, ಕಲಬುರ್ಗಿ ವಿಭಾಗ ಸಂಘಟನಾ ಕಾರ್ಯದರ್ಶಿಶ್ರೀನಿವಾಸ, ವನವಾಸಿ ಕಲ್ಯಾಣ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಗಂಗಾಧರ ನಾಯಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಈ ತರಬೇತಿಯಲ್ಲಿ ಸುರಪುರ, ಶಹಾಪುರ, ಯಾದಗಿರಿ, ಮಾನವಿ, ದೇವದುರ್ಗ ತಾಲೂಕುಗಳಿಂದ ಸುಮಾರು ನಲವತ್ತಕ್ಕಿಂತ ಹೆಚ್ಚು ಆಚಾರ್ಯರು ಭಾಗವಹಿಸಿದ್ದರು. 3 ದಿನಗಳ ಅಭ್ಯಾಸ ವರ್ಗದಲ್ಲಿ ದೇಶಭಕ್ತಿ ಗೀತೆ, ಶ್ಲೋಕ, ಕಥೆ, ಆಟಗಳು, ಯೋಗಾಸನ, ಇನ್ನೂ ಅನೇಕ ವಿಷಯಗಳನ್ನು ಕಲಿಸಲಾಯಿತು. ತಾಲೂಕ್ ಪ್ರಮುಖ ಮಲ್ಲಣ್ಣ ಮಕಾಶಿ ಸ್ವಾಗತಿಸಿದರು. ಭೀಮಾಶಂಕರ ನಿರೂಪಿಸಿದರು. ರಾಘವೇಂದ್ರ  ವಂದಿಸಿದರು.

   

Leave a Reply