ಕಾಂಬೋಡಿಯಾ

ಜಗದ್ಗುರು ಭಾರತ - 0 Comment
Issue Date : 30.04.2015

 •  ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮಗಳಿಂದ ಪ್ರಭಾವಿತಗೊಂಡು ಶ್ರೀಮಂತ ಇತಿಹಾಸ ಬರೆದುಕೊಂಡಿದ್ದ ದೇಶಗಳಲ್ಲಿ ಕಾಂಬೋಡಿಯಾ ಕೂಡ ಒಂದು. ಇದರ ಪ್ರಾಚೀನ ಹೆಸರು ಕಾಂಬೋಜ.
 •  ಕಾಂಬೋಡಿಯಾದ ಮೂಲ ನಿವಾಸಿಗಳು ನಾಗ ಜನಾಂಗದವರು. ಮೂಲತಃ ಪ್ರಕೃತಿ ಆರಾಧಕರು. ಕಾಲಾನಂತರದಲ್ಲಿ ಈ ಜನಾಂಗವು ವಿಷ್ಣುವನ್ನು ಮೂರ್ತಿ ರೂಪದಲ್ಲಿ ಪೂಜಿಸಲು ಆರಂಭಿಸಿತು.
 •  ಕಾಂಬೋಡಿಯಾಕ್ಕೆ ಆ ಹೆಸರು ಬಂದಿದ್ದು ಭಾರತ ದೇಶದ ರಾಜಕುಮಾರ ಕಂಬೋಜನಿಂದ. ರಾಜಕುಮಾರಿಯನ್ನು ವರಿಸಿ ಅಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪಿಸಿ, ಕಾಂಬೋಜವನ್ನು ನಿರ್ಮಿಸಿದ ಖ್ಯಾತಿ ಅವನದು.
 •  ಕಾಂಬೋಜ ಅಥವಾ ಕಾಂಬೋಡಿಯಾವನ್ನು ಮೊಟ್ಟಮೊದಲು ಸಮಗ್ರವಾಗಿ ಆಳಿದ್ದು ಹಿಂದೂ ಖ್ಮೇರ್ ರಾಜ ಮನೆತನ. ಈ ಮನೆತನವು ಕಾಂಬೋಜ, ಚಂಪಾ ದೇಶ, ಶ್ಯಾಮ ದೇಶಗಳನ್ನು ಆಳಿತ್ತು.
 •  ಕ್ರಿ.ಶ. ಹದಿನೈದನೆ ಶತಮಾನದವರೆಗೂ ವಿವಿಧ ವಂಶಗಳ ಹಿಂದೂ ಅರಸರು ಈ ದೇಶವನ್ನು ಆಳಿದರು. ನಡುವೆ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿ, ಅನಂತರ ಬೌದ್ಧೀಯತೆಯನ್ನು ಹಿಂದೂ ಧರ್ಮದೊಳಗೆ ಬೆಸೆದುಕೊಂಡು ವಿಶಿಷ್ಟ ಸಂಸ್ಕೃತಿ ರೂಪಿಸಿಕೊಂಡಿತ್ತು.
 •  1200 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಮಹೇಂದ್ರಪರ್ವತ ಎಂಬ ಪ್ರಾಚೀನ ನಗರಿಯು 2013ರ ಲೇಸರ್ ಉತ್ಖನನದ ವೇಳೆ ಪತ್ತೆಯಾಗಿದ್ದು, ಇದು ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ನಗರಗಳಲ್ಲಿಯೇ ಅತಿ ವಿಶಾಲ ಹಾಗೂ ಸುಸಂಯೋಜಿತವಾಗಿತ್ತೆಂದು ಹೇಳಲಾಗಿದೆ. ಎರಡನೇ ಸೂರ್ಯವರ್ಮ ಇದರ ನಿರ್ಮಾರ್ತೃ.
 •  ಕಾಂಬೋಡಿಯಾದ ಫೋನಮ್ ಕುಲೆನ್ ಪರ್ವತ ಶ್ರೇಣಿಯಲ್ಲಿ ಕಳೆದುಹೋಗಿದ್ದ ಮಹೇಂದ್ರಪರ್ವತವು ಆಂಗೋರ್ ವಾಟ್ ಸಾಮ್ರಾಜ್ಯದ ಅವಧಿಯಲ್ಲಿ ವೈಭವದ ಉತ್ತುಂಗದಲ್ಲಿತ್ತು ಎಂದು ಅಂದಾಜಿಸಲಾಗಿದೆ.
 •  ಸುಮಾರು 30 ದೇವಸ್ಥಾನಗಳ ಸಮುಚ್ಛಯ ಹೊಂದಿದ್ದ ಮಹೇಂದ್ರಪರ್ವತ ನಗರವು 9ನೇ ಶತಮಾನದಲ್ಲಿ ನಿರ್ಮಾಣಗೊಂಡಿರಬಹುದು ಎನ್ನುತ್ತವೆ ಪುರಾತತ್ತ್ವ ಇಲಾಖೆ ದಾಖಲೆಗಳು.
 •  ಜಗತ್ತಿನಲ್ಲೇ ಅತಿ ದೊಡ್ಡ ಹಿಂದೂ ದೇಗುಲವಿರುವುದು ಕಾಂಬೋಜದಲ್ಲಿ. ಅದರ ಹೆಸರು ಆಂಗ್ ಕೋರ್ ವಾಟ್. ಎರಡನೇ ಸೂರ್ಯವರ್ಮನ್ ಇದನ್ನು ಕಟ್ಟಿಸಿದನು. ಇದು ಈಜಿಪ್ಟಿನ ಪಿರಮಿಡ್‌ನಷ್ಟೇ ಬೃಹತ್ತಾಗಿದ್ದು, ಪ್ರಪಂಚದ ಅದ್ಭುತಗಳಲ್ಲೊಂದೆನಿಸಿದೆ.
 •  ಆಂಗ್ ಕೋರ್ ವಾಟ್ ಮಂದಿರದಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸುತ್ತಿದ್ದರೆಂದೂ ಜೊತೆಯಲ್ಲಿಯೇ ಚತುರ್ಮುಖ ಬ್ರಹ್ಮನ ಅತಿ ದೊಡ್ಡ ದೇಗುಲವಿದೆಂದೂ ಹೇಳಲಾಗುತ್ತದೆ.
 •  ಈ ದೇಗುಲ ನಿರ್ಮಾಣಕ್ಕೆ ಭಾರತದಿಂದ ವಲಸೆ ಹೋದ ಶಿಲ್ಪಿಗಳು ತಮ್ಮ ಜತೆ ವೇದಗಳು, ಮಹಾಭಾರತ, ರಾಮಾಯಣಗಳನ್ನೂ ಜೊತೆಗೆ ನೃತ್ಯ ಸಂಸ್ಕೃತಿಯನ್ನೂ ಒಯ್ದರು. ಮುಂದೆ ನೃತ್ಯ ಕಾಂಬೋಜದ ಮಹತ್ವದ ಸಾಂಸ್ಕೃತಿಕ ಭಾಗವಾಯಿತು.
 •  ಮಹಾಭಾರತದ ಕಾಲದಲ್ಲಿ ಬೃಹತ್ ಭಾರತದ ಭಾಗವೇ ಆಗಿದ್ದ ಕಾಂಬೋಜ ಬಹಳ ಬೇಗ ಮರಳಿ ತನ್ನ ಮೂಲ ಸತ್ವಕ್ಕೆ ಬೆಸೆದುಕೊಂಡಿತು.
 •  ನಮ್ಮ ಪುರಾಣಗಳಲ್ಲಿ ಕಾಂಬೋಜ ಹಾಗೂ ನಾಗಾಗಳ ಉಲ್ಲೇಖ ಮೇಲಿಂದ ಮೇಲೆ ಬರುತ್ತದೆ.
 •  ಕ್ರಿ.ಶ. 802-1200 ರವರೆಗೆ ಖ್ಮೇರ್ ಆಡಳಿತಾವಧಿಯಲ್ಲಿ ಆಂಗೋರ್‌ವಾಟ್ ಮತ್ತು ಆಂಗೋರ್ ಥಾಮ್ ಏಷ್ಯಾದ ಪುರಾತನ ಯಾತ್ರಾಸ್ಥಳವಾಗಿತ್ತು ಎನ್ನಲಾಗಿದೆ.
 •  ಧರ್ಮಭೀರುವಾಗಿದ್ದ ಅರಸ ಏಳನೇ ಜಯವರ್ಮನ್ ದೇವಾಲಯಗಳ ನಗರ ಆಂಗೋರ್ ಥಾಮ್ ಕಟ್ಟಿಸಿದ.
 •  ಕಾಂಬೋಡಿಯಾದಲ್ಲಿನ ದೇವಾಲಯಗಳು ಕಾಲಾನಂತರದಲ್ಲಿ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿವೆ. ಇಲ್ಲಿಯ ಭವ್ಯ ಬುದ್ಧ ಆಲಯಗಳಲ್ಲಿ ಮರಗಳೇ ಗೋಡೆಗಳಾಗಿವೆ.
 •  ಚೀನಾ ಇತಿಹಾಸಕಾರರ ಪ್ರಕಾರ ಭಾರತೀಯ ಸಂಜಾತ ಕೌಂಡಿನ್ಯನೆಂಬ ಬ್ರಾಹ್ಮಣನೊಬ್ಬ ಕಾಂಬೋಜದ ರಾಜಕುಮಾರಿಯೊಬ್ಬಳನ್ನು ವಿವಾಹವಾಗಿ ಅಲ್ಲಿನ ಅಧಿಪತ್ಯ ವಹಿಸಿಕೊಂಡ. ಕ್ರಮೇಣ ಅಲ್ಲಿನ ರಾಜ ವಂಶಜರು ಮತ್ತು ಸಾಮಾನ್ಯ ಪ್ರಜೆಗಳು ಹಿಂದೂ ಧರ್ಮ, ಸಂಸ್ಕೃತಿ, ಆಚಾರ ವಿಧಿ ವಿಧಾನಗಳನ್ನು ಸ್ವೀಕರಿಸಿದರು.
 •  ಈ ಐತಿಹಾಸಿಕ ದಾಖಲೆಗೆ ಪೂರಕವಾದ ವಿವರಗಳು ಕಾಂಬೋಜದ ರಾಜಧಾನಿಯೆನಿಸಿಕೊಂಡಿದ್ದ ಭವಪುರದಲ್ಲಿ ದೊರೆತ ಸಂಸ್ಕೃತ ದಾಖಲೆಗಳಲ್ಲಿ ಕಂಡುಬಂದಿವೆ.
 •  ಕೌಂಡಿನ್ಯನ ಕಾರಣದಿಂದಾಗಿ ಭಾರತದಿಂದ ಬ್ರಾಹ್ಮಣರು ಬಹು ಸಂಖ್ಯೆಯಲ್ಲಿ ವಲಸೆ ಹೋಗಿ ಅಲ್ಲಿನ ಹೆಣ್ಣುಮಕ್ಕಳನ್ನು ವಿವಾಹವಾಗಿ ಅಲ್ಲೇ ನೆಲೆಯೂರಿದರೆಂದು ಇತಿಹಾಸ ಹೇಳುತ್ತದೆ.
 •  ಕಾಂಬೋಜದಲ್ಲಿ ಬ್ರಾಹ್ಮಣ ಸಂಪ್ರದಾಯಗಳ ಪ್ರಭಾವ ಸಾಕಷ್ಟಿದ್ದು, ಸಂಸ್ಕೃತ ಭಾಷೆ ಅಲ್ಲಿಯ ಅಧಿಕೃತ ಭಾಷೆಯಾಗಿ ಚಾಲ್ತಿಗೆ ಬರಲು ಒಂದು ಕಾರಣವೂ ಆಗಿದ್ದಿತು. ಇಂದಿಗೂ ಈ ಪ್ರಭಾವವನ್ನು ಈ ನೆಲದಲ್ಲಿ ಕಾಣಬಹುದು.
 •  ಕಾಂಬೋಡಿಯಾದ ಬಹುತೇಕ ಜನರ ಹೆಸರು ಸಂಸ್ಕೃತ ಭಾಷೆಯನ್ನು ಆಧರಿಸಿವೆ. ಹಾಗೆಯೇ ಇಲ್ಲಿಯ ಸ್ಥಳಗಳ ಹೆಸರುಗಳೂ ಕೆಲವು ಆಚರಣೆಗಳ ಹೆಸರುಗಳೂ ಸಂಸ್ಕೃತಭೂಯಿಷ್ಟವೇ ಆಗಿವೆ.
 •  ಪ್ರಾಚೀನ ಕಾಂಬೋಜ ರಾಜರಿಗೆ ವರ್ಮನ್ ಎಂಬ ಉಪನಾಮಧೇಯವಿತ್ತು. ಇದು ದ್ರಾವಿಡ ಭಾರತದ ರಾಜಮನೆತನಗಳ ಉಪನಾಮಧೇಯವೂ ಆಗಿದೆ. ಬ್ರಾಹ್ಮಣ ಹಾಗೂ ಕ್ಷತ್ರಿಯ ಕುಲದವರು ಹಲವು ಶತಮಾನಗಳವರೆಗೆ ಈ ದೇಶವನ್ನು ಆಳಿದವು.
 •  ಜಯವರ್ಮನ್, 2ನೇ ಮತ್ತು 6ನೇ ಯಶೋ ವರ್ಮನ್ ಹಾಗೂ ಮೊದಲನೇ ಹಾಗೂ ಎರಡನೇ ಸೂರ್ಯವರ್ಮನ್ ಪ್ರಸಿದ್ಧರಾದ ವರ್ಮನ್ ವಂಶದ ಕೆಲವು ಉಲ್ಲೇಖಾರ್ಹ ರಾಜರುಗಳು.
 •  ಕಾಂಬೋಜವು ಉಛ್ರಾಯ ಸ್ಥಿತಿಯಲ್ಲಿದ್ದಾಗ ಈಗಿನ ಥೈಲಾಂಡ್, ಬರ್ಮಾದ ಕೆಲವು ಭಾಗಗಳು, ಲಾವೋಸ್ ಇವೆಲ್ಲಾ ಸೇರಿ ಒಂದೇ ದೇಶವೆನಿಸಿತ್ತು. ಆ ಕಾಲದಲ್ಲಿ ಬರೆದ ಅನೇಕಾನೇಕ ಸಂಸ್ಕೃತ ಭಾಷೆಯಲ್ಲಿರುವ ಲಿಖಿತ ದಾಖಲೆ, ಶಾಸನಗಳಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
 •  ರಾಮಾಯಣದ ಕಥೆಗಳನ್ನು ಆಧರಿಸಿದ ನೃತ್ಯ ರೂಪಕಗಳು ಕಾಂಬೋಡಿಯಾದಲ್ಲಿ ಅತ್ಯಂತ ಜನಪ್ರಿಯ. ಅದನ್ನು ತಮ್ಮ ಸಂಸ್ಕೃತಿಯ ಮಹತ್ವದ ಭಾಗವಾಗಿಯೇ ಅಲ್ಲಿನ ಜನರು ಮುಂದುವರೆಸಿಕೊಂಡು ಬಂದಿದ್ದಾರೆ.
 •  ಕಾಂಬೋಡಿಯಾವನ್ನು ಭಾರತೀಯ ಪುರಾಣಗಳು ಸ್ವರ್ಣ ಭೂಮಿ ಎಂದು ಕರೆದಿವೆ. ಅದಕ್ಕೆ ಸರಿಯಾಗಿ ಕಾಂಬೋಡಿಯನ್ನರು ಭಾರತೀಯರಂತೆಯೇ ಅಥವಾ ಇಲ್ಲಿನವರಿಗಿಂತ ಹೆಚ್ಚು ಸುವರ್ಣ ಪ್ರಿಯರು.
 •  ಜಗತ್ತಿನ ಪುರಾತನ ನಾಗರಿಕತೆಗಳಲ್ಲಿ ಸ್ಥಾನ ಪಡೆದಿರುವ ಈಜಿಪ್ತ್ ಸಂಸ್ಕೃತಿಯ ಮೂಲ ಪುರುಷರು ಶ್ರೀಕೃಷ್ಣನ ದ್ವಾರಕೆಯವರು ಎನ್ನುತ್ತವೆ ಪುರಾವೆಗಳು.
 •  ಕರ್‌ನಕ್‌ನಲ್ಲಿ ಥೀಬಿಸ್ ನದಿ ದಂಡೆಯ ಮೇಲಿರುವ ಬೃಹತ್ ದೇಗುಲದಲ್ಲಿ ಪೂಜೆಗೊಳ್ಳುವ ಅಮುನ್ ದೇವತೆಯು ಶ್ರೀ ಕೃಷ್ಣನ ಗುಣಲಕ್ಷಣಗಳನ್ನು ಹೋಲುತ್ತಾನೆ.

 

   

Leave a Reply