ಕುಂದಾಪುರದ ಬಾಲೆಗೆ ನ್ಯಾಷನಲ್ ಇನ್‍ಸ್ಪೈರ್ ಅವಾರ್ಡ್

ಉಡುಪಿ - 0 Comment
Issue Date : 18.10.2013

ಉಡುಪಿ ಜಿಲ್ಲೆಯ ಕಾರ್ಕಳದ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿ ಶರಧಿ ಶೆಟ್ಟಿ ತಯಾರಿಸಿದ ರೇನ್ ಸೆನ್ಸಾರ್ ಅವಿಷ್ಕಾರಕ್ಕೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಇನ್‍ಸ್ಪೈರ್ ಅವಾರ್ಡ್ ಪಡೆದಿದ್ದಾಳೆ.  

ಶರಧಿ ಶೆಟ್ಟಿ  ಪ್ರಸ್ತುತ ಪಡಿಸಿರುವ ವಿಜ್ಞಾನ ಮಾದರಿ ವಿಶಿಷ್ಟವಾಗಿದ್ದು ಬಹಳ ಉಪಯೋಗಕಾರಿಯಾಗಿದೆ.  ಒಣಗಲು ಹಾಕಿದ ಬಟ್ಟೆಗಳು ಮಳೆ ಬಂದರೆ ತನ್ನಿಂದ ತಾನೇ  ಒಳಗೋಗುತ್ತವೆ.  ಬಿಸಿಲು ಬಂತೆಂದರೆ ಹೊರಬರುತ್ತವೆ.  ಮನೆಯೊಳಗೊಂದು ಹಾಗೂ ಅಂಗಳದಲ್ಲೊಂದು ಕಂಬ, ಅದರಲ್ಲಿ ಹಗ್ಗ ಸಹಿತ ಎರಡು ಪುಲ್ಲಿ (ರಾಟೆ) ಅಳವಡಿಸಿದ್ದು ಕೆಳಗೆ ಇನ್ನೊಂದು ಹಗ್ಗದಲ್ಲಿ ಹ್ಯಾಂಗರ್ ಮೂಲಕ ಬಟ್ಟೆ ನೇತು ಹಾಕಲಾಗುತ್ತದೆ.  ಹ್ಯಾಂಗರ್‍ಗಳನ್ನು ಒಂದಕ್ಕೊಂದು ಸಂಪರ್ಕಿಸುವ ಇನ್ನೊಂದು ಹಗ್ಗವಿದೆ.  ರಾಟೆಯ ಮೇಲಿನ ಸೆನ್ಸಾರ್‍ಗೆ ಮಳೆ ನೀರು ಬಿದ್ದರೆ ಮನೆಯೊಳಗಿನ ಮೋಟಾರ್‍ ಚಾಲು ಆಗುತ್ತದೆ.  ಆಗ ಹಗ್ಗದಲ್ಲಿರುವ ಹ್ಯಾಂಗರ್‍ ಸಹಿತ ಬಟ್ಟೆಗಳು ಮನೆಯೊಳಗೆ ಚಲಿಸುತ್ತವೆ.  ಮನೆಯೊಳಗೆ ಬಟ್ಟೆ ಚಲಿಸಿದಾಗ ಅಲರಾಮ್‍  ಆಗುತ್ತದೆ ಜೊತೆಗೆ ಫ್ಯಾನ್ ಕೂಡ ತಿರುಗುತ್ತದೆ.  ಸೆನ್ಸಾರ್‍ಗೆ ಮಳೆ ಬೀಳುವುದು ನಿಂತಾಗ ಬಿಸಿಲು ಬಂತೆನ್ನುವ ನೆಲೆಯಲ್ಲಿ ಒಳಹೋದ ಬಟ್ಟೆಗಳು ಮತ್ತೆ ಒಣಗಲು ಬರುತ್ತವೆ.

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ಎಷ್ಟು ಕಷ್ಟ ಅನ್ನೋದು ಅನುಭವಿಸಿದ್ದ ಈ ಪುಟ್ಟ ಬಾಲಕಿ ಸಮಸ್ಯೆಗೆ ಪರಿಹಾರವನ್ನು  ನೀಡಿದ್ದಾಳೆ.  ಈ ಹುಡುಗಿ ತನ್ನ ಸಾಧನೆಗಾಗಿ  ಉಪರಾಷ್ಟ್ರಗಳಿಂದ ಪ್ರಶಸ್ತಿ ಸ್ವೀಕರಿಸಿದ್ದಾಳೆ.  

 

 

   

Leave a Reply