ಕೃಷಿ ಮೇಳ 2013

ಕೃಷಿ - 0 Comment
Issue Date : 09.11.2013


ರೈತರಿಗೆ ಬೇಕಾದ ಎಲ್ಲಾ ಮಾಹಿತಿ, ಸೌಲಭ್ಯಗಳು ಒಂದೇ ಸೂರಿನಡಿ ಸಿಗುವ ತಾಣವೇ ‘ಕೃಷಿ ಮೇಳ’.  ಕೃಷಿ ವಿಶ್ವವಿದ್ಯಾಲಯಕ್ಕೆ 50 ವರ್ಷಗಳು ತುಂಬಿದ ಸಂದರ್ಭದ ಹಿನ್ನೆಲೆಯಲ್ಲಿ  ನವೆಂಬರ್ 7ರಿಂದ 11 ರವರೆಗೆ ನಡೆಯಲಿರುವ ಕೃಷಿ ಮೇಳಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು (ಜಿಕೆವಿಕೆ) ಸಜ್ಜಾಗಿದೆ.

ಮೇಳದ ವಿಶೇಷತೆ

  • ಮೇಳದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದ್ದು, ದೇಶ ವಿದೇಶಗಳ ವಿವಿಧ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಯಂತ್ರೋಪಕರಣಗಳ ಪ್ರದರ್ಶನ
  • ಸುಮಾರು 800 ಮಳಿಗೆಗಳ ಬೃಹತ್ ವಸ್ತು ಪ್ರದರ್ಶನ
  • ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಬೆಳೆಗಳ ವಿವಿಧ ತಳಿಗಳು ಮತ್ತು ತಂತ್ರಜ್ಞಾನಗಳನ್ನು ರೈತ ಸಮೂಹಕ್ಕೆ ಅರ್ಪಿಸಲಾಗುತ್ತದೆ.

ನ.8 ರಂದು ಮೇಳದಲ್ಲಿ ನಡೆದ ಕಾರ್ಯಕ್ರಮಗಳು

ಉತ್ತಮ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿಯನ್ನು ಪ್ರತಿ ರೈತನೂ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ರೈತ ಸಮುದಾಯ ಒಕ್ಕೊರಲಿನಿಂದ  ಪ್ರತಿಪಾದಿಸಿತು.   ಕೃಷಿ  ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೈತರಿಗೆ ಕಾರ್ಪ್ ರೈತ ಪ್ರಶಸ್ತಿ, ಜಿಲ್ಲಾಮಟ್ಟದ ಅತ್ಯುತ್ತಮ ಪ್ರಶಸ್ತಿ, ಹಾಗೂ ರೈತ ಮಹಿಳಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

‘ರೈತ ಸ್ನೇಹಿ’ ರೋಬೋಟ್ 

ಇನ್ನು ಮುಂದೆ ಹಗಲು ರಾತ್ರಿ ಎನ್ನದೆ ಜಮೀನಿನಲ್ಲಿ ಕೆಲಸ ಮಾಡಬೇಕಿಲ್ಲ.  ಈ ಕೆಲಸ ಮಾಡಲು ಈಗ ರೋಬೋಟ್ ಬರುತ್ತಿದೆ.  ಕೃಷಿ  ಚಟುವಟಿಕೆಗಳನ್ನು ತ್ವರಿತ ಗತಿಯಲ್ಲಿ ಹಾಗೂ ಕಾರ್ಮಿಕರ ಕೊರತೆ ನೀಗಿಸಲಿಕ್ಕಾಗಿ ರೈತರ ನೆರವಿಗೆ ರೋಬೋಟ್ ಧಾವಿಸುತ್ತಿದೆ.  ನಗರದ ಡಾ. ಎಂ.ಎಸ್. ರಾಮಯ್ಯ ಸ್ಕೂಲ್ ಆಫ್  ಅಡ್ವಾನ್ಸ್ ಸ್ಟಡೀಸ್ ಈ ಅವಿಷ್ಕಾರವನ್ನು ಮಾಡಿದೆ.

ಈ ‘ರೋಬೋಟ್ ‘ ನ ಉಪಯೋಗಗಳೆಂದರೆ, * ಜಮೀನು ಜಾಲಾಡಿ ಹಣ್ನುಗಳನ್ನು ಕೀಳುತ್ತದೆ * ಪ್ರತಿ ಗಿಡಕ್ಕೆ ಔಷಧ ರಿಮೋಟ್ನಲ್ಲೇ ಸಿಂಪಡಿಸುತ್ತದೆ *  ಕುಳಿತಲ್ಲಿಂದಲೇ ಎಳನೀರು ಕೀಳುತ್ತದೆ.

ನ.9 ಬೆಳಿಗ್ಗೆ 11.30 ಗಂಟೆಗೆ ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ಕ್ರಮಗಳು ಎಂಬ ವಿಚಾರವಾಗಿ ಚರ್ಚಾಗೋಷ್ಠಿ ಆಯೋಜಿಸಲಾಗಿದೆ.  ಗೋಷ್ಠಿಯ ಅಧ್ಯಕ್ಷತೆಯನ್ನು ರಾಜ್ಯ ಕೃಷಿ ಆಯೋಗದ ಅಧ್ಯಕ್ಷ ಡಾ. ಎಸ್.ಎ. ಪಾಟೀಲ್ ವಹಿಸಲಿದ್ದಾರೆ.

   

Leave a Reply