ಕೆಸುವಿನಮನೆಯಲ್ಲಿ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮ

ಚಿಕ್ಕಮಂಗಳೂರು - 0 Comment
Issue Date : 08.05.2015

ಭಂಡಿಗಡಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭಂಡಿಗಡಿ ಸಮೀಪದ ಕೆಸುವಿನಮನೆಯ ಶ್ರೀ ಮಾಸ್ತಮ್ಮ ದೇವಿ ದೇವಸ್ಥಾನ ಸಮಿತಿ ವತಿಯಿಂದ ಇತ್ತೀಚೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವ ಚನ ನೀಡಿದ ಹಂಗಾರಕಟ್ಟೆಯ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಹಿಂದು ಸಮಾಜದಲ್ಲಿ ಯಾವುದೇ ಭೇದ ಭಾವ ಸಲ್ಲದು. ಶರೀರದಲ್ಲಿರುವ ಎಲ್ಲ ಅಂಗಗಳಲ್ಲಿ ಮೇಲುಕೀಳೆಂಬ ಭೇದವೆಣಿಸಲು ಹೇಗೆ ಅಸಾಧ್ಯವೋ ಹಾಗೆಯೇ ಹಿಂದು ಸಮಾಜದಲ್ಲಿ ಜಾತಿಜಾತಿಗಳ ನಡುವೆ ಮೇಲುಕೀಳೆಂಬ ಭಾವನೆ ಬಿತ್ತುವುದು ಅಸಮಂಜಸ ಎಂದು ಹೇಳಿದರು.
ಧಾರ್ಮಿಕ ಉಪನ್ಯಾಸ ನೀಡಿದ ವಿಕ್ರಮ ಪತ್ರಿಕೆ ಸಂಪಾದಕ ದು.ಗು. ಲಕ್ಷ್ಮಣ, ರಾಜ್ಯ ಸರ್ಕಾರ ಜಾತಿಗಣತಿ ಹೆಸರಿನಲ್ಲಿ ಸಮಾಜದಲ್ಲಿ ತಾರತಮ್ಯ ನಿರ್ಮಿಸುತ್ತಿದೆ. ಜಾತಿ ಜಾತಿಗಳ ನಡುವೆ ಒಡಕು ತಂದು ಸಾಮರಸ್ಯ ಭಾವನೆಯನ್ನು ಹದಗೆಡಿಸುತ್ತಿದೆ ಎಂದು ದೂರಿದರು. ವೇದ, ಉಪನಿಷತ್‌ಗಳಲ್ಲೂ ಜಾತಿಭೇದದ ಉಲ್ಲೇಖ ಎಲ್ಲೂ ಇಲ್ಲ. ಅವೆಲ್ಲ ಮನುಷ್ಯ ನಿರ್ಮಿತ, ಅಷ್ಟೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೋದಯ ಯೋಜನೆ ಯ ಯೋಜನಾಧಿಕಾರಿ ಕು. ಉಮಾವತಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ಗುಡ್ಡಪ್ಪ ಜೋಗಿ ಮತ್ತು ತಂಡದವರಿಂದ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ನಡೆಯಿತು.
ಕಳೆದ ಐದು ವರ್ಷಗಳಿಂದ ಕೆಸುವಿನಮನೆಯಲ್ಲಿ ಬೆಂಗಳೂರಿನ ಭಾರತಿ ಪ್ರತಿಷ್ಠಾನದ ಸಹಯೋಗದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ದಲಿತ ಬಂಧುಗಳೇ ಈ ಕಾರ್ಯಕ್ರಮದ ವ್ಯವಸ್ಥೆ, ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವುದು ಗಮ ನಾರ್ಹ. ಕಾರ್ಯಕ್ರಮದಲ್ಲಿ ಭಾರತಿ ಪ್ರತಿಷ್ಠಾನದ ಎಚ್.ಎಸ್. ಶ್ರೀನಿವಾಸಮೂರ್ತಿ, ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ ಕಾರಂತ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

   

Leave a Reply