ಕೇರಳ-ಭಾರತದ ಪ್ರೇಕ್ಷಣೀಯ ಸ್ಥಳಗಳಲ್ಲೊಂದು

ಸಂಸ್ಕೃತಿ-ಕಲೆ - 0 Comment
Issue Date : 15.02.2014

ಸಸ್ಯ ಶಾಮಲೆ ವಿಜೃಂಭಿಸಿರುವ ಕೇರಳ ಹಲವು ಧರ್ಮಗಳ ಸಮನ್ವಯ ಉಂಟುಮಾಡಿರುವ ರಾಜ್ಯ.  ಆದಿಶಂಕರಾಚಾರ್ಯರು ಅವತರಿಸಿದ ಭೂಮಿ.  ಪ್ರಸಿದ್ಧ ನೃತ್ಯಶೈಲಿ ಕಥಕ್ಕಳಿಯ ಜನ್ಮಭೂಮಿ.  ಇಲ್ಲಿನ ಕೋವಲಂ ಕಡಲತೀರ ಭಾರತದಲ್ಲಿಯೇ ಅತ್ಯಂತ ಸುಂದರ ತಾಣ.  ನಿಸರ್ಗ ಕೇರಳದಲ್ಲಿ ಮನೆ ಮಾಡಿದೆ. ತೆಂಗಿನ ನಾರಿನ ಉದ್ಯಮಕ್ಕೆ ಕೇರಳ ಹೆಸರುವಾಸಿ. ಕೇರಳದ ಕೊಚ್ಚಿನ್‍ ಪ್ರಮುಖ ಬಂದರು.  

ತಿರುವನಂತಪುರ ಕೇರಳದ ರಾಜಧಾನಿ.ಕೇರಳ, ಭಾರತ ಗಣರಾಜ್ಯದ ಒಂದು ರಾಜ್ಯವಾಗಿದ್ದು, ಇದು 14 ಜಿಲ್ಲೆಗಳು ಅಥವಾ ಆಡಳಿತ ವಲಯಗಳನ್ನು ಹೊಂದಿದೆ. ಪ್ರಮುಖ ನಗರಗಳೆಂದರೆ ತಿರುವನಂತಪುರಂ, ಕೊಚ್ಚಿ ಮತ್ತು ಕೋಜಿಕ್ಕೋಡ್. ರಾಜ್ಯದಲ್ಲಿ ಮೂರು ವಿಮಾನ ನಿಲ್ದಾಣಗಳಿದ್ದು, ಇದು ಅಂತಾರಾಷ್ಟ್ರೀಯ ಹಾಗೂ ದೇಶೀಯ ಸಂಪರ್ಕಗಳನ್ನು ನೀಡುತ್ತದೆ.

ಕೇರಳದ ಇತಿಹಾಸ:ಭಾರತದ ಮಸಾಲೆ ತೀರಪ್ರದೇಶ ಎಂದು ಕರೆಯಲಾಗುವ ಪುರಾತನ ಕೇರಳ ಗ್ರೀಕರು, ರೋಮನ್ನರು, ಅರಬ್ಬರು, ಚೈನೀಯರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಬ್ರಿಟಿಷರುಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಎಲ್ಲಾ ಪ್ರವಾಸಿಗರು ಮತ್ತು ವ್ಯಾಪಾರಿಗಳಿಗೆ  ಆತಿಥ್ಯವನ್ನು ನೀಡಿದೆ. 

ಕೇರಳದ ಭೂಗೋಳ: ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದೊಂದಿಗೆ, ಪಶ್ಚಿಮ ಘಟ್ಟವು ಪೂರ್ವದಲ್ಲಿ 500-2700 ಮೀ ಇದ್ದು, ಇದು ನಲವತ್ತ ನಾಲ್ಕು ನದಿಗಳ ಜಾಲವನ್ನು ಹೊಂದಿರುವ ಕೇರಳ ವೈವಿಧ್ಯಮಯ ಭೌಗೋಳಿಕ ಗುಣಲಕ್ಷಣಗಳನ್ನು ಹೊಂದಿದೆ. ಎತ್ತರದ ಪರ್ವತಗಳಿಂದ ಅಂತ್ಯವಿಲ್ಲದ ಹಿನ್ನೀರು ಮತ್ತು ವಿಸ್ತಾರವನ್ನು ಹೊಂದಿದು, ಕೇರಳವು ಎಲ್ಲವನ್ನೂ ಹೊಂದಿದೆ.

ಸಮಾಜ: ಭಾರತದ ಹೆಚ್ಚು ಸಾಕ್ಷರ ಮತ್ತು ಸಾಮಾಜಿಕವಾಗಿ ಮುಂದುವರೆದಿರುವ ರಾಜ್ಯಗಳಲ್ಲಿ ಒಂದಾದ ಕೇರಳದ ಜನರು ವಿಶಿಷ್ಟ ಕಾಸ್ಮೋಪಾಲಿಟನ್ ದೃಷ್ಟಿಕೋನವನ್ನು ಹೊಂದಿದ್ದು, ಇದು ಅವರ ತಾಳ್ಮೆ ಮತ್ತು ಸಾರ್ವತ್ರಿಕ ಹೊರನೋಟದ ಮನೋಭಾವದಲ್ಲಿ ಪ್ರತಿಫಲಿಸುತ್ತದೆ. ಕೇರಳದ ಸಮ್ಮಿಶ್ರ ಸಂಸ್ಕೃತಿ ಅನೇಕ ನೆಲ ಮತ್ತು ಮತಗಳನ್ನು ವಿಶ್ವಾದ್ಯಂತ ಕೊಡುಗೆ ನೀಡಲು ಕಾರಣವಾಗಿದೆ.

ಕೇರಳಿಯನ್ನರು ಅಧಿಕ ಪ್ರಮಾಣದ ಜಾಗೃತಿ ಹಾಗೂ ರಾಜಕೀಯ ಪ್ರಜ್ಞೆಯನ್ನು ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಹ, ಕೇರಳಿಯನ್ನರು ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಮಹಿಳೆಯರ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿರುವ ಏಷ್ಯಾದ ರಾಜ್ಯಗಳಲ್ಲಿ ಒಂದಾಗಿದೆ. ಇದು ರಾಜ್ಯದಲ್ಲಿ ಮಹಿಳೆಯರು ಕುಟುಂಬ ಹಾಗೂ ಸಮಾಜ ಎರಡರಲ್ಲಿಯೂ ಉತ್ತಮ ಸ್ಥಾನ ಹೊಂದಲು ನೆರವಾಗಿದೆ. 

ಹವಾಮಾನ:ವರ್ಷವಿಡೀ ಉಲ್ಲಾಸದಾಯಕ ಹಾಗೂ ಸಮಾನ ಹವಾಮಾನವನ್ನು ಹೊಂದಿರುವುದರಿಂದ, ಕೇರಳದುದ್ದಕ್ಕೂ ಕರಾವಳಿ ಮತ್ತು ಪಶ್ಚಿಮ ಘಟ್ಟವನ್ನು ಹೊಂದಿರುವ ಉಷ್ಣವಲಯ ಪ್ರದೇಶವಾಗಿದೆ. 


ಕೇರಳ, ಆಯುರ್ವೇದದ ನೆಲ

ಕೇರಳದ ಸಮಾನ ಹವಾಮಾನ, ಪ್ರಾಕೃತಿಕವಾಗಿ ಸಮೃದ್ಧವಾಗಿರುವ ಅರಣ್ಯ (ಮೂಲಿಕೆ ಮತ್ತು ಔಷಧೀಯ ಸಸ್ಯಗಳ ಸಮೃದ್ಧಿಯೊಂದಿಗೆ), ಮತ್ತು ತಂಪಾದ ಮುಂಗಾರು ಹವಾಮಾನಗಳು  ಆಯುರ್ವೇದದ ಗುಣಕಾರಿ ಚಿಕಿತ್ಸೆಗೆ ಸೂಕ್ತವಾಗಿದೆ.
ಭಾರತದಲ್ಲಿ ಸುಮಾರು ಕ್ರಿ.ಪೂ. 600 ರಲ್ಲಿ ಆಯುರ್ವೇದ ಉಗಮವಾಗಿದೆ.  ಔಷಧಿಯ ಈ ಹೊಸ ಪದ್ಧತಿಯು ಶರೀರವನ್ನು ಬಾಧಿಸುವ ನೋವುಗಳನ್ನು ತಡೆಯುವುದರೊಂದಿಗೆ ಅವುಗಳನ್ನು ಗುಣಪಡಿಸುತ್ತದೆ. ದ್ರಾವಿಡರು ಮತ್ತು ಆರ್ಯನ್ನರು ಇಲ್ಲಿಯವರೆಗೂ ಆಯುರ್ವೇದವನ್ನು ಅಭ್ಯಸಿಸಿದ್ದಾರೆ. ಇಂದು ಇದು ವೈದ್ಯಕೀಯಶಾಸ್ತ್ರದ ವಿಶಿಷ್ಟ ಮತ್ತು ಅವಿಭಜಿತ ಶಾಖೆಯಾಗಿದ್ದು – ಇದು ಶರೀರದ ಸ್ವಭಾವಗಳಾದ ವಾತ, ಪಿತ್ತ ಮತ್ತು ಕಫದ ರೋಗನಿದಾನದ ಆಧಾರದ ಮೇಲೆ ಪೂರ್ಣ ಪ್ರಾಕೃತಿಕ ಪದ್ಧತಿಯಲ್ಲಿ ಸೂಕ್ತ ಸಂತುಲನಕ್ಕಾಗಿ ಚಿಕಿತ್ಸೆ ನೀಡುತ್ತದೆ.
 
ಸಾಂಪ್ರದಾಯಿಕ ಹಬ್ಬಗಳು
ಹಬ್ಬಗಳು ದೇವರ ಸ್ವಂತ ನಾಡಿನಲ್ಲಿ ನಿಜವಾದ ಆಚರಣೆಯನ್ನು ನಡೆಸುತ್ತವೆ; ಕೇರಳ ಜೀವನಶೈಲಿಯ ಸರಳತೆಯ ಗುಣಸ್ವಭಾವದ ಮೇಲೆ ಈ ಆಚರಣೆಗಳು ವೈಭವವನ್ನು ಬೀರುತ್ತವೆ. ರಾಜ್ಯದ ಹಬ್ಬವಾದ ಓಣಂ  ಅಥವಾ ಸ್ಥಳೀಯ ಕ್ಷೇತ್ರ ಪೂಜೆಯಾಗಲೀ, ಹೊಸ ಉಡುಗೆ ಆನಂದದಾಯಕ ಆಚರಣೆಗಳೊಂದಿಗೆ ಕೇರಳದ ಹಬ್ಬಗಳು ಈ ನೆಲದ ಕಲೆ ಮತ್ತು ಸಂಸ್ಕೃತಿಯನ್ನು ಸಾಂಸ್ಕೃತಿಕವಾಗಿ ಉಳಿಸಿಕೊಂಡು ಬಂದಿದೆ. ಧರ್ಮವಾಗಲೀ ಅಥವಾ ಸಾಮಾಜಿಕವಾಗಲೀ ಅಥವಾ ಆಧುನಿಕತೆಯಾಗಲೀ, ಇಲ್ಲಿನ ಹಬ್ಬಗಳು 2000 ವರ್ಷಗಳಷ್ಟು ಹಳೆಯದಾದ ಕುಟಿಯಾಟ್ಟಂನಿಂದ ಪ್ರಸ್ತುತ ಹಂತದವರೆಗೂ ಆಚರಣೆಗಳನ್ನು ನಡೆಸದೇ ಪೂರ್ಣವಾಗುವುದಿಲ್ಲ.
 
ಓಣಮ್ ‌ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್(ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ – ಇವೆಲ್ಲ ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬಕ್ಕಾಗಿ ಇಲ್ಲಿನ ಜನರು ಹೊಸಬಟ್ಟೆಗಳನ್ನು ತೊಡುವುದು ವಾಡಿಕೆ. 
 
ಚೆಟ್ಟಿಕುಲಂಗರ ಭರಣಿ
ಸ್ಥಳ: ಚೆಟ್ಟಿಕುಲಂಗರ ಭಗವತಿ ದೇವಸ್ಥಾನ, ಕಾಯಂಕುಲಂ, ಅಳಪ್ಪುಳ ಜಿಲ್ಲೆ
 
ಮಲಯಾಳಿ ಮಾಸ ಕುಂಭಂನಲ್ಲಿ ನಡೆಯುವ ಈ ವಾರ್ಷಿಕ ಹಬ್ಬ ಕೇರಳದಲ್ಲಿ ಜನಪ್ರಿಯವಾಗಿದೆ. ಹಬ್ಬ ಮತ್ತು ದೇವಸ್ಥಾನವು ಭಗವತಿಗೆ ಅರ್ಪಣೆಯಾಗಿದೆ. ದಕ್ಷಿಣ ಕೇರಳದ ಹೆಚ್ಚಿನ ಎಲ್ಲಾ ಜಾನಪದ ಕಲೆಗಳೂ ಈ ದೇವಸ್ಥಾನದಲ್ಲಿ ಕಂಡುಬರುತ್ತವೆ. ರಾತ್ರಿಯಿಡೀ ನಡೆಯುವ ಕಥಕ್ಕಳಿ ಉತ್ಸವ ಕಥಕ್ಕಳಿ ಪ್ರೇಮಿಗಳಿಗೆ ನೋಡಲೇಬೇಕಾದ ಕಾರ್ಯಕ್ರಮವಾಗಿದೆ.

ಇದರಲ್ಲಿನ ಕೆಲವು ಅತ್ಯಾಕರ್ಷಕ ಆಚರಣೆಗಳು ಕೆಟ್ಟುಕಳ್ಚಾ ಮೆರವಣಿಗೆ, ಕುದಿಯೋಟ್ಟಂ, ಪಾದಾಯನಿ, ಕೋಲ್ಕಲಿ ಮತ್ತು ಅಮ್ಮನ್ ಕೂಡಂಗಳನ್ನು ಒಳಗೊಂಡಿದೆ. ಕೆಟ್ಟುಕಳ್ಚಾ ಗಾಢವಾಗಿ ಅಲಂಕರಿಸಿದ ರಚನೆಗಳು, ಎತ್ತರವಾದ ಮತ್ತು ದೊಡ್ಡದಾದ ಕುದುರೆಗಳು ಮತ್ತು ಸಣ್ಣ ರಥಗಳು, ಸಾಂಸ್ಕೃತಿಕ ಉತ್ಸವಗಳನ್ನು ಒಳಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ, ಇದು ನೋಡಲು ಮನಮೋಹಕ ದೃಷ್ಯವಾಗಿರುತ್ತದೆ.

 

ತೈಪೂಯ ಮಹೋತ್ಸವಂ

ಸ್ಥಳ: ಕೂರ್ಕಂಚೆರಿ ಶ್ರೀ ಮಹೇಶ್ವರ ದೇವಸ್ಥಾನ, ತ್ರಿಶ್ಶೂರು ಜಿಲ್ಲೆ.

ದೇವಸ್ಥಾನದ ಪ್ರಮುಖ ದೇವರು ಮಹೇಶ್ವರ(ಶಿವ)ನಾದರೂ, ಹಬ್ಬವನ್ನು ಆತನ ಮಗ ಸುಬ್ರಮಣ್ಯನಿಗೆ ಅರ್ಪಿಸಿ, ಏಳು ದಿನಗಳ ಕಾಲ ತೈಪೂಯ ಮಹೋತ್ಸವಂವನ್ನು ನಡೆಸಲಾಗುತ್ತದೆ. ಕಾವಡಿಯಾಟ್ಟಂ ಎನ್ನುವ ಧಾರ್ಮಿಕ ನೃತ್ಯ ಸುಮಾರು 10 ಗುಂಪುಗಳಲ್ಲಿ ಪ್ರತಿಯೊಂದರಲ್ಲೂ 30 ಅಂಬಾಲಕಾವಡಿ ಮತ್ತು 60 ಪೂಕ್ಕಾವಡಿಗಳನ್ನು ಹೊತ್ತಿರುವ ಭಕ್ತರು ಭಾಗವಹಿಸುತ್ತಾರೆ. ಅಂಬಾಲಕ್ಕಾವಡಿ ಎನ್ನುವುದು ದೇವಸ್ಥಾನದ ಅಲಂಕೃತ ಮಾದರಿಯಾಗಿದ್ದು, ಇದು ಆರರಿಂದ 10 ಅಡಿ ಎತ್ತರವಿರುತ್ತದೆ, ಇದನ್ನು ಪುರುಷ ಭಕ್ತ ಭುಜದ ಮೇಲೆ ಹೊತ್ತಿರುತ್ತಾನೆ. ಪೂಕ್ಕಾವಡಿ ಬಿಲ್ಲಿನಾಕಾರದಲ್ಲಿದ್ದು, ಹೂವುಗಳಿಂದ ಅಲಂಕೃತವಾಗಿರುತ್ತದೆ. ಕಾವಡಿಯಾಟ್ಟಂ ಮಧ್ಯಾಹ್ನದವರೆಗೂ ನಡೆಯುತ್ತದೆ, ಇದರ ಹಿಂದೆಯೇ ಆನೆ ಉತ್ಸವ ನಡೆಯುತ್ತದೆ. ನಂತರ ಇದು ಮತ್ತೆ ರಾತ್ರಿ ಆರಂಭವಾಗುತ್ತದೆ. 

ಪ್ರೇಕ್ಷಣೀಯ ಸ್ಥಳಗಳು

ಮುನ್ನಾರ್‍

ಕೇರಳವು ವಿದೇಶಿ ಮತ್ತು ಇಲ್ಲಿನ ಪ್ರವಾಸಿಗರಿಗೆ ಜನಪ್ರಿಯ ಪ್ರವಾಸಿ ತಾಣವಾಗಿರಲು  ಇದು ಒಂದು ಪ್ರಮುಖ ಕಾರಣವಾಗಿದೆ. ಮೂರು ಸಣ್ಣ ನದಿಗಳಾದ ಮುತಿರಪುಜ, ನಲ್ಲತಣ್ಣಿ ಮತ್ತು ಕುಂಡಲಗಳು ಸಂಗಮವಾಗುವಲ್ಲಿರುವ, ಸಮುದ್ರ ಮಟ್ಟಕ್ಕಿಂತ 1600 ಮೀ ಎತ್ತರದಲ್ಲಿರುವ ಮುನ್ನಾರ್ ಗಿರಿಧಾಮವು ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಆಡಳಿತಗಾರರ ದಕ್ಷಿಣ ಭಾರತದ ಬೇಸಿಗೆ ಧಾಮವಾಗಿತ್ತು.

ಮುನ್ನಾರಿನ ಮನಸೂರೆಗೊಳ್ಳುವ ಗಿರಿಧಾಮವನ್ನು ಆನಂದಿಸಲು ಪ್ರವಾಸಿಗರಿಗೆ ಚಾರಣಕ್ಕೆ [ಟ್ರೆಕ್ಕಿಂಗ್] ಅದ್ಭುತ ಸ್ಥಳವಾಗಿರುವ ಇದು ಮಂಜಿನಿಂದ ಆವೃತವಾದ ಬೆಟ್ಟಗಳು ಮತ್ತು ವಿಸ್ತಾರವಾದ ಟೀ ತೋಟಗಳ ಅದ್ದೂರಿಯಾದ ನೋಟವನ್ನು ಒದಗಿಸುತ್ತದೆ. ಈ ಬೆಟ್ಟಗಳು ನೀಲಕುರಿಂಜಿ ಹೂವುಗಳಿಂದ ಆವೃತವಾದಾಗ ಈ ಉದ್ಯಾನವನವು ಪ್ರವಾಸಿಗರಿಂದ ಕಿಕ್ಕಿರಿದಿರುತ್ತದೆ.

ತೇಕ್ಕಡಿ

ತೇಕ್ಕಡಿಯೆಂಬ ಶಬ್ದವೇ ಆನೆಗಳು ಮತ್ತು ಸಂಬಾರಗಳ ಸುವಾಸನೆಯನ್ನು ಹೊತ್ತಿರುವ ಕೊನೆಯೇ ಕಾಣದ ಬೆಟ್ಟಗಳ ಸರಮಾಲೆಯ ಚಿತ್ರಗಳನ್ನು ತರುತ್ತದೆ. ತೇಕ್ಕಡಿಯ ಪೆರಿಯಾರ್ ಅರಣ್ಯವು ಭಾರತದಲ್ಲಿನ ಒಂದು ಅತ್ಯುತ್ತಮ ವನ್ಯಜೀವಿಗಳ ಅರಣ್ಯವಾಗಿದ್ದು, ಮತ್ತು ಸಂಪೂರ್ಣ ಜಿಲ್ಲೆಯು ಚಿತ್ರಸದೃಶವಾದ ತೋಟಗಳು, ಟ್ರೆಕ್ಕಿಂಗ್ ಮತ್ತು ಬೆಟ್ಟದ ನಡಿಗೆಗಳಿಗೆ ಅವಕಾಶ ಕೊಡುವ ಬೆಟ್ಟಗಳ ಪಟ್ಟಣಗಳಿಂದ ಕೂಡಿದೆ.

 


   

Leave a Reply