ಕ್ಯಾಲಿಫೋರ್ನಿಯದಲ್ಲಿ ಶಾಂತಕ್ಕ ಪ್ರತಿಪಾದನೆ

ಸೇವಾ ವಿಭಾಗ - 0 Comment
Issue Date : 30.04.2015

ಮಹಿಳೆಯರ ಸಬಲೀಕರಣವಲ್ಲ , ಆದರೆ ಅವರಲ್ಲಿರುವ ಶಕ್ತಿಯ ಅರಿವು ಮೂಡಿಸಬೇಕಿದೆ

ಸನ್ನಿವೇಲ್, ಕ್ಯಾಲಿಫೋರ್ನಿಯ (ಅಮೆರಿಕ): ‘ಮಹಿಳೆಯರ ಸಬಲೀಕರಣದ ಮಾತುಗಳು ಆಗಾಗ ಕೇಳಿಬರುತ್ತಿವೆ. ಮಹಿಳೆಯರಿಗೆ ಬೇಕಿರುವುದು ಸಬಲೀಕರಣವಲ್ಲ. ಅವರಲ್ಲಿ ಸಬಲೀಕರಣ ಅಂತರ್ಗತವಾಗಿದೆ. ಅವರಿಗೆ ಬೇಕಾಗಿರುವುದು ಅದರ ಅರಿವು ಹಾಗೂ ಅದನ್ನು ಗುರುತಿಸುವಿಕೆ. ಈ ತಿಳಿವಳಿಕೆ ಮೂಡಿದರೆ ಮಹಿಳೆಯರು ಸಶಕ್ತರಾಗಲು ಸಾಧ್ಯ’ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕರಾದ ವಿ. ಶಾಂತಕ್ಕ ಅವರು ತಿಳಿಸಿದರು.
ಅವರು ಇಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.
ಸ್ಯಾನ್‌ಫ್ರಾನ್ಸಿಸ್ಕೋ ನಗರದ ವಿವಿಧೆಡೆಯಲ್ಲಿ ಶಾಂತಕ್ಕ ಅವರು ಹಲವು ಸರ್ಕಾರೇತರ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿ ಕುರಿತು ವಿವಿಧ ಸಂಘಟನೆಗಳು ಅಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಾಂತಕ್ಕ ಅವರು ಹಿಂದು ಸಮುದಾಯದ ಹದಿಹರೆಯದ ಹೆಣ್ಣುಮಕ್ಕಳದೊಂದಿಗೂ ಸಂವಾದ ನಡೆಸಿದರು. ಝಾನ್ಸಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ, ಜೀಜಾಮಾತೆ ಮುಂತಾದವರು ಭಾರತೀಯ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಭಾರತೀಯ ಸಂಸ್ಕೃತಿ ವಿದೇಶಿ ಆಕ್ರಮಣ ಎದುರಿಸಿ ಉಳಿದುಕೊಂಡಿದೆ ಎಂದು ಶಾಂತಕ್ಕ ಹೇಳಿದರು. ರಾಷ್ಟ್ರ ಸೇವಿಕಾ ಸಮಿತಿ ಭಾರತದಲ್ಲಿ 6050ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಅಲ್ಲದೇ, 810ಕ್ಕೂ ಹೆಚ್ಚು ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ.

   

Leave a Reply