ಗಿನ್ನಿಸ್ ವೀರ

ಉಡುಪಿ ; ಜಿಲ್ಲೆಗಳು - 0 Comment
Issue Date : 02.12.2013

ಸಾಧನೆಗೆ ಅಸಾಧ್ಯವಾದದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ,ನಂಬಿಕೆ, ಸತತ ಪ್ರಯತ್ನ ಮುಖ್ಯವೆನ್ನುವುದನ್ನು ಮನದಟ್ಟು ಮಾಡಿಕೊಂಡಿರುವ ಕೋಡಿ ಕನ್ಯಾನದ ಗೋಪಾಲ್ ಖಾರ್ವಿ 2011 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಕಟ್ಟಿಹಾಕಿದ್ದರು. ಅಲ್ಲಿಗೆ ಸುಮ್ಮನಾಗದ ಅವರು ಕಳೆದ ಜನವರಿಯಲ್ಲಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಿಂದ ಕೈಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬಂಧಿಸಿಕೊಂಡು ಮಲ್ಪೆ ಕಿನಾರೆ ತನಕ ಈಜೀ ಗಿನ್ನಿಸ್ ದಾಖಲೆ ನಿರ್ಮಾಣದ ಹೊಸ್ತಿನಲ್ಲಿದ್ದರೆ ಜಿ.ಪಿ.ಎಸ್ ಕ್ಯಾಮಾರ ಅಳವಡಿಸಲಿಲ್ಲವೆಂಬ ಕಾರಣಕ್ಕೆ ದಾಖಲೆಯು ಕೈತಪ್ಪಿತ್ತು.
 
ಆದರೆ ಗಿನ್ನಿಸ್ ಪಡೆಯಬೇಕೆಂಬ ಮಹಾದಾಸೆಯುಳ್ಳ ಖಾರ್ವಿ ಡಿಸೆಂಬರ್ 1ರಂದು ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಕಡಲಕಿನಾರೆಗೆ ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಕೋಳದಿಂದ ಬಂಧಿಸಿ, ಕಾಲುಗಳನ್ನು ಕಬ್ಬಿಣದ ಸಂಕೋಲೆಯಲ್ಲಿ ಬಿಗಿದು ಮಲ್ಪೆಯ ಸೈಂಟ್ ಮೇರೀಸ್ ದ್ವೀಪದಿಂದ ಭೋರ್ಗರೆವ ಕಡಲಿಗೆ ಧುಮಿಕಿದ ಖಾರ್ವಿ ಮಲ್ಪೆ ಬೀಚ್ ವರಗೆ 3.07 ಕಿ.ಮೀ ದೂರವನ್ನು ಕೇವಲ 2 ಗಂಟೆ 43 ನಿಮಿಷ 35 ಸೆಕೆಂಡ್ನಲ್ಲಿ ಕ್ರಮಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದರು.  ಲಂಡನ್ ನ ಗಿನ್ನಿಸ್ ದಾಖಲೆ ತೀರ್ಪುಗಾರ ಪ್ರವೀಣ್ ಪಟೇಲ್ ಎಂ.ಆರ್. ಅವರು ಇವರ ದಾಖಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಿ ಸ್ಥಳದಲ್ಲಿಯೇ ದಾಖಲೆ ಪತ್ರವನ್ನು ನೀಡಿ ಪುರಸ್ಕರಿಸಿದರು.  
 
 
   

Leave a Reply