ಗುಜರಾತಿನಲ್ಲಿ ಗೋ ರಕ್ಷಣೆಗಾಗಿ ಗೋ ಧಾಮ

ಗ್ರಾಮೀಣ - 0 Comment
Issue Date : 17.12.2013

ಅನಾದಿ ಕಾಲದಿಂದಲೂ ಮಾನವನು ಗೋವುಗಳೊಡನೆ ಸಹಬಾಳ್ವೆ ನಡೆಸಿದ್ದಾನೆ ಮಾತ್ರವಲ್ಲದೇ ಗೋವಿನಿಂದ ಪಡೆಯುವ ಉತ್ಪನ್ನ, ಉಪಯೋಗಗಳನ್ನು ಮನಗಂಡು ಗೋವಿಗೆ ಪೂಜ್ಯನೀಯ ಸ್ಥಾನ ನೀಡಿದ್ದಾನೆ. ಆದರೆ ಇಂದು ನಗರೀಕರಣದ ಪರಿಣಾಮವಾಗಿ ಲಕ್ಷ- ಲಕ್ಷ ಗೋವುಗಳು ಕಾಸಾಯಿಕಾನೆಯನ್ನು ಸೇರುತ್ತಿವೆ. ದುರಂತವೆಂದರೆ ಗೋವಿನ ಹಾಲು ಉತ್ಪನ್ನಗಳನ್ನು ಸವಿಯುವ ನಾವು ನಮ್ಮ ತಾಯಿಯಂತಹ ಗೋವಿನ ಸಂರಕ್ಷಣೆ ಮತ್ತು ಸಂವರ್ಧನೆಯ ಬಗ್ಗೆ ಜಾಗೃತರಾಗಬೇಕು.

ಗೋ ಆಧಾರಿತ ಆರ್ಥಿಕತೆ ಉತ್ತೇಜಿಸುವ ಸಲುವಾಗಿ ಗೋವುಗಳಿಗಾಗಿ ಮೀಸಲಿಟ್ಟ ಧಾಮವೊಂದನ್ನು ನಿರ್ಮಿಸಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ.  ಗಾಂಧೀಜಿ ಅವರ ಜನ್ಮಸ್ಥಳವಾದ ಪೋರ್ಬಂದರ್ ಜಿಲ್ಲೆಯ ರಣವವ್ ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಈ ವಿಶೇಷ ಗೋಧಾಮ ನಿರ್ಮಾಣಗೊಳ್ಳಲಿದೆ.

ಒಂದು ವೇಳೆ ಯೋಜನೆ ಕಾರ್ಯರೂಪಕ್ಕೆ ಬಂದರೆ, ಕೆಲವೊಂದು ವೈಶಿಷ್ಟ್ಯಗಳಿಂದಾಗಿ ಈ ಧಾಮ ವಿಶ್ವದಲ್ಲಿಯೇ ಪ್ರಥಮವಾಗಲಿದೆ ಮತ್ತು ಯೋಜನೆಗೆ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ 20 ಕೋಟಿ ಮೀಸಲಿಟ್ಟಿದೆ ಎಂದು ಸರ್ಕಾರ ಹೇಳಿದೆ.

ಗೋ ಧಾಮದ ವೈಶಿಷ್ಟ್ಯತೆ

ಗೋ ಧಾಮ 900 ಹೆಕ್ಟೇರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ.  ಇದು 10 ಸಾವಿರ ಗೋವುಗಳಿಗೆ ಆಶ್ರಯ ಕಲ್ಪಿಸಲಿದೆ.

ಗೋವಿನ ಹಾಲು, ಸಗಣಿ ಮತ್ತು ಮೂತ್ರದಿಂದ ತಯಾರಾಗುವ ಉತ್ಪನ್ನಗಳನ್ನು ಹೇರಳ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.  ಅಲ್ಲದೆ ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳನ್ನು ಕೂಡ ಧಾಮದಲ್ಲಿ ತಯಾರು ಮಾಡಲಾಗುವುದು.

ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಗೋವಿನಿಂದ ಪ್ರಯೋಜನ ಪಡೆದವರೆ, ಗೋವಿನ ಹಾಲುಂಡ ನಮ್ಮ ಮೇಲೆ ಗೋಸಂರಕ್ಷಣೆಯ ಹೊಣೆಗಾರಿಕೆ ಇದೆ.

ಮನೆಯಲ್ಲಿ ಗೋವನ್ನು ಸಾಕಲು ಸಾಧ್ಯವಿಲ್ಲದಿದ್ದರೂ ಗೋಶಾಲೆಗಳಲ್ಲಿ ಸಕ್ರಿಯವಾಗಿ  ಪಾಲ್ಗೊಳ್ಳಬಹುದು.ನಮ್ಮ ಸಂಪಾದನೆಯ ಒಂದಂಶವನ್ನು ಗೋಮಾತೆಯ ಸೇವೆಗೆ ನೀಡಬಹುದು.ರಜಾದಿನಗಳಲ್ಲಿ ಮನೆಮಂದಿಯನ್ನು ಗೋಶಾಲೆಗೆ ಕರೆತಂದು ಅವರಲ್ಲೂ ಗೋವಿನ ಬಗ್ಗೆ ಭಕ್ತಿ ಮೂಡುವಂತೆ ಮಾಡುವುದು.ಒಟ್ಟಾರೆಯಾಗಿ ಗೋಸಂರಕ್ಷಣೆಗೆ ಕೈಜೋಡಿಸುವುದು ಇಂದಿನ ಅತ್ಯಗತ್ಯ ಯಾಕೆಂದರೆ ಗೋವು ಉಳಿದರೆ ಮಾತ್ರ ನಾವು ನೀವೂ ಉಳಿಯಲು ಸಾಧ್ಯ ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗೋವುಗಳನ್ನು ಮೃಗಾಲಯದಲ್ಲಿ ನೋಡುವ ದಿನಗಳು ನಮ್ಮ ಕಣ್ಣಮುಂದಿದೆ. 

   

Leave a Reply