ಗುಲಾಮಗಿರಿ ತೊಳೆಯಲು ಉತ್ತಮ ಚಿಂತನೆ ವಿದ್ಯಾಭ್ಯಾಸ ಅಗತ್ಯ: ಸ್ವಾಮಿ ತ್ಯಾಗೀಶ್ವರನಂದಜೀ ಮಹಾರಾಜ್‌

ಚಾಮರಾಜನಗರ - 0 Comment
Issue Date : 28.11.2013

ಚಾಮರಾಜನಗರ: ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ಗುಲಾಮಗಿರಿ ತೊಳೆಯಲು ಸಾದ್ಯವಾಗಿಲ್ಲ. ಇದಕ್ಕಾಗಿ ಯುವಕರು ಉತ್ತಮ ಶಿಕ್ಷಣ ಹಾಗೂ ಉತ್ತಮ ಚಿಂತನೆ ಅಗತ್ಯವಿದೆ ಎಂದು ಬೆಳಗಾಂನ ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗೀಶ್ವರನಂದಜೀ ಮಹಾರಾಜ್‌ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
 ಅವರು ಚಾಮರಾಜನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಮಕೃಷ್ಣ ಆಶ್ರಮ, ರಾಮಕೃಷ್ಣ ಮಿಷನ್‌ ಹಾಗೂ ಚಾಮರಾಜನಗರದ 150 ನೇ ಜನ್ಮ ವರ್ಷಾಚರಣೆಯ ರಥಯಾತ್ರೆ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಉಪನ್ಯಾಸದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜ ಇಂದು ಸ್ವಾರ್ಥದಿಂದ ಕೂಡಿದೆ ದೇಶ ನಮಗೇನು ಮಾಡಿತು ಎಂಬುದಕ್ಕಿಂತ ದೇಶಕ್ಕೆ ನಾವೇನು ಮಾಡಿದ್ದೇವೆ ಎಂಬುದನ್ನು ತಿಳಿದುಕೊಂಡಾಗ ಉತ್ತಮ ಸದೃಡ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಜಾಗೃತರಾಗಿ ಸಮಾಜದಲ್ಲಿ ಮುನ್ನಡೆಯಬೇಕು ಎಂದರು.
ದೇಹಕ್ಕೆ ಎಷ್ಟು ಆರೋಗ್ಯ ಮುಖ್ಯವೋ ಹಾಗೇ ಮನಸ್ಸಿನ ಆರೋಗ್ಯ ಮುಖ್ಯವಾಗಿದೆ. ಭಾರತ ದೇಶದಲ್ಲಿ ಶ್ರೇಷ್ಠ ಜಿಲ್ಲೆಯಾಗಿ ಮಾಡಲು ಶಕ್ತಿವಂತರಾಗಿ ವಿದ್ಯಾರ್ಥಿಗಳಾದ ನೀವು ಸಂಕಲ್ಪ ಮಾಡಬೇಕು. ಆ ಜವಾಬ್ದಾರಿ ನಿಮ್ಮಲ್ಲಿದೆ ಅದಕ್ಕಾಗಿ ನೀವು ಶಕ್ತಿವಂತರಾಗಬೇಕು ಎಂದರು.

ಕಳಪೆ ಆದರ್ಶ ಮೈಗೂಡಿಸಿಕೊಳ್ಳದೆ ಸೂಕ್ಷ್ಮಮತಿಗಳಾಗಬೇಡಿ. ಇಂದು ಕೆಲವು ವ್ಯಕ್ತಿಗಳ ಆದರ್ಶಗಳನ್ನು ಹೇಳಲು ತಂದೆ ತಾಯಿಗಳಿಗೆ ಸಮಯವಿಲ್ಲ. ಶಿಕ್ಷಕರಿಗೆ ಅದರ ಬಗ್ಗೆ ಗೊತ್ತೇ ಇಲ್ಲ ಆದ್ದರಿಂದ ವಿದ್ಯಾರ್ಥಿಗಳು ಜೀವನ ಚರಿತ್ರೆ ಓದುವ ಮೂಲಕ ಉತ್ತಮ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಆದರ್ಶ ಸಾಹಸಿಗಳಾಗಿ ಎಂದರು.
ಉತ್ತಮ ಶಿಕ್ಷಣದಿಂದ ಮನುಷ್ಯತ್ವ ನಿರ್ಮಾಣವಾಗಬೇಕು. ಶುದ್ದ ಚಿಂತನೆ ಹುಟ್ಟು ಹಾಕಲು ವಿವೇಕಾನಂದರ ತತ್ವಾದರ್ಶ ಪಾಲಿಸಬೇಕೇ ಕೇವಲ ಅಂಕಕ್ಕಾಗಿ, ಉದ್ಯೋಗಕ್ಕಾಗಿ  ವಿದ್ಯಾಭ್ಯಾಸ ಮಾಡುವುದು ಸರಿಯಲ್ಲ. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಹಿರಿಯರು ಪರಂಪರೆ ಸಂಸ್ಕೃತಿ ತಿಳಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವಿವೇಕಪ್ರಭ ಪತ್ರಿಕೆಯ ಸಂಪಾದಕರಾದ ಸ್ವಾಮಿ ವೀರೇಶಾನಂದಜೀ ಮಹಾರಾಜ್‌ ಮಾತನಾಡಿ, ಯುವಶಕ್ತಿ ಜಾಗೃತಿಯಾದರೆ ದೇಶ ಬಲಿಷ್ಟವಾಗುತ್ತದೆ ಇದರಿಂದ ಭಾರತ ಸಮೃದ್ಧಿಯಾಗಿ ಬೆಳೆಯುತ್ತದೆ ಎಂದರು. ಯುವಕರು ಶಿಸ್ತನ್ನು ರೂಡಿಸಿಕೊಳ್ಳಬೇಕು ಇದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಇದಕ್ಕೆ ಸ್ವಾಮಿ ವಿವೇಕಾನಂದರೆ ಸ್ಪೂರ್ತಿ ಎಂದರು.

 ಕಾರ್ಯಕ್ರಮದಲ್ಲಿ ಸೇವಾಭಾರತಿ ಶಿಕ್ಷಣ ಸಂಸ್ಥೆಯ ಮಕ್ಕಳು ಸ್ವಾಮಿ ವಿವೇಕಾನಂದರ ರಥಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿ ಆಕರ್ಷಕ ಪಥಸಂಚಲನ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ಸ್ವಾಮಿ ವಿವೇಕಾನಂದರ ರಥಯಾತ್ರೆಯು ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಆರಂಭಗೊಂಡು ಸುಲ್ತಾನ್‌ ಷರೀಪ್‌ ವೃತ್ತದ ಮೂಲಕ ಸಾಗಿ ದೊಡ್ಡ ಅಂಗಡಿ, ಚಿಕ್ಕ ಅಂಗಡಿಬೀದಿ ಸಂತೇಮರಳ್ಳಿ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ನಡೆಯಿತು.

   

Leave a Reply