ಗೋರಕ್ಷಣೆ

ಗ್ರಾಮೀಣ - 0 Comment
Issue Date : 14.11.2013

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಎಂಬ ಪುಟ್ಟ ಗ್ರಾಮದ ಗಂಥಡೆ ಕುಟುಂಬದಲ್ಲಿ ಸ್ವಾತಂತ್ರ್ಯ ಹೋರಟಗಾರರಾದ ರಾಮಚಂದ್ರ ಗಂಥಡೆ ಅವರು ಸ್ವಾತಂತ್ರ್ಯ ಪೂರ್ವದ ಒಂದು ದಿನ ರಸ್ತೆಯಲ್ಲಿ ಓಡಾಡುತ್ತಿದ್ದಾಗ ಕಟುಕನೋರ್ವನು ಒಂದು ಆಕಳನ್ನು ಕಸಾಯಿ ಖಾನೆಗೆ ಒಯ್ಯುತ್ತಿದ್ದುದನ್ನು ಕಂಡರು.  ಇದರಿಂದ ಮನನೊಂದ ರಾಮಚಂದ್ರ ಅವರು ಆ ಆಕಳನ್ನು ಖರೀದಿಸುವ ಮನಸ್ಸು ಮಾಡಿದರು.  ಆಗಿನ ಕಾಲಕ್ಕೆ ಕಟುಕರು ಆಕಳಿಗೆ ಕೇಳಿದ ರೂ.10 ಬೆಲೆ ಜೊತೆ ರೂ. 2 ಸೇರಿಸಿ ಕೊಟ್ಟು ಖರೀದಿಸಿದರು. 

 ರಾಮಚಂದ್ರ ಅವರ  ಮನೆಯಲ್ಲಿ ಆ ಆಕಳು ಬೆಳೆಯಿತು. ಇದು ಕರು ಹಾಕಿ ಅದರ ಸಂತತಿ ಬೆಳೆದು ಈಗ 35ಕ್ಕೆ ತಲುಪಿದೆ.  1988ರಲ್ಲಿ ರಾಮಚಂದ್ರ ಅವರು ನಿಧನರಾದ ಮೇಲೆ ಅವರ ಮಕ್ಕಳಿಗೆ ಆದೇಶಿಸಿದಂತೆ ಒಂದೇ ಒಂದು ಆಕಳನ್ನು ಯಾರಿಗೂ ಮಾರಿಲ್ಲ, ಸಾವನ್ನಪ್ಪಿದ ಆಕಳನ್ನು ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.

 ಭಾರತೀಯ ಪರಂಪರೆಯಲ್ಲಿ ಗೋವುಗಳನ್ನು ಕೊಲ್ಲುವುದು ಮಹಾಪಾಪ. ಗೋವನ್ನು ಭಾರತೀಯ ಸಮಾಜ ಪೂಜಿಸುತ್ತದೆ. ಇಲ್ಲಿ ಗೋಪೂಜೆಗಾಗಿಯೇ ಮೀಸಲಾದ ಹಬ್ಬಗಳಿವೆ. ಗೋರಕ್ಷಣೆ ಎಲ್ಲರ ಕರ್ತವ್ಯ ಎಂದು  ರಾಮಚಂದ್ರ ಅವರು ಸಾರಿದ್ದಾರೆ. ಸರ್ಕಾರ ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ನಮ್ಮ ಸಂವಿಧಾನವೂ ಸಹ  ನಿರ್ದೇಶಿಸಿದೆ.

   

Leave a Reply