ಗ್ರಂಥ ದೇವೋಭವ

ರಾಜ್ಯಗಳು - 0 Comment
Issue Date : 07.05.2015

ಚನ್ನೈ: ‘ಮನುಷ್ಯ’ ಎಂಬ ಸಂಸ್ಕೃತ ಭಾಷೆಯ ಸಣ್ಣ ಕಥೆಗಳ ಸಂಗ್ರಹವನ್ನು ಇಲ್ಲಿ ಏ.17 ರಂದು ಬಿಡುಗಡೆ ಮಾಡಲಾಗಿದೆ. ತಮಿಳುನಾಡು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಆರ್.ಎಸ್. ಕಣ್ಣನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂ ಡಿದ್ದರು.
ಸಂಸ್ಕೃತ ಭಾರತಿ ಆಯೋಜಿಸಿದ್ದ ಇನ್ನೊಂದು ಕಾರ್ಯಕ್ರಮದಲ್ಲಿ ‘ಮಾತೃದೇವೋಭವ’ ಎಂಬ ಸಂಸ್ಕೃತದ ಸಣ್ಣ ಕಥೆಗಳ ಗ್ರಂಥವನ್ನು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಶ್ರೀಮತಿ ಪ್ರಭಾ ಶ್ರೀದೇವನ್ ಅವರು ಏ.19ರಂದು ಲೋಕಾರ್ಪಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಪ್ರಭಾ ಅವರು, ‘ನೆನ್ನೆ ವಿಮಾನದಲ್ಲಿ ನನ್ನ ಜೊತೆಗಿದ್ದ ಸಹ ಪ್ರಯಾಣಿಕರು ಕಮ್ಯುನಿಸ್ಟ್ ಪಕ್ಷದ ನಾಯಕರಾದ ಡಿ.ರಾಜ ಅವರು. ತಾಯಿಗೆ ಗೌರವ ನೀಡುವುದು ಸಂಸ್ಕೃತಿಯ ಪ್ರತೀಕವೆಂದು ಅವರು ಹೇಳುತ್ತಿದ್ದರು. ಇಂದು ನಾನು ‘ಮಾತೃದೇವೋಭವ’ ಎಂಬ ಕೃತಿಯನ್ನು ಬಿಡುಗಡೆ ಮಾಡುತ್ತಿರುವೆ. ಇದೊಂದು ನನಗೆ ಹೆಮ್ಮೆಯ ವಿಷಯ’ ಎಂದರು.

   

Leave a Reply