ಚದುರಂಗ

ಕ್ರೀಡೆ - 0 Comment
Issue Date : 01.12.2014

ಪಗಡೆ, ಚೌಕಾಭಾರ ಆಟಗಳಲ್ಲಿರುವಂತೆ ಚದುರಂಗದಲ್ಲೂ ಕಾಯಿಗಳನ್ನೂ ಹೊಡೆಯಲು ಅವಕಾಶವಿೆ. ಆದರೆ ಆಟಗಾರ ಶತ್ರುವಿನ ಕಾಯಿಯನ್ನು ಹೊಡೆಯುವುದಕ್ಕಿಂತ ಅವನ ರಾಜನನ್ನು ಕಟ್ಟಿ ಹಾಕುವುದೇ ಮುಖ್ಯ ಸವಾಲು. ಅವನನ್ನು ಹೊಡೆಯಲು ಅನುಕೂಲಕರವಾದ ಜಾಗದಲ್ಲಿ ನಮ್ಮ ಕಾಯನ್ನು ಇಟ್ಟು, ಅದರಿಂದ ಇನ್ನೊಬ್ಬ ಆಟಗಾರ ತಪ್ಪಿಸಿಕೊಳ್ಳಲಾಗದಿದ್ದರೆ ಅವನು ಸೋತಂತೆ.
ರಾಜನನ್ನು ಬಿಟ್ಟು ಮಿಕ್ಕ ಯಾವುದೇ ಕಾಯಿಯನ್ನು ಎದುರಾಳಿಯ ಯಾವ ಕಾಯಿಯಿಂದ ಹೊಡೆಯಬಹುದು? ಶತ್ರುವಿನ ಕಾಯಿ ಇರುವ ಮನೆ ಹೋದರೆ ಆ ಕಾಯಿಯನ್ನು ಹೊಡೆಯಬಹುದು. ಪದಾತಿ ಮಾತ್ರ ತನ್ನ ಎಡ ಬಲ ಮೂಲೆಯ ಮನೆಯಲ್ಲಿದ್ದರೆ ಕಾಯಿಗಳನ್ನು ಹೊಡೆಯಬಹುದು.
ಪದಾತಿಗಳಲ್ಲಿ ಯಾವುದಾದರೂ ಇನ್ನೊಬ್ಬ ಆಟಗಾರನ ಮೊದಲ ಸಾಲಿನ ಮನೆಯಲ್ಲಿ ಕುಳಿತುಕೊಂಡರೆ, ಅದರ ಬದಲು ಮಂತ್ರಿಯನ್ನೋ, ಇನ್ನಾವುದಾದರೂ ಬಲವನ್ನು ಬದಲಾಯಿಸಿಕೊಳ್ಳಬಹುದು.
ಕೋಟೆ ಕಟ್ಟುವುದು (ಕ್ಯಾಸಲಿಂಗ್) ಚದುರಂಗದ ವಿಶೇಷ ನಡೆ. ರಾಜ ಮತ್ತು ಆನೆಗಳು ತಮ್ಮ ಮೊದಲಿನ ಜಾಗವನ್ನು ಬದಲಿಸಿಲ್ಲ ಎಂದುಕೊ್ಳೋಣ. ಅವುಗಳ ನಡುವೆ ಬೇರೆ ಕಾಯಿ ಇಲ್ಲದಿದ್ದಾಗ, ರಾಜ ಆನೆಯ ಕಡೆ ಎರಡು ಮನೆ ಚಲಿಸುತ್ತಾನೆೆ. ಹಾಗೆಯೇ ಆನೆ ರಾಜನ ಮತ್ತೊಂದು ಪಕ್ಕಕ್ಕೆ ಬಂದು ಕುಳಿತುಕೊಳ್ಳುತ್ತದೆ. ಹೀಗೆ ರಾಜ, ಆನೆಗಳನ್ನು ಒಮ್ಮೆಗೇ ಚಲಿಸುವ ಅವಕಾಶ ಕೋಟೆ ಕಟ್ಟುವಾಗ ಮಾತ್ರ ಬರುತ್ತದೆ.


ಶತ್ರು ರಾಜನಿಗೆ ಅಪಾಯ ಒದಗುವ ನಡೆಯನ್ನು ನಡೆಸಿದಾಗ ಚೆಕ್ ಎಂದು ಹೇಳಬೇಕು. ಆಗ ಆಟಗಾರ ತನ್ನ ರಾಜನನ್ನು ಮೊದಲು ಉಳಿಸಿಕೊಳ್ಳುತ್ತಾನೆ. ರಾಜನನ್ನು ಇನೊಂದು ಮನೆಗೆ ನಡೆಸಿ ಅಥವಾ ಮಧ್ಯದಲ್ಲಿ ಇನ್ನೊಂದು ಕಾಯಿಯನ್ನು ನಡೆಸಿ ಚೆಕ್ ಹೇಳಿದ ಕಾಯಿಯನ್ನು ಹೊಡೆದು ತನ್ನ ರಾಜನನ್ನು ಉಳಿಸಿಕೊಳ್ಳುತ್ತಾನೆ. ರಾಜನನ್ನು ಉಳಿಸಿಕೊಳ್ಳಲು ಆಗದೇ ಇದ್ದಾಗ ಅದು ಚೆಕ್ೆುೀಟ್ ಸ್ಥಿತಿ. ಆಗ ಆಟಗಾರ ಸೊಲುತ್ತಾನೆ. ಅವನಲ್ಲಿ ರಾಜ ಮಾತ್ರ ಉಳಿದಿದ್ದು ಅವನು ಇರುವ ಜಾಗದಲ್ಲಿ ತೊಂದರೆ ಇಲ್ಲದಿದ್ದರೂ ಬೇರೆ ಯಾವ ಮನೆಗೂ ಚಲಿಸದಂತೆ ಆದಾಗ ಅದು ‘ಸ್ಟೇಲ್ ಮೇಟ್’. ಹೀಗಾದಾಗ ಆಟ ಸಮ ಆದಂತೆ. ಎರಡೂ ಕಡೆಗಳಲ್ಲಿ ರಾಜನೇ ಉಳಿದಾಗ ಸಾಮಾನ್ಯ ಆಟ ಸಮವೆಂದು ಹೇಳುತ್ತಾರೆ.
ಒಬ್ಬನ ಕಡೆ ರಾಜ ಮಾತ್ರ ಉಳಿದು ಇನ್ನೊಬ್ಬರ ಕಡೆ ಒಂದೆರಡು ಬೇರೆ ಕಾಯಿಗಳೂ ಇದ್ದಾಗ, ಒಂಟಿ ರಾಜನನ್ನು 16 ನಡೆಗಳಲ್ಲಿ ರಾಜನನ್ನು ಕಟ್ಟಿ ಹಾಕದಿದ್ದರೆ ಆಟ ಸಮವಾಗುತ್ತದೆ.
ಕಾಯಿಗಳಲ್ಲಿ ಯಾವುದು ಪ್ರಬಲ ಎಂಬ ಬಗೆಗೆ ನಮಗೆ ಸ್ವಲ್ಪ ಕಲ್ಪನೆ ಇದ್ದರೆ ಆಟವನ್ನು ಚೆನ್ನಾಗಿ ಆಡಬಹುದು. ಮಂತ್ರಿ ಅತ್ಯಂತ ಪ್ರಬಲವಾಗಿದ್ದು ಅದರ ಬಲವನ್ನು 9 ಎಂಬ ಸಂಖ್ಯೆಯಿಂದ ಸೂಚಿಸಿದರೆ, ಆನೆಯ ಬಲ 5 ಆಗುತ್ತದೆ. ರಥ ಅಥವಾ ಕುದುರೆ ಒಂದೊಂದಕ್ಕೂ 3, ಪದಾತಿಯ ಬಲ ಒಂದು ಆಗುತ್ತದೆ.
ಎರಡು ಆನೆಗಳ ಬಲ ಒಂದು ಮಂತ್ರಿಗಿಂತ ಹೆಚ್ಚು ಎಂದು ಇದರಿಂದ ಗೊತ್ತಾಗುತ್ತದೆ. ಬಲಿಕೊಡಬೇಕಾಗಿ ಬಂದ ಇವುಗಳ ಆಧಾರದ ಮೇಲೆ ಲೆಕ್ಕ ಹಾಕಬಹುದು.
ಚದುರಂಗ ತೀಕ್ಷ್ಣಬುದ್ಧಿ ಮತ್ತೆಯ ಆಟ. ಚದುರಂಗ ಬೇಗನೆ ಮುಗಿಯುವ ಆಟವಲ್ಲ. ಚದುರಂಗ ಆಟ ಬಹುಕಾಲದಿಂದ ಸಮರ ಯೋಜನೆಗಳಿಗೆ ಪ್ರೇರಕವಾಗಿತ್ತಲ್ಲದೆ ಈಗ ಕಂಪ್ಯೂಟರ್ ಯೋಜನೆಗಳಿಗೂ ಪ್ರೇರಕವಾಗಿದೆ. ಬಾಲಕರಿದ್ದಾಗಲೇ ಚದುರಂಗ ಆಟವನ್ನು ಮಕ್ಕಳಿಗೆ ಕಲಿಸಿದರೆ ಖಂಡಿತ ಅವರ ಯೋಚನಾ ಶಕ್ತಿ ಹೆಚ್ಚುತ್ತದೆ.

ಹಿಂದಿನ ವಾರದ ಪ್ರಶ್ನೆಗೆ ಉತ್ತರ
10 ಕೋಳಿಗಳು, 20 ಮೊಲಗಳು

D ವಾರದ ‘ಯೋಚಿಸಿ, ಉತ್ತರಿಸಿ’ ಪ್ರಶ್ನೆ
ಒಂದು ಹೂವಿನ ತೋಟ. ಅದರಲ್ಲಿ ತುಂಬಾ ಹೂವುಗಳಿವೆ. ಒಂದೊಂದು ಹೂವಿನ ಮೇಲೂ ಒಂದೊಂದು ದುಂಬಿ ಕೂತರೆ, ಒಂದು ದುಂಬಿಗೆ ಕೂರಲು ಹೂವು ಇಲ್ಲ. ಒಂದೊಂದು ಹೂವಿನ ಮೇಲೂ ಎರಡು ದುಂಬಿಗಳು ಕೂತರೆ, ಒಂದು ಹೂವು ಹೆಚ್ಚಾಗುತ್ತದೆ. ಹಾಗಾದರೆ ಹೂವುಗಳ ಸಂಖ್ಯೆ ಎಷ್ಟು? ದುಂಬಿಗಳ ಸಂಖ್ಯೆ ಎಷ್ಟು?

– ಶಿ.ನಾ. ಚಂದ್ರಶೇಖರ

   

Leave a Reply