ಜಗದ್ಗುರುವಿನ ಸ್ಥಾನದಲ್ಲಿ ಭಾರತ

ಯುವ - 0 Comment
Issue Date : 29.05.2015

‘ಹಿಂದುತತ್ವ ಧರ್ಮವನ್ನು ಪ್ರತಿಪಾದಿಸುತ್ತದೆ. ಧರ್ಮವೆಂದರೆ ಕರ್ತವ್ಯನಿಷ್ಥೆ ಮತ್ತು ಸನ್ನಡತೆ. ಇದನ್ನು ನಾವು ಮತ್ತು ನಮ್ಮ ಸರ್ಕಾರ ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.’ ಇದು ಭಾರತದ ಯಾವುದೇ ಸನ್ಯಾಸಿಯ, ಮಠಾಧಿಪತಿಯ ಅಥವಾ ಕೋಮುವಾದಿ ಎಂದು ಕರೆಸಿಕೊಳ್ಳುವ ದೇಶಭಕ್ತ, ಸ್ವಾಭಿಮಾನಿ ಹಿಂದುಗಳ ನುಡಿಯಲ್ಲ. ವಿಶ್ವವೇ ಗುರುತಿಸುವ ಪ್ರಭಾವಿ ವ್ಯಕ್ತಿಯಾದ ಮಾನ್ಯ ಪ್ರಧಾನ ಮಂತ್ರಿಗಳದ್ದು.
ಬಹುಶಃ ‘ಇದು ನಮ್ಮ ಪ್ರಧಾನಿ ಮೋದಿ ಮಾತು’ ಎಂದುಕೊಂಡಿರಬಹುದಲ್ಲವೆ?!
ಒಂದೊಮ್ಮೆ ಭಾರತವನ್ನು ಕೇವಲ ಹಾವಾಡಿಗರ ನಾಡು, ಅನಾಗರಿಕರ ಬೀಡು. ಇಲ್ಲಿನವರೆಲ್ಲ ಧರ್ಮಲಂಪಟರು, ನೀತಿ ನಿಯತ್ತು ಇಲ್ಲದ ಶುದ್ಧ ಕಾಡಿನಮಂದಿ ಎಂದು ಜಗತ್ತಿನಾದ್ಯಂತ ಬೊಬ್ಬೆಹೊಡೆದು, ಹಿಂದು ಧರ್ಮಿಷ್ಠರು ಯಾವುದೇ ವೈಚಾರಿಕ, ವೈಜ್ಞಾನಿಕ ಪ್ರಜ್ಞೆಯಿಲ್ಲದ ಮೂರ್ತಿ ಪೂಜಕರು. ಹಿಂದುತ್ವ ಕೇವಲ ಅನಾಚಾರ, ದುರಾಸೆಯ ಪಂಡಿತರಿಂದ ಕೂಡಿದ ಪ್ರಪಂಚದ ಹೀನ ಧರ್ಮ ಎಂದು ಕರೆದು, ಈ ಅನಾಗರಿಕರನ್ನು ಮತ್ತು ಈ ದೇಶವನ್ನು ಉದ್ದರಿಸಲೆಂದೇ ದೇವರು ನಮಗೆ ನೇರವಾಗಿ ಹಕ್ಕನ್ನು ಕೊಟ್ಟಿದ್ದಾನೆ, ಹಾಗಾಗಿ ಇವರನ್ನು ನಾವು ನಾಗರಿಕರನ್ನಾಗಿ ಮಾಡುತ್ತೇವೆ ಎಂದು ಬೊಗಳೆ ಹೊಡೆದ ಸೂರ‌್ಯಮುಳುಗದನಾಡು ಎಂದೇ ಹೆಸರಾಗಿದ್ದ ‘ಗ್ರೇಟ್ ಬ್ರಿಟನ್’ ನ ಪ್ರಭಾವಿ ವ್ಯಕ್ತಿಯಾದ ಇಂಗ್ಲೆಂಡಿನ ಮಾನ್ಯಪ್ರಧಾನ ಮಂತ್ರಿ ‘ಡೇವಿಡ್ ಕೆಮರಾನ್’ರದ್ದು! ಮೊದಲಿನ ಸಾಲನ್ನು ಮತ್ತೊಮ್ಮೆ ಓದಿ ನಿಮಗೆ ಅಚ್ಚರಿಯಾದರೂ ಇದು ಸತ್ಯ.
ಮೊನ್ನೆತಾನೆ ಬ್ರಿಟನ್‌ನ ಸಂಸತ್ತಿಗೆ ಚುನಾವಣೆ ನಡೆದು ಅಮೋಘವಾಗಿ 2ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕನ್ಸರ್ವೇಟೀವ್ ಪಕ್ಷದ ಮುಖಂಡ ಡೇವಿಡ್ ಕೆಮರಾನ್‌ರ ಮಾತು ಅಕ್ಷರಶಃ ಸತ್ಯ. ಈ ಮಾತು ಪ್ರಪಂಚದ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡಿರುವ ಸಾರ್ವಕಾಲಿಕ ಸತ್ಯ. ಜಗತ್ತಿನ ಯಾವುದೇ ಧರ್ಮದ ಒಟ್ಟು ಸಾರವನ್ನು ಒಂದುಮಾಡಿ ಇಡಿಯಾಗಿ ಹೇಳುವುದು ಹಿಂದುಧರ್ಮದ ಶ್ರೇಷ್ಠತೆ. ಕರುಣೆ, ಸತ್ಯಸಂಧತೆ, ಅಹಿಂಸೆ, ಕಾಯಕಮಾರ್ಗ, ಭಕ್ತಿಮಾರ್ಗ, ಅವಿಭಕ್ತತೆ ಮುಂತಾದ ಸರ್ವಶ್ರೇಷ್ಠ್ಟತತ್ವಗಳ ಪ್ರತಿಪಾದಕ ಧರ್ಮ ಹಿಂದುತ್ವ. ವ್ಯಕ್ತಿಜೀವನ, ವ್ಯಕ್ತಿತ್ವ ನಿರ್ಮಾಣದಂತಹ ಪ್ರಬುದ್ದಯುತವಾದ ಕಲ್ಪನೆಗಳನ್ನು ಒಟ್ಟಾಗಿ ಹಿಡಿದಿರುವ ಜಗತ್ತಿನ ಪರಮಶ್ರೇಷ್ಠಧರ್ಮ ಹಿಂದು ಧರ್ಮ. ಮಾನವೀಯತೆಯ ತಳಹದಿಯಮೇಲೆ ನಿಂತಿರುವ ಅನನ್ಯ ಧರ್ಮ. ಪುರುಷನ ಎಲ್ಲ ಸತ್‌ಕಾರ್ಯದಲ್ಲೂ ಮಹಿಳೆಗೂ ಸಮಪಾಲನ್ನು ಕೊಟ್ಟು ಪುರುಷ ಮಹಿಳೆಗೆ ಅಭೇದ ಕಲ್ಪಿಸಿ ಅರ್ಧನಾರೀಶ್ವರ ತತ್ವವನ್ನು ಜಗತ್ತಿಗೆ ತಿಳಿಸಿಹೇಳಿದ ಧರ್ಮ ಹಿಂದುಧರ್ಮ. ಧರ್ಮವೆ ಎಂಬುದು ಆಚಾರ, ವಿಚಾರ, ನಂಬಿಕೆ, ಕೈಂಕರ‌್ಯವಷ್ಟೇ ಅಲ್ಲ ಧರ್ಮವೆಂಬುದು ಜೀವನದ ನಡೆ – ನಡತೆ, ಮುಕ್ತಿಮಾರ್ಗ – ವಿಮುಕ್ತಿಮಾರ್ಗ, ಪರಮಾತ್ಮ – ಪರತತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವ ಜೀವನ ವಿಧಾನ ಎಂಬುದನ್ನು ಯಾಗ – ಯೋಗ ಪರಂಪರೆಯಮೂಲಕ ವೈಚಾರಿಕವಾಗಿ, ಸೈದ್ಧಾಂತಿಕವಾಗಿ, ವೈಜ್ಞಾನಿಕವಾಗಿ ಸಾರಿ ತೋರಿದಂತಹ ಧರ್ಮ. ‘ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನ’ ಎನ್ನುತ್ತಾ, ಮಾಡುವ ಕರ್ಮವನ್ನು, ಕೆಲಸವನ್ನು ಶ್ರದ್ಧಾಭಕ್ತಿಗಳಿಂದ ಒಡಗೂಡಿದ ಸೇವೆಯೆಂಬ ಮನೋಭಾವದಲ್ಲಿ ಮಾಡು, ಸೇವೆಗೆ ಪ್ರತಿಫಲಾಪೇಕ್ಷೆ ಮಾಡದಿರು, ಸೇವೆಯಲ್ಲಿ ಸಿಗುವ ಸಾರ್ಥಕತೆಯ ಪರಮಾನಂದವೇ ಮಾನವನ ಮುಕ್ತಿಗೆ ಸೋಪಾನ ಎಂದು ಲೋಕಕ್ಕೇ ಸಾರಿದ್ದು ನಮ್ಮ ತತ್ವ. ‘ಖಛ್ಟಿಜ್ಚಿಛಿ ಠಿಟ ಏ್ಠಞಚ್ಞಜಿಠಿ ಖಛ್ಟಿಜ್ಚಿಛಿ ಠಿಟ ಎಟ‘ ಎಂಬ ತತ್ವವನ್ನು ತಿಳಿಹೇಳಿದ ಧರ್ಮ ಹಿಂದುತ್ವ. ಬೆಳಕಿನ ಪ್ರಕಾಶವನ್ನು ಕತ್ತಲೆ ತನ್ನಲ್ಲಿ ಹೇಗೆ ಬಹಳ ಹೊತ್ತು ಹಿಡಿದಿಡಲು ಸಾಧ್ಯವಿಲ್ಲವೋ ಹಾಗೆಯೇ, ಜಗತ್ತಿಗೆ ಗುರುವಾಗಿ ನಿಂತಿದ್ದ ಹಿಂದುತ್ವವನ್ನು ಪಾಶ್ಚಾತ್ಯರ ಅಜ್ಞಾನದ ಸಂಕೋಲೆಯೊಳಗೆ ಬಹಳದಿನ ಮುಚ್ಚಿಡಲು, ಹಿಡಿದಿಡಲು ಸಾಧ್ಯವೇ ಇಲ್ಲ. ಕತ್ತಲೆಯನ್ನು ಸೀಳಿ ಹೊರಬಂದ ಬೆಳಕು ಜ್ಞಾನದ ಮಾರ್ಗವನ್ನು ತೋರಲೇಬೇಕು.
ಸರಿಸುಮಾರು 400 ವರ್ಷಗಳ ಕೆಳಗೆ ಯಾವ ದೇಶದ ಜನ ‘ಈ ಭಾರತದ ಅನಾಗರಿಕರನ್ನು ಆಳುವುದಕ್ಕೆಂದೇ ದೇವರು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ’ ಎಂದಿದ್ದರೋ ಅಂತಹ ದೇಶದ ಸಂಸತ್ತಿನ ಸದಸ್ಯರ ಪೈಕಿ ಇಂದು 10 ಕ್ಕೂ ಹೆಚ್ಚು ಜನರು ಭಾರತೀಯರು. ಹಿಂದೊಮ್ಮೆ ಭಾರತದ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಭಾರತದ ಸಂಸತ್ತು ಪ್ರವೇಶವನ್ನು ನಿರ್ಬಂಧಿಸಿತ್ತು. ಅನೇಕ ಪೂಜ್ಯರ ಹೋರಾಟದ ಫಲವಾಗಿ 1909ರ ಇಂಡಿಯನ್ ಕೌನ್ಸಿಲ್ ಆಕ್ಟ್ ರಚನೆಯಾಗಿ, ಭಾರತೀಯರಿಗೆ ಭಾರತದ ಸಂಸತ್ತು ಪ್ರವೇಶಿಸುವ ಅವಕಾಶ ಸಿಕ್ಕಿದ್ದು ಈಗ ಇತಿಹಾಸ. ಅಂತಹ ಬ್ರಿಟನ್‌ನ ಮಹಿಳಾ ಮೇಯರ್ ಆಗಿ ಭಾರತೀಯ ಮೂಲದ ಹರ್ಭಜನ್‌ಕೌರ್ ಆಯ್ಕೆಯಾಗಿರುವುದೂ ಈಗ ಇಂಗ್ಲೆಂಡಿನಲ್ಲಿ ಇತಿಹಾಸ. ವಿಚಾರವಾದಿ ಎಂದು ಕರೆದುಕೊಳ್ಳುವ ಅಜ್ಞಾನಿಗಳು ಗೀತೆಯನ್ನು ಸುಡುವ ವಿಚಾರ ಮಾತನಾಡಿ ತಿಂಗಳು ಕಳೆದಿಲ್ಲ ಆಗಲೇ ಆಸ್ಟ್ರೇಲಿಯಾದ ಸಂಸದ ಡೇನಿಯಲ್ ಮುಖಿ ತನ್ನ ಪ್ರತಿಜ್ಞಾವಿಧಿಯ ವೇಳೆ ಶ್ರೀಮದ್ ಭಗವದ್ಗೀತೆಯ ಮೇಲೆ ಪ್ರಮಾಣಮಾಡಿ, ಜಗತ್ತಿನ ಶ್ರೇಷ್ಠಗ್ರಂಥ ಒಂದರ ಉಪಯುಕ್ತತೆಯನ್ನು ತಿಳಿಸಿದ್ದಾರೆ. ಕೇಂದ್ರೀಯ ವಿದ್ಯಾಲಯದ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಜರ್ಮನ್ ಬದಲಿಗೆ ಸಂಸ್ಕೃತವನ್ನು ಕಡ್ಡಾಯ ಭಾಷೆಯಾಗಿ ಅಧ್ಯಯನ ಮಾಡಬೇಕೆಂದು ಭಾರತ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದರೆ ಹೌಹಾರುವ ಢೋಂಗೀ ವಿಚಾರವಾದಿಗಳು ಅದೇ ಜರ್ಮನಿಯಲ್ಲಿ ಸಂಸ್ಕೃತವು ಕಡ್ಡಾಯ ಕಲಿಕಾ ಭಾಷೆ ಎಂಬುದನ್ನು ತಿಳಿದೂ ಜಾಣಮರೆವು ಪ್ರದರ್ಶಿಸುವುದು ತಮ್ಮ ಭೋಳೆತನದ ಪರಮಾವಧಿಯನ್ನು ತೋರಿಸಿದಂತೆ ಎಂಬುದು ಗಮನಾರ್ಹ.
ಇಡಿಯ ಮಾನವಕುಲದ ಉದ್ಧಾರಕ್ಕೆ ಪೂಜ್ಯ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶಕವಾಗಿದ್ದ ಭಾರತವು ಯೂರೋಪಿನ ವ್ಯಾಪಾರಿಗಳ ಆಗಮನದಿಂದ, ಅವರ ಕುತಂತ್ರಿ ಬುದ್ದಿಯಿಂದ, ಒಡೆದು ಆಳುವ ನೀತಿಯಿಂದ ಮಹತ್ತರ ಬದಲಾವಣೆಗಳಿಗೆ ಗುರಿಯಾಯಿತು. ಸಾವಿರಾರು ವರ್ಷಗಳ ಶ್ರೇಷ್ಠ ಇತಿಹಾಸ, ಸಂಸ್ಕೃತಿಯನಾಡು ಇಂಗ್ಲೀಷ್ ವಸಹಾತುಶಾಹಿಗೆ ಒಳಪಟ್ಟಿತು. ಜಗತ್ತಿನ ಸರ್ವ ಮಾನವಕುಲಕ್ಕೂ ವಿದ್ಯಾದಾನ ಮಾಡಿದ ಪುರಾತನ ವಿಶ್ವವಿದ್ಯಾಲಯಗಳನ್ನು, ಗುರುಕುಲ ಪದ್ದತಿಯನ್ನು, ವ್ಯವಸ್ಥೆಯನ್ನು ಛಿದ್ರ ಮಾಡಿ ಇಂಗ್ಲೀಷ್ ಶಾಲೆಗಳನ್ನು ಪ್ರಾರಂಭಿಸಿ ಒಟ್ಟಾರೆ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಭಾರತೀಯ ಮುಖದ ಬ್ರಿಟೀಷ್‌ರನ್ನು ಹುಟ್ಟುಹಾಕುವ ಷಡ್ಯಂತ್ರಕ್ಕೆ ಪೂರ್ಣಬಲಿಯಾಗದೇ ಇಂದಿಗೂ ಉಳಿದಿರುವುದು ಹಿಂದೂ ಧರ್ಮ ಮತ್ತು ಭಾರತೀಯತೆಯ ಭವ್ಯತೆಗೆ ಕೈಗನ್ನಡಿಯಾಗಿದೆ. ಇಂದು ಜಗತ್ತಿನ ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿರುವ ಅಮೇರಿಕ – ಇಂಗ್ಲೆಂಡ್ – ಆಸ್ಟ್ರೇಲಿಯದಂತಹ ದೇಶಗಳಲ್ಲಿ ಉನ್ನತವರ್ಗ, ಹುದ್ದೆ – ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಭಾರತೀಯರು ನೆಲೆನಿಂತಿರುವುದು ಹೆಮ್ಮೆಯ ವಿಚಾರ.

– ಗುರುಪ್ರಸಾದ್‍.ಪಿ.ದೇಸಾಯಿ, ತುಮಕೂರು

   

Leave a Reply