‘ಜನಂ’ ಮಲೆಯಾಳಂ ವಾಹಿನಿ ಆರಂಭ

ರಾಜ್ಯಗಳು - 0 Comment
Issue Date : 01.05.2015

ಕೊಚ್ಚಿ: ಮನರಂಜನೆ ಹಾಗೂ ಸುದ್ದಿ ಬಿತ್ತರಿಸುವ ‘ಜನಂ’ ಟಿವಿಯೆಂಬ ಮಲೆಯಾಳಂ ಭಾಷೆಯ ವಾಹಿನಿ ಆರಂಭವಾಗಿದೆ. ರಾಷ್ಟ್ರೀಯ ವಿಚಾರಧಾರೆಯ ತಂಡವೊಂದು ಈ ವಾಹಿನಿಯ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರವಹಿಸಿದೆ.
ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಜ್ಯೋತಿ ಬೆಳಗಿಸಿ ವಾಹಿನಿಯನ್ನು ಉದ್ಘಾಟಿಸಿದರು. ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ರಾಜ್ಯವರ್ಧನಸಿಂಗ್ ರಾಠೋಡ್ ವಾಹಿನಿಗೆ ಹಸಿರು ನಿಶಾನೆ ತೊರಿದರು.
ಈ ಸಂದರ್ಭದಲ್ಲಿ ಸಂಘದ ಸರಕಾರ್ಯವಾಹ ಭಯ್ಯಾಜಿ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್, ಸ್ವಾಮಿ ಪೂರ್ಣಾನಂದಪುರಿ, ವಾಹಿನಿಯ ಆಡಳಿತ ನಿರ್ದೇಶಕ ವಿಶ್ವರೂಪನ್, ಸಿನಿಮಾ ನಿರ್ದೇಶಕ ಹಾಗೂ ವಾಹಿನಿಯ ಛೇರ‌್ಮನ್ ಪ್ರಿಯದರ್ಶನ್, ಕಾರ್ಯಕಾರಿ ಸುದ್ದಿ ಸಂಪಾದಕ ರಾಜೇಶ್‌ಪಿಳ್ಳೈ, ವಾಹಿನಿ ನಿರ್ದೇಶಕ ಯು.ಎಸ್. ಕೃಷ್ಣಕುಮಾರ್, ಉದ್ಯಮಿ ಬಿ.ಆರ್. ಶೆಟ್ಟಿ, ಬಿಜೆಪಿ ನಾಯಕರಾದ ಓ. ರಾಜಗೋಪಾಲ್, ವಿ. ಮುರಳೀಧರನ್, ಹಿಂದು ಐಕ್ಯವೇದಿ ಪ್ರಧಾನ ಕಾರ್ಯದರ್ಶಿ ಕುಮ್ಮನಂ ರಾಜಶೇಖರನ್ ಮತ್ತಿತರ ಪ್ರಮುಖರು ಹಾಜರಿದ್ದರು.
‘ಜನಂ’ ಟಿವಿ ವಾಹಿನಿ ಮನರಂಜನೆ, ಆಧ್ಯಾತ್ಮಿಕ ಪ್ರವಚನಗಳಲ್ಲದೆ ರಾಷ್ಟ್ರೀಯ ಹಿತಾಸಕ್ತಿಯ ಹತ್ತು ನ್ಯೂಸ್‌ಬುಲೆಟಿನ್‌ಗಳನ್ನು ಹಾಗೂ ಇನ್ನಿತರ ಚರ್ಚೆಗಳನ್ನು ಪ್ರತಿನಿತ್ಯ ನಡೆಸಲಿದೆ. ಸಂಸ್ಕೃತದಲ್ಲೂ ಸುದ್ದಿ ಪ್ರಸಾರ ಹಮ್ಮಿಕೊಂಡಿದೆ. ಜನಂ ಟಿವಿ ವಿದ್ಯುನ್ಮಾನ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ರವಿಶಂಕರ್ ಗುರೂಜಿ ಆಶಿಸಿದ್ದಾರೆ.

   

Leave a Reply