ಜನಕಪುರಿಗೆ ಶ್ರೀರಾಮ-ಜಾನಕಿ ವಿವಾಹ ಬಾರಾತ್

ಭಾರತ - 0 Comment
Issue Date : 26.11.2014

ಹೊಸದಿಲ್ಲಿ:  ಅಯೋಧ್ಯೆಯಿಂದ ಪ್ರಾರಂಭವಾದ ಶ್ರೀರಾಮ-ಜಾನಕಿ ವಿವಾಹ ಬಾರಾತ್ ನೇಪಾಳದಲ್ಲಿರುವ ಜನಕಪುರಿಯ ಶ್ರೀರಾಮ ಧಾಮಕ್ಕೆ ತಲುಪಲಿದೆ.
ಈ ಕುರಿತು ವಿವರಗಳನ್ನು ನೀಡಿದ ವಿಶ್ವಹಿಂದು ಪರಿಷತ್ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್ ಅವರು, ವಿವಾಹ ಬಾರಾತ್ ಅಜಮ್‌ಗರ್, ಮವು, ಬಕ್ಸರ್, ಆರಾ, ಪಾಟ್ನಾ ಮೂಲಕ ನೇಪಾಲಕ್ಕೆ ತಲುಪಲಿದೆ ಎಂದರು. ವಿಹಿಂಪ ಮುಖಂಡರಾದ ಅಶೋಕ್ ಸಿಂಘಾಲ್ ನ.27ರಂದು ನೇಪಾಳದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ವಿವಾಹ ಬಾರಾತ್ ಮತ್ತೆ ನ.28ರಂದು ಪ್ರಾರಂಭವಾಗಿ ಅಯೋಧ್ಯೆಗೆ ನ.30ರಂದು ತಲುಪಲಿದೆ. ಸಾಮಾಜಿಕ ಕೆಡುಕುಗಳನ್ನು ನಿವಾರಿಸುವುದು ಹೇಗೆ ಎಂಬುದನ್ನು ಶ್ರೀರಾಮನ ಬದುಕಿನಿಂದ ಜನರಿಗೆ ಕಲಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಚಂಪತ್‌ರಾಯ್ ತಿಳಿಸಿದರು.

   

Leave a Reply