ಜನರನ್ನು ಆಕರ್ಷಿಸಿದ ಪ್ರಚಂಡ ಶೋಭಾಯಾತ್ರೆ

ಬಿಜಾಪುರ - 0 Comment
Issue Date : 19.09.2014

ಬಸವನಬಾಗೇವಾಡಿ: ವಿಶ್ವ ಹಿಂದು ಪರಿಷತ್ ಸ್ವರ್ಣ ಜಯಂತಿ ವರ್ಷದ ಆಚರಣೆ ಅಂಗವಾಗಿ ವಿಎಚ್‌ಪಿ ಹಾಗೂ ಬಜರಂಗದಳ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಛತ್ರಪತಿ ಶಿವಾಜಿ, ಭಾರತ ಮಾತೆ, ಶ್ರೀಕೃಷ್ಣ ಭಾವಚಿತ್ರ ಒಳಗೊಂಡ ಶೋಭಾಯಾತ್ರೆ ನಡೆಸಲಾಯಿತು.
ಸ್ಥಳೀಯ ಬಸವೇಶ್ವರ ದೇವಾಲಯದಿಂದ ಆರಂಭವಾದ ಆಕರ್ಷಕ ಶೋಭಾಯಾತ್ರೆಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ತೆಲಗಿ ರಸ್ತೆ ಮಾರ್ಗವಾಗಿ ಅಂಬಾಭವಾನಿ ದೇವಾಲಯ ಶಿವಾಜಿ ಗಲ್ಲಿ, ಸಂಗೋಳ್ಳಿ ರಾಯಣ್ಣ ವೃತ್ತ, ಬಸವ ಜನ್ಮಸ್ಮಾರಕ, ಗೊಳಸಂಗಿ ಗಲ್ಲಿ, ಅಗಸಿ ಮುಖಾಂತರ ವಿಜಾಪುರ ರಸ್ತೆ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದ ಶೋಭಾಯಾತ್ರೆ ನಡೆಯಿತು.
ಮೆರವಣಿಗೆಯಲ್ಲಿ ಮಹಾರಾಷ್ಟ್ರದ ತುಳಜಾಪೂರ ಗ್ರಾಮದ ಗಜಾನನ ಯುವಕ ಮಂಡಳಿ ತಂಡದಲ್ಲಿ ಸದಸ್ಯರ ಛತ್ರಪತಿ ಶಿವಾಜಿ ಮಹಾರಾಜ, ಮಾವಳಿ ಗುಂಪು, ದೇವಿ, ದೇವಿಯ ಸೇವಕಿ ಒಳಗೊಂಡ ಜಾನಪದ ಕಲಾತಂಡವು ಮಾರ್ಗದ ಮಧ್ಯದಲ್ಲಿ ರಾಷ್ಟ್ರಭಕ್ತಿ ರೂಪಕಗಳನ್ನು ಮಾಡುತ್ತಾ ಹಾಗೂ ಜಾಂಜ್ ತಂಡವು ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಾರ್ವಜನಿಕರ ಕಣ್ಮನ ಸೆಳೆದರು. ಅಲ್ಲದೆ ವಾಹನದಲ್ಲಿ ಆಸೀನರಾದ ರಾಮ, ಸೀತೆ, ಲಕ್ಷಣ, ಹಣಮಂತ, ಡೊಳ್ಳು, ಕರಡಿ ಮಜಲು ಜನರ ಮೆಚ್ಚುಗೆಗೆ ಪಾತ್ರವಾದವು.
ಶೋಭಾಯಾತ್ರೆ ಮಾರ್ಗದುದ್ದಕ್ಕೂ ಕೇಸರಿ ಪರಪರಿ ಧ್ವಜಗಳ ಅಲಂಕಾರ ಹಾಗೂ ಕೇಸರಿ ಧ್ವಜಗಳು ಹಾಗೂ ರಾಷ್ಟ್ರ ಧ್ವಜದ ಹಾರಾಟ ಮಾಡಿ ಇಡೀ ಶೋಭಾಯಾತ್ರೆ ಮೆರುಗು ಹೆಚ್ಚಿಸಿದರು ಮೆರವಣಿಗೆಯಲ್ಲಿ ವಿಶ್ವಹಿಂದು ಪರಿಷತ್ ತಾಲೂಕ ಅಧ್ಯಕ್ಷ ಸಿದ್ದಣ್ಣ ಪಟ್ಟಣಶೆಟ್ಟಿ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

   

Leave a Reply