ಜಪಾನ್ – ಕೊರಿಯಾ – ಸಿಂಗಾಪುರ

ಜಗದ್ಗುರು ಭಾರತ - 0 Comment
Issue Date : 30.04.2015

 • ಜಪಾನ್ ದೇಶದ ಮೇಲೆ ಭಾರತದ ಪ್ರಭಾವ ಬೌದ್ಧ ಧರ್ಮಕ್ಕಿಂತಲೂ ಮುಂಚಿನದು. ಭಾರತವನ್ನು ಜಪಾನೀಯರು ತಮ್ಮ ಸಾಂಸ್ಕೃತಿಕ ತಾಯಿಯೆಂದು ಭಾವಿಸುತ್ತಾರೆ.
 • ಭಾರತವನ್ನು ಜಪಾನೀಯರು ಕರೆಯುವುದು ತೆಂಜಿಕು ಎಂದು. ಇದರ ಅರ್ಥ ಅಕ್ಷರಶಃ ಸ್ವರ್ಗ ಎಂದು.
 • ಇಲ್ಲಿನ ಜನಪ್ರಿಯ ಶಿಂಗಾನ್ ಪಂಥದ ಮೂಲ ಬೇರುಗಳು ಭಾರತದಲ್ಲಿದೆ. ನಮ್ಮ ತಾಂತ್ರಿಕ ಪಂಥವೇ ಅಲ್ಲಿ ಶಿಂಗಾನ್ ಹೆಸರಿನಿಂದ ಕರೆಯಲ್ಪಡುತ್ತದೆ.
 • ಪ್ರಾಚೀನ ಜಪಾನ್ ಅವಶೇಷಗಳಲ್ಲಿ ಸಮುದ್ರ ಮಥನದ ಚಿತ್ರ ಕಂಡುಬಂದಿದೆ. ಜಪಾನೀ ಷಿಂಟೋ ಪಂಥದ ಸೃಷ್ಟಿ ಕಥನವು ಸಮುದ್ರಮಥನದಿಂದ ಆರಂಭವಾಗುತ್ತದೆ.
 • ನಮ್ಮ ಮೇರು ಪರ್ವತವನ್ನು ಅವರು ಮೊತ್ತ ಮೊದಲ ಮನುಷ್ಯ ಜನ್ಮ ತಳೆದ ಭೂಮಿಯೆಂದು ಪರಿಗಣಿಸುತ್ತಾರೆ.
 • ಬಹಳಷ್ಟು ಜಪಾನಿ ಪುರಾಣ ಕಥೆಗಳು ಹಾಗೂ ಶಾಸ್ತ್ರ ಗ್ರಂಥಗಳು ಭಾರತೀಯ ಚಿಂತನೆಯಿಂದ ಪ್ರೇರಿತವಾಗಿವೆ.
 • ನಮ್ಮ ವೈದಿಕ ದೇವತೆಗಳು ಕಾಶ್ಮೀರದ ಹಾದಿಯ ಮೂಲಕ ಚೀನಾ ಹಾಗೂ ಜಪಾನ್‌ಗಳನ್ನು ತಲುಪಿ, ಅಲ್ಲಿ ಜನಪ್ರಿಯಗೊಂಡವು.
 • ಕುಶಾನರ ಚಕ್ರವರ್ತಿ ಕಾನಿಷ್ಕನು ಜಪಾನಿನಲ್ಲಿ ಸರಸ್ವತಿವಾದಿ ಸಂಪ್ರದಾಯದ ವಿದ್ವಾಂಸರ ಬೃಹತ್ ಗೋಷ್ಠಿಯನ್ನು ಆಯೋಜಿಸಿದ್ದ. ಮುಂದೆ ಜಪಾನಿನಲ್ಲಿ ಬೌದ್ಧ ಮಹಾಯಾನ ಪಂಥ ಟಿಸಿಲೊಡೆಯಲು ಇದು ಕಾರಣವಾಯಿತು.
 • ದಕ್ಷಿಣ ಭಾರತದಿಂದ ಸಮುದ್ರ ಮಾರ್ಗದ ಮೂಲಕ ಜಪಾನ್ ತಲುಪಿದ ಹಿಂದೂ ಧರ್ಮವು ವೈದಿಕ ಸಂಪ್ರದಾಯಗಳನ್ನು ಪರಿಚಯಿಸಿತು.
 • ದಕ್ಷಿಣ ಭಾರತೀಯರ, ವಿಶೇಷತಃ ತಮಿಳುನಾಡಿನಿಂದ ಜಪಾನಿಗೆ ತೆರಳಿದ ವಿದ್ವಾಂಸರು ಅಲ್ಲಿಯ ಜನರಿಗೆ ಹೋಮ ಹವನಾದಿಗಳನ್ನು ನಡೆಸಿಕೊಡುವ ಆಚಾರಿಗಳೆಂದು ಪರಿಚಿತರಾದರು.
 • ತಮಿಳರ ಭಾಷಾ ಉಚ್ಚಾರ ಕ್ರಮದ ಛಾಯೆ ಇಂದಿಗೂ ಜಪಾನಿನಲ್ಲಿ ಕಂಡುಬರುತ್ತದೆ. ಉದಾ: ಹೋಮವನ್ನು ಅವರು ಗೋಮ ಅನ್ನುತ್ತಾರೆ. (ತಮಿಳರು ಹ ಬದಲಿಗೆ ಗ ಬಳಸುತ್ತಾರೆ.)
 • ನಮ್ಮ ದೇವತೆಗಳಲ್ಲೆಲ್ಲ ಜಪಾನೀಯರಿಗೆ ಪ್ರೀತಿಪಾತ್ರವಾದವರು ಗಣೇಶ ಮತ್ತು ಸರಸ್ವತಿ. ಗಣೇಶನನ್ನು ಇಲ್ಲಿ ಶೊಡೆನ್ ಎಂದು ಪೂಜಿಸಿದರೆ, ಸರಸ್ವತಿಯನ್ನು ಬೆನ್‌ಜೈಟೆನ್ ಎಂದು ಆರಾಧಿಸುತ್ತಾರೆ.
 • ಜಪಾನಿ ದಂಪತಿಗಳು ಸರಸ್ವತಿಯಂಥ ಮಗಳು ಬೇಕೆಂದು ಪ್ರಾರ್ಥಿಸುವುದು ಇಂದಿಗೂ ಸರ್ವೇಸಾಮಾನ್ಯ.
 • ಶಿವ, ಇಂದ್ರ, ಕುಬೇರ, ಅಗ್ನಿ, ಯಮ ಹಾಗೂ ಶಕ್ತಿ ದೇವತೆಗಳು ಈಗಲೂ ಇಲ್ಲಿ ಪೂಜೆಗೊಳ್ಳುವ ಜನಪ್ರಿಯ ಹಿಂದೂ ದೇವತೆಗಳು.
 • ಭಾರತೀಯ ಸಂಸ್ಕೃತಿ ಹಾಗೂ ಆಚರಣೆಗಳು ಪೂರ್ವ ಕಾಲದಲ್ಲಿ ಮಾತ್ರವಲ್ಲ, ಈಗಲೂ ಜಪಾನಿನಲ್ಲಿ ಜೀವಂತವಿದ್ದು, ಅಲ್ಲಿಯ ಜನರು ಅವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡಿದ್ದಾರೆ.
 • ಜಪಾನ್ ಚಿಂತನೆಗಳ ಬಗ್ಗೆ ಚರ್ಚಿಸುವುದು ಎಂದರೆ ಭಾರತೀಯ ಚಿಂತನೆಗಳನ್ನೇ ಚರ್ಚಿಸಿದಂತೆ ಎನ್ನುವ ಮಾತನ್ನು ಸ್ವತಃ ಜಪಾನ್ ವಿದ್ವಾಂಸರೆ ಹೇಳುತ್ತಾರೆ.
 • ಜಪಾನೀಯರ ಸಾಂಪ್ರದಾಯಿಕ ಗುಬಾಕು ಮತ್ತು ಗಿಗಾಕು ನೃತ್ಯ ಪ್ರಕಾರಗಳು ರಾಮಾಯಣ ಕಥನವನ್ನು ನಿರೂಪಿಸುವ ವಿಶಿಷ್ಟ ಪ್ರಕಾರಗಳಾಗಿವೆ.
 • ಹಿಂದೂ ಆಚರಣೆಗಳ ಲೇಪನವಿರುವ ಬೌದ್ಧ ಧರ್ಮ ಜಪಾನೀಯರ ಪ್ರಮುಖ ಧರ್ಮವಾಗಿದ್ದು, ಪೂಜಾ ವಿಧಾನಗಳೆಲ್ಲ ಹಿಂದೂ ಪದ್ಧತಿಯನ್ನೆ ಅನುಸರಿಸುತ್ತವೆ.
 • ದಕ್ಷಿಣ ಭಾರತದಿಂದ ಚೀನಾ-ಜಪಾನ್‌ಗಳಿಗೆ ತೆರಳಿ ಝೆನ್ ಪಂಥ ಸ್ಥಾಪನೆಗೆ ಕಾರಣನಾದ ದರುಮ ಅವರ ಅಚ್ಚುಮೆಚ್ಚಿನ ಗುರು. ಅಲ್ಲಿನ ಮಕ್ಕಳು ದರುಮನ ಗೊಂಬೆಯನ್ನಿಟ್ಟುಕೊಂಡು ಆಡುವಷ್ಟು ಪ್ರೀತಿ.
 • ಭಾರತದಿಂದ ಮತ್ತಷ್ಟು ಪೂರ್ವಕ್ಕೆ ವ್ಯಾಪಿಸಿದ ಬೌದ್ಧ ಧರ್ಮ ಕೊನೆಯಲ್ಲಿ ವಿಶ್ರಮಿಸಿದ್ದು ಇಲ್ಲಿಯೇ. ಹಾಗೆಂದೇ ಜಪಾನ್ ಇಂದಿಗೂ ಬೌದ್ಧ ಧರ್ಮದ ಉದಾತ್ತ ಮೌಲ್ಯಗಳನ್ನು ಜತನದಿಂದ ಉಳಿಸಿಕೊಂಡು ಬಂದಿದೆ.
 • ಜಪಾನೀಯರಿಗಿಂತಲೂ ಮುಂಚೆ ಭಾರತದೊಡನೆ ಐತಿಹಾಸಿಕ ಸಂಬಂಧ ಸ್ಥಾಪಿಸಿದ್ದು ಕೊರಿಯನ್ ರಾಷ್ಟ್ರಗಳು.
 • ಕೊರಿಯನ್ ಸಂಸ್ಕೃತಿಯ ಭಾರತೀಯರಿಂದಲೇ ರೂಪುಗೊಂಡಿದ್ದು, ಸ್ಥಳೀಯರು ಇಂದಿಗೂ ಅದನ್ನು ಗೌರವದಿಂದ ಸ್ಮರಿಸುತ್ತಾರೆ.
 • ಕೊರಿಯನ್ನರ ಜನಪ್ರಿಯ ರಾಣಿ ಹುಹ್, ಅಯೋಧ್ಯೆಯ ರಾಜಕುಮಾರಿಯಾಗಿದ್ದವಳು. ದೇವತೆಯ ಆದೇಶದಂತೆ ಜಪಾನ್‌ನ ಕಾಯ ರಾಜ್ಯಕ್ಕೆ ತೆರಳಿದ ಆಕೆ, ಅಲ್ಲಿಯ ಅರಸ ಸುರೋವನ್ನು ಮದುವೆಯಾದಳು.
 • ಕರಕ್ ರಾಜವಂಶ ಸ್ಥಾಪನೆಗೆ ಕಾರಣಳಾದ ಹುಹ್ ರಾಣಿಯ ಸಂತತಿಯವರು ಸುಮಾರು 6 ಮಿಲಿಯನ್ ಸಂಖ್ಯೆಯಷ್ಟಿದ್ದು, ದಕ್ಷಿಣ ಕೊರಿಯಾ ಅಧ್ಯಕ್ಷ ಕಿಮ್ ಡೆ ಯುಂಗ್ ಕೂಡ ಈಕೆಯ ವಂಶಜರೇ.
 • ಕೊರಿಯನ್ನರಿಗೆ ತಮ್ಮ ಪೂರ್ವಜರ ಬಗ್ಗೆ ಅದೆಷ್ಟು ಪ್ರೀತಿಯೆಂದರೆ, ಹುಹ್ ರಾಣಿಯ ಕಾಲವಾಗಿ ಎರಡು ಸಾವಿರ ವರ್ಷಗಳ ನಂತರ, ಅಯೋಧ್ಯೆಯಲ್ಲಿ ಆಕೆಯದೊಂದು ಸ್ಮಾರಕವನ್ನು ನಿರ್ಮಿಸಿದ್ದಾರೆ.
 • ತಮ್ಮನ್ನು ಭಾರತೀಯ ಸೂರ್ಯವಂಶದ ಅರಸರ ಸಂಬಂಧಿಗಳೆಂದು ಹೇಳಿಕೊಳ್ಳುವ ಬಹುಪಾಲು ಕೊರಿಯನ್ನರು ಅದನ್ನು ಹೆಮ್ಮೆಯ ವಿಷಯವಾಗಿ ಭಾವಿಸುತ್ತಾರೆ ಮತ್ತು ತಮ್ಮ ಇಂದಿನ ದಾಯಾದಿಗಳೊಡನೆ ಸಂಬಂಧ ಪುನರ್ಸ್ಥಾಪನೆಗೆ ಒಲವು ತೋರುತ್ತಾರೆ.
 • ಒಂದು ಕಾಲದಲ್ಲಿ ಸಿಯಾಮ್ ಎಂದೇ ಖ್ಯಾತವಾಗಿದ್ದ ಥಾಯ್‌ಲೆಂಡ್, ನಮ್ಮ ಪ್ರಾಚೀನ ಕೃತಿಗಳಲ್ಲಿ ಶ್ಯಾಮ ದೇಶ ಎಂದು ಉಲ್ಲೇಖಗೊಂಡಿದೆ. ಸಿಯಾಮ್ ಎನ್ನುವುದು ಶ್ಯಾಮದ ಸ್ಥಳೀಯ ಉಚ್ಛಾರಣೆ.
 • ಪ್ರಸ್ತುತ ಮುಸ್ಲಿಮ್ ಬಾಹುಳ್ಯ ಇರುವ ಈ ದೇಶದಲ್ಲಿ ಮುಸ್ಲಿಮರೂ ಹಿಂದು ಹೆಸರುಗಳನ್ನಿಟ್ಟುಕೊಂಡು ತಮ್ಮ ಬೇರುಗಳೆಡೆಗಿನ ಒಲವು ಸಾಬೀತುಪಡಿಸುತ್ತಾರೆ.
   

Leave a Reply