ಜಮ್ಮು-ಕಾಶ್ಮೀರ ಸಂತ್ರಸ್ತರಿಗೆ ಎಬಿವಿಪಿ ನೆರವು

ಅ.ಭಾ.ವಿ.ಪ - 0 Comment
Issue Date : 12.11.2014

ಜಮ್ಮು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಜಮ್ಮು-ಕಾಶ್ಮೀರ ಸಂತ್ರಸ್ತರಿಗೆ ನೆರವು ನೀಡಲು ಇಲ್ಲಿನ ಕುಗ್ರಾಮ ಪ್ರದೇಶವಾಗಿರುವ ಅವಂತಿಪುರ ತಾಲೂಕಿನ ಗುಲ್ಜಾರ್‌ಪುರಕ್ಕೆ ಅ. 28ರಂದು ತೆರಳಿದರು.
ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪವನ್‌ಶರ್ಮಾ ಅವರು ಗುಲ್ಜಾರ್‌ಪುರದ ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿ, 26 ವಿದ್ಯಾರ್ಥಿಗಳಿಗೆ ನಗದು ಹಣ ವಿತರಿಸಿದರು. ಈ ವಿದ್ಯಾರ್ಥಿಗಳು ಇತ್ತೀಚಿನ ಪ್ರವಾಹದಲ್ಲಿ ತೀವ್ರ ತೊಂದರೆಗೀಡಾಗಿದ್ದರು. ಸ್ಥಳೀಯರು, ಶಾಲೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪರಿಷತ್ತಿನ ಈ ಕಾರ್ಯವನ್ನು ಕೊಂಡಾಡಿದರು.

   

Leave a Reply