ಜಮ್ಮು: ಹುತಾತ್ಮರಿಗೆ ಗೌರವಾಂಜಲಿ

ಭಾರತ - 0 Comment
Issue Date : 20.112014

ಜಮ್ಮು: ಜಮ್ಮು-ಕಾಶ್ಮೀರ ರಾಜ್ಯ ಭಾರತದೊಂದಿಗೆ ವಿಲೀನಗೊಂಡ ದಿನದ ನೆನಪಿಗಾಗಿ ಅ. 26ರಂದು ಇಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದವು. 1947ರ ಅಕ್ಟೋಬರ್ 26ರಂದು ಜಮ್ಮು-ಕಾಶ್ಮೀರದ ಕೊನೆಯ ರಾಜ ಹರಿಸಿಂಗ್ ಅವರು ಭಾರತ ಸರ್ಕಾರದೊಂದಿಗೆ ವಿಲೀನಕ್ಕೆ ಸಹಿ ಹಾಕಿದ್ದರು. ಇದರಿಂದಾಗಿ ಕಾಶ್ಮೀರದ ನೆಲಕ್ಕೆ ಭಾರತದ ಸೈನ್ಯ ಪ್ರವೇಶಿಸಿ ಪಾಕ್ ಸೈನ್ಯವನ್ನು ಶ್ರೀನಗರದಿಂದ ಹೊರಗೆ ಹೊಡೆದಟ್ಟಲು ಸಾಧ್ಯವಾಗಿತ್ತು. ಹಾಗಾಗಿ ಆ ದಿನ ಕಾಶ್ಮೀರ, ಲಡಾಕ್ ಮತ್ತು ಜಮ್ಮು ಪ್ರದೇಶವನ್ನು ಪಾಕಿಸ್ಥಾನದ ಆಕ್ರಮಣದಿಂದ ಉಳಿಸಲು ಸಾಧ್ಯವಾಗಿತ್ತು.

ಜಮ್ಮು-ಕಾಶ್ಮೀರ ಮಾಜಿ ಸೈನಿಕರ ಸಂಘ ಈ ಕಾರ್ಯಕ್ರಮವನ್ನು ಇತರ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿತು. ಅಲ್ಲದೆ ಆ ದಿನ ಉರಿ ಪ್ರದೇಶದಲ್ಲಿ ಪಾಕ್ ಆಕ್ರಮಣಕಾರರನ್ನು ತಡೆಗಟ್ಟಲು ಬ್ರಿಗೇಡಿಯರ್ ರಾಜೇಂದ್ರಸಿಂಗ್ ತನ್ನ ಜೀವವನ್ನೇ ಬಲಿದಾನ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮೇ.ಜ. ದುಶ್ಯಂತ್‌ಸಿಂಗ್, ಬ್ರಿ. ಜೆ.ಎಸ್. ರಾಜ್ ಪುರೋಹಿತ್, ಬ್ರಿ. ಆರ್.ಎಸ್. ಲಂಗೇಹ್ ಉಪಸ್ಥಿತರಿದ್ದರು. ಬಿಜೆಪಿಯ ಶರಣಾರ್ಥಿ ಘಟಕ ಗಡಿಗ್ರಹದಲ್ಲಿ ಸಮಾರಂಭವೊಂದನ್ನು ಏರ್ಪಡಿಸಿತ್ತು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್, ಉಪಾಧ್ಯಕ್ಷ ವಿವೋದ್ ಗುಪ್ತಾ, ರಾಜ್ಯ ಚುನಾವಣಾ ಸಮಿತಿ ಕಾರ್ಯದರ್ಶಿ ಸತ್‌ಶರ್ಮಾ ಹಾಗೂ ವಕ್ತಾರ ಅರುಣ್‌ಗುಪ್ತಾ ಪಾಲ್ಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಮುಂದೆಯೂ ಅದು ಹಾಗೇ ಉಳಿಯಲಿದೆ ಎಂದು ಕೌಲ್ ತಿಳಿಸಿದರು.
ಸಂಜೀವನಿ ಶಾರದಾ ಕೇಂದ್ರ ಸಮಾರಂಭವನ್ನು ಏರ್ಪಡಿಸಿತ್ತು. ಖ್ಯಾತ ಸಂವಿಧಾನ ತಜ್ಞ ಬಿ.ಎಲ್. ಸರಾಫ್, ಜಮ್ಮು-ಕಾಶ್ಮೀರ ಭಾರತದೊಂದಿಗೆ ವಿಲೀನಗೊಂಡ ಬಗೆಯನ್ನು ವಿವರವಾಗಿ ತಿಳಿಸಿದರು. ಜಮ್ಮು-ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಲಿದೆ ಎಂದ ಅವರು ಸಾರಿದರು.

   

Leave a Reply