ಜಾತಿರಹಿತ ಸಮಾಜ ನಿರ್ಮಾಣಕ್ಕೆ ಬದ್ಧರಾಗಿ: ಡಾ. ಕೃಷ್ಣಗೋಪಾಲ್

ರಾಜ್ಯಗಳು - 0 Comment
Issue Date : 07.05.2015

ಡೆಹರಾಡೂನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ತಪಸ್ವಿಗಳಿದ್ದಂತೆ. ಅವರು ಯಾವಾಗಲೂ ದೇಶದ ಒಳಿತಿಗಾಗಿ ಯೋಚಿಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಡಾ. ಕೃಷ್ಣಗೋಪಾಲ್ ಹೇಳಿದರು.
ಅವರು ಏ.19 ರಂದು ಇಲ್ಲಿ ಗಣವೇಷಧಾರಿ ಸ್ವಯಂಸೇವಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಜಾತಿರಹಿತ ಸಮಾಜವನ್ನು ನಿರ್ಮಿಸಲು ಇದು ಸಕಾಲವಾಗಿದೆ. ಸಮಾಜದಲ್ಲಿ ಅನೇಕ ಬಗೆಯ ಭಿನ್ನತೆಗಳಿರಬಹುದು. ಆದರೆ ಹಿಂದು ಎಂದಾಗ ಎಲ್ಲರೂ ಗೌರವಿಸುತ್ತಾರೆ. ಹಾಗಾಗಿ ಭಿನ್ನತೆಗಳನ್ನು ತೊರೆದು ನಾವೆಲ್ಲರೂ ಹಿಂದು ಎಂಬುದನ್ನು ಮರೆಯಕೂಡದು ಎಂದರು.
ಸಮಾರಂಭದಲ್ಲಿ ಪ್ರಾಂತ ಸಂಘಚಾಲಕರಾದ ಚಂದ್ರಪಾಲ್ ನೇಗಿ ಮತ್ತು ಮಹಾನಗರದ ಸಂಘಚಾಲಕ ಗೋಪಾಲ್‌ಕೃಷ್ಣ ಮಿತ್ತಲ್ ಉಪಸ್ಥಿತರಿದ್ದರು.
ವಿವಿಧ ಸಾಮಾಜಿಕ ಅನಿಷ್ಟಗಳ ಕುರಿತು ಮಾತನಾಡಿದ ಡಾ. ಕೃಷ್ಣಗೋಪಾಲ್, ಅಸ್ಪೃಶ್ಯತೆ ಇತ್ಯಾದಿ ಅನಿಷ್ಟಗಳು ಆಕ್ರಮಣಕಾರಿಗಳಿಂದ ಬಂದಿವೆ. ಪರಕೀಯ ಆಕ್ರಮಣಕ್ಕಿಂತ ಮೊದಲು ನಮ್ಮಲ್ಲಿ ಇಂತಹ ಸಾಮಾಜಿಕ ಅನಿಷ್ಟಗಳು ಇರಲಿಲ್ಲ ಎಂದರು. ಡಾ. ಅಂಬೇಡ್ಕರ್ ಹಿಂದು ಸಮಾಜದಲ್ಲಿರುವ ಇಂತಹ ಸಾಮಾಜಿಕ ಅನಿಷ್ಟಗಳನ್ನು ದೂರಗೊಳಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು. ಸಂಘದ ಪ್ರಾಂತ ಪ್ರಚಾರಕ ಡಾ. ಹರೀಶ್ ಮತ್ತು ಪ್ರಾಂತ ಕಾರ್ಯವಾಹ ಲಕ್ಷ್ಮೀಪ್ರಸಾದ್ ಜೈಸ್ವಾಲ್ ಅವರು ಉಪಸ್ಥಿತರಿದ್ದರು. ಸುಮಾರು 4,300 ಗಣವೇಷಧಾರಿ ಸ್ವಯಂಸೇವಕರು ಉಪಸ್ಥಿತರಿದ್ದರು.

   

Leave a Reply