ಜಾಹ್ನವಿ ಪತ್ರಿಕೆಯ ಸುವರ್ಣಮಹೋತ್ಸವ

ರಾಜ್ಯಗಳು - 0 Comment
Issue Date : 01.05.2015

ಹೊಸದಿಲ್ಲಿ: ಹಿಂದಿಯ ಪ್ರತಿಷ್ಠಿತ ಜಾಹ್ನವಿ ಪತ್ರಿಕೆಯ ಸುವರ್ಣಮಹೋತ್ಸವ ಸಮಾರಂಭಕ್ಕೆ ಆರೆಸ್ಸೆಸ್ ಸಹ ಸರಕಾರ್ಯವಾಹ ಡಾ. ಕೃಷ್ಣಗೋಪಾಲ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದಾಗಿ ಅನೇಕ ಪತ್ರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಇಂತಹ ಪರಿಸ್ಥಿತಿಯಲ್ಲಿ ಜಾಹ್ನವಿಯಂತಹ ಪತ್ರಿಕೆಗಳಿಗೆ ಬೆಂಬಲ ಅಗತ್ಯ. ಹಿಂದು ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ಜಾಹ್ನವಿ ಪತ್ರಿಕೆಯ ಪಾತ್ರವನ್ನು ಮರೆಯುವಂತಿಲ್ಲ ಎಂದು ಹೇಳಿದರು.
D ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಹಾಗೂ ಮಖನ್‌ಲಾಲ್ ಚತುರ್ವೇದಿ ಪತ್ರಕಾರಿತಾ ವಿಶ್ವ ವಿದ್ಯಾಲಯದ ನಿವೃತ್ತ ಉಪಕುಲಪತಿ ಅಚ್ಯುತಾನಂದ ಮಿಶ್ರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜಾಹ್ನವಿ ಪತ್ರಿಕೆಯ ಸಂಪಾದಕ ಭರತ್‌ಭೂಷಣ್ ಚಡ್ಡಾ ಹಾಗೂ ಪತ್ರಿಕೆಯ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.

   

Leave a Reply