ಟಿಬೆಟ್ – ಚೀನಾ

ಜಗದ್ಗುರು ಭಾರತ - 1 Comment
Issue Date : 07.04.2015

 

 •  ಕ್ರಿ.ಪೂ. 3ನೇ ಶತಮಾನದಲ್ಲಿ ಆಗಿ ಹೋದ ಪ್ರಸಿದ್ಧ ಸಾಮ್ರಾಟ ಹುಆಂಗ್ ಟಿ ಆಸ್ಥಾನದಲ್ಲಿ ಬ್ರಹ್ಮ ಮತ್ತು ಖರು ಎಂಬ ಭಾರತೀಯ ವಿದ್ವಾಂಸರು ಪ್ರಸಿದ್ಧರಾಗಿದ್ದರು.
 •  ಪ್ರಸ್ತುತ ಚಾಲ್ತಿಯಲ್ಲಿರುವ ಚೀನೀ ಲಿಪಿಯ ಮೂಲ ಪ್ರತಿಯನ್ನು ಆವಿಷ್ಕರಿಸಿದ್ದು ಈ ಬ್ರಹ್ಮ ಎಂಬಾತನೇ ಮುಂದೆ ಆತನ ಶಿಷ್ಯ ಚೀನಾದ ಸಾಂಗ್ ಷಿಯಾ ಅದನ್ನು ಅಭಿವೃದ್ಧಿಪಡಿಸಿ ಇಂದಿನ ರೂಪಕ್ಕೆ ತಂದನು.
 • ಹಳದಿ ಚಕ್ರವರ್ತಿ ಎಂದೇ ಪ್ರಸಿದ್ಧನಾಗಿದ್ದ ಸಾಮ್ರಾಟ ಹುಆಂಗ್ ಟಿಯು ಶಸ್ತ್ರಾಸ್ತ್ರಗಳು, ಕಟ್ಟಡಗಳು, ಹೊಲ ಗದ್ದೆಗಳು, ಉಡುಗೆ ಶೈಲಿ ಮೊದಲಾದವನ್ನು ಪರಿಚಯಿಸುವ ಮೂಲಕ ಚೀನೀ ನಾಗರಿಕತೆಗೆ ಬುನಾದಿ ಹಾಕಿದನು.
 • ಹಳದಿ ಚಕ್ರವರ್ತಿಯು ತನ್ನ ಆಸ್ಥಾನದಲ್ಲಿದ್ದ ಭಾರತೀಯ ಸಲಹೆಗಾರರ ಮಾರ್ಗದರ್ಶನದಲ್ಲಿ ಪ್ರಗತಿ ಕಾರ್ಯಗಳನ್ನು ನಡೆಸಿದ ಎನ್ನಲಾಗುತ್ತದೆ.
 • ಇಲ್ಲಿಂದ ಪಶ್ಚಿಮಕ್ಕೆ ವಿದ್ಯೆಗೆಂದು ಹೋದವರು: ನೂರರಲ್ಲಿ ಹತ್ತಕ್ಕೂ ಕಡಿಮೆ ಹಿಂತಿರುಗಿ ಬಂದರು ಇದು ಚೀನಾದ ಒಂದು ಒಗಟಿನ ಪದ್ಯ. ಇದು ಕಲಿಕೆಗೆಂದು ಬಂದು, ಭಾರತದ ಆಕರ್ಷಣೆಗೆ ಸಿಲುಕಿ ಇಲ್ಲೇ ನೆಲೆನಿಂತ ಚೀನೀ ಶಿಕ್ಷಾರ್ಥಿಗಳ ಕುರಿತಾಗಿದೆ.
 • ಕ್ರಿಸ್ತಪೂರ್ವದಲ್ಲಿಯೇ ದಕ್ಷಿಣ ಭಾರತದ ಕೆಲವು ಕುಟುಂಬಗಳು ಚೀನಾದ ಕರಾವಳಿಗೆ ವಲಸೆ ಹೋಗಿದ್ದು, ತಮ್ಮ ಜೊತೆ ಶಿವ ಹಾಗೂ ಗಣೇಶನನ್ನು ಕರೆದೊಯ್ದಿದ್ದರು.
 • 13ನೇ ಶತಮಾನದಲ್ಲಿ ಜೀವಿಸಿದ್ದ ಜಾ ಯುನ್ ಕುವಾ ಎಂಬ ಚೈನೀ ನಿರೀಕ್ಷಕನು ಭಾರತದ ಮಲಬಾರಿನ ಜನರ ಬಗ್ಗೆ ತೀವ್ರ ಕುತೂಹಲಿಯಾಗಿದ್ದು, ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿ ತನ್ನ ಟಿಪ್ಪಣಿಗಳನ್ನು ಸಂಕಲಿಸಿರುವನು.
 • ಈ ಸಂಕಲನದಲ್ಲಿ ಆತ ಇಬ್ಬರು ಮಲಬಾರಿಗಳ (ಮಲಯಾಳಿ ನಾಯರ್ ಕುಟುಂಬದವರು) ಆಗಮನದ ನಂತರ ಚೀನಾದ ವಾಣಿಜ್ಯ ವ್ಯವಹಾರಗಳು ಬಿರುಸಿನ ವೇಗ ಪಡೆದವು ಎಂದು ದಾಖಲಿಸಿದ್ದಾರೆ.
 • ಉತ್ಖನನದ ವೇಳೆ ದಕ್ಷಿಣ ಚೀನಾದ ಹಲವು ಭಾಗಗಳಲ್ಲಿ ಹಿಂದೂ ದೇಗುಲಗಳು ಪತ್ತೆಯಾಗಿದ್ದು, ಅವನ್ನು ಅತ್ಯಂತ ಪ್ರಾಚೀನ ಕಟ್ಟಡಗಳೆಂದು ಗುರುತಿಸಲಾಗಿದೆ.
 • ಬೌದ್ಧ ಧರ್ಮ ಚೀನಾಕ್ಕೆ ಕಾಲಿರಿಸಿದ್ದು ಕ್ರಿ.ಶ. 1ನೇ ಶತಮಾನದಲ್ಲಿ. ಅಲ್ಲಿಂದ ಮುಂದೆ ಚೀನಾ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ – ಎಲ್ಲ ಸ್ತರಗಳಲ್ಲಿಯೂ ಮಹತ್ತರ ಬದಲಾವಣೆಯನ್ನು ಕಂಡಿತು.
 • ವಿವಿಧ ಬೌದ್ಧ ಸೂತ್ರಗಳ ಸುಮಾರು ಸಾವಿರಕ್ಕೂ ಹೆಚ್ಚು ಅನುವಾದ ಮತ್ತು ವ್ಯಾಖ್ಯಾನಗಳು ಇಂದಿಗೂ ಲಭ್ಯವಿದೆ.
 • ಅದಕ್ಕೂ ಮುನ್ನ ಪ್ರಪ್ರಾಚೀನ ಹರಿವಂಶ ಕೃತಿಯ ಹಲವಾರು ಶ್ಲೋಕಗಳನ್ನು ಯುಜಿಂಗ್ ಎನ್ನುವವನು ಚೀನೀ ಭಾಷೆಗೆ ಅನುವಾದಿಸಿದ್ದ.
 • ಹಿಂದೂಗಳ ಪ್ರಮುಖ ದೇವತೆ ದುರ್ಗೆಯು ಚೀನಿಯರ ಪಾಲಿಗೆ ಸಕಲ ವಿದ್ಯೆಗಳ ದೇವತೆ ಸರಸ್ವತಿಯಾಗಿ, ಬೆಂಝೈಟೆನ್ ಎಂದು ಕರೆಸಿಕೊಂಡಳು.
 • ಬೆಂಝೈಟೆನ್ ದೇವತೆ ಬೌದ್ಧ ಧರ್ಮದ ವಿಸ್ತಾರದೊಂದಿಗೆ ಬೌದ್ಧರ ತಾಂತ್ರಿಕ ದೇವತೆಯೂ ಆಗಿ ಪ್ರಚುರಗೊಂಡಳು. ಈಕೆಗೆಂದು ಹಲವು ದೇಗುಲಗಳೂ ನಿರ್ಮಾಣಗೊಂಡಿದ್ದವು.
 • ಇತ್ತೀಚಿನ ದಶಕಗಳಲ್ಲಿ ದಕ್ಷಿಣ ಚೀನಾದಲ್ಲಿ ಬೃಹತ್ತಾದ ನರಸಿಂಹ ದೇಗುಲವಿದ್ದುದು ಬೆಳಕಿಗೆ ಬಂದಿತು. ಇಲ್ಲಿಗೆ ವಲಸೆ ಬಂದ ಭಾರತೀಯರು ಮುಕ್ತವಾಗಿ ತಮ್ಮ ಧರ್ಮಾಚರಣೆ ನಡೆಸುವಷ್ಟು ಪ್ರಭಾವಶಾಲಿಗಳಾಗಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ.
 • ಚೋಳ ಮತ್ತು ಪಲ್ಲವ ಅರಸು ಕುಲಗಳ ಸಂಪರ್ಕವಿದ್ದ ಮಧ್ಯ ಚೀನಾದಲ್ಲಿ ಶೈವ ಹಾಗೂ ವೈಷ್ಣವ ಪಂಥಗಳು ಅಧ್ಯಯನದ ವಸ್ತುಗಳಾಗಿದ್ದವು. ಈ ಪ್ರದೇಶದಲ್ಲಿ ವಿಷ್ಣು ಹಾಗೂ ಶಿವ ಮಂದಿರಗಳನ್ನು ಕಟ್ಟಲಾಗಿತ್ತು.
 • ಚೀನೀ ಪುರಾಣಗಳ ಹಲವು ಯಕ್ಷ – ಯಕ್ಷಿಯರು ಹಾಗೂ ಅಸುರರು ಭಾರತೀಯ ಪುರಾಣಗಳಿಂದ ಎರವಲು ಪಡೆದಂಥವಾಗಿವೆ. ಅವರು ವಿಶೇಷವಾಗಿ ಯಕ್ಷಿಗಳ ಆರಾಧನೆಗೆ ಒಲವು ತೋರಿದರು.
 • ಚೀನಾದಲ್ಲಿ ಬೌದ್ಧ ಧರ್ಮವು ಹಿಂದೂ ಧರ್ಮದ ಒಂದು ಅಂಗವಾಗಿಯೇ ಪ್ರಚುರಗೊಂಡಿತು. ಅಲ್ಲಿನ ಇನ್ನೆರಡು ಪ್ರಮುಖ ಮತಪಂಥಗಳಾದ ಕನ್ಫ್ಯೂಷಿಯಸ್ ಹಾಗೂ ತಾವೋ ಕೂಡ ಭಾರತೀಯ ಚಿಂತನೆಗಳಿಂದಲೇ ಪ್ರೇರಿತವಾದಂಥವು.
 • ಬೌದ್ಧ ಮತದ ಸೆಳೆತಕ್ಕೆ ಸಿಕ್ಕ ಚೀನಾ ಅದನ್ನು ರೂಢಿಗೆ ತರಲು ತನ್ನ ಸಂಪತ್ತಿನ ಬಹು ದೊಡ್ಡ ಭಾಗವನ್ನು ವಿನಿಯೋಗಿಸಿತು. ಬೌದ್ಧ ಬೋಧಕರನ್ನು ಮತ್ತೊಂದು ಸಾಮ್ರಾಜ್ಯದಿಂದ ಅಪಹರಿಸಿಕೊಂಡು ಹೋಗುವಷ್ಟು ಉತ್ಸುಕತೆ ಅದರದಾಗಿತ್ತು.
 • ದಕ್ಷಿಣ ಭಾರತದ ಪಲ್ಲವ ಕುಲ ಮೂಲದ ಬೋಧಿಧರ್ಮ, ಚೀನಾದಲ್ಲಿ ದಮೋ ಅಥವಾ ದರುಮನಾಗಿ ಬುದ್ಧನಷ್ಟೇ ಪ್ರಭಾವ ಬೀರಿದ.
 • ಚೀನೀಯರು ಬೌದ್ಧ ಧರ್ಮದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ ಬೋಧಿಧರ್ಮ ಸುಪ್ರಸಿದ್ಧ ಚಾನ್ (ಜಪಾನಿನಲ್ಲಿ ಝೆನ್) ಪಂಥದ ಉಗಮಕ್ಕೆ ಕಾರಣನಾದ.
 • ಭಾರತೀಯ ಕಳರಿಪಯಟ್ಟು ಯುದ್ಧ ಕಲೆಯು ಚೀನಾದಲ್ಲಿ ಮಾರ್ಷಲ್ ಯುದ್ಧ ಕಲೆಯಾಗಿ ಪ್ರಚುರಗೊಂಡಿತು. ಅದರ ತರಬೇತಿಗಾಗಿ ಇಲ್ಲಿನ ಗುರುಗಳನ್ನು ಸಕಲ ಮರ್ಯಾದೆಗಳೊಡನೆ ಅವರು ಕರೆಸಿಕೊಳ್ಳುತ್ತಿದ್ದರು.
 • ಸುಯ್ ಅರಸುಕುಲವು ಭಾರತೀಯ ಅರ್ಥಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರಗಳನ್ನು ಚೀನೀ ಭಾಷೆಗೆ ಅನುವಾದ ಮಾಡಿಸಿ, ಅವುಗಳನ್ನು ಮುಖ್ಯ ಆಕರ ಗ್ರಂಥಗಳನ್ನಾಗಿ ಪರಿಗಣಿಸಿತ್ತು.
 • ಇಂದು ಚೀನಾದ ಅತಿಕ್ರಮಣಕ್ಕೆ ತುತ್ತಾಗಿರುವ ಟಿಬೆಟ್, ಮಾನಸಿಕವಾಗಿ ಭಾರತ ದೇಶದ ಅಂಗಭಾಗವೇ ಆಗಿದೆ. ಜಗತ್ತಿನ ಛಾವಣಿಯಂಥ ಈ ದೇಶ ಪುರಾತನ ಕಾಲದಿಂದಲೂ ಭಾರತವನ್ನು ತನ್ನ ಗುರುವಾಗಿಸಿಕೊಂಡಿದೆ.
   

1 Response to ಟಿಬೆಟ್ – ಚೀನಾ

 1. ಮಯೂರ

  ಭೋಧಿಧರ್ಮ ಪಲ್ಲವ ಕುಲದವ ಅಂತ ಹೇಗೆ ಹೇಳ್ತಿರಾ…???? ತಮಿಳನವರ ಕತೆಗಳನ್ನ ಕೇಳಿ ಬರಿದಿದಿರಾ ಜಗದ್ಗುರು…ಬೋಧಿಧರ್ಮನ ಕಾಲಕ್ಕೆ ಚೋಳರ ಸಾಮ್ರಾಜ್ಯ ಕ್ಷೀಣಿಸಿತು …ಆ ಅವಧಿಯಲ್ಲಿ ಉತ್ತುಂಗದಲ್ಲಿದ್ದಿದ್ದು ಕದಂಬ ಸಾಮ್ರಾಜ್ಯ…(ಗಂಗರು, ಪಾಂಡ್ಯರು ಮತ್ತು ಪಲ್ಲವರು ಸಾಮ್ರಾಜ್ಯಗಳು ಕೂಡ ಇದ್ದವು ಆದರೆ ಕದಂಬರಷ್ಟಲ್ಲ) ಮಲಯಾಳಿಗಳಿಕಿಂತ ನಮ್ಮ ಮಂಗಳೂರಿನವರು ವ್ಯಾಪಾರಕ್ಕೆ ಹೆಚ್ಚು ಜಾಣರು…..ನೀವು ಯಾವ ಆಧಾರದ ಮೇಲೆ ಬರದಿದ್ದಿರಿ, ಸ್ವಲ್ಪ ಕೊಂಡಿಗಳ ಇದ್ದರೆ ಕೊಡಿ..ಬೋಧಿಧರ್ಮ ದಕ್ಷಿಣ ಭಾರತದವನು ಅಂತ ಚೀನಿಯದು ಹೇಳಿದ್ದು,ಭಾರತದಲ್ಲಾವು ನಮ್ಮವನು ಅಂತ ಹೇಳ್ಕೊಳ್ಳೊಕೆ ಯಾವ ದಾಖಲೆಗಳು ಇಲ್ಲ..ಯಜಮಾನರಿಲ್ಲದ ಜಾಗಕ್ಕೆ ನಾನೇ ಯಜಮಾನ ಅಂತ ಹೇಳಿಕೊಳ್ಳೊ ಜಾಯಮಾನದವರನ್ನ ನಂಬಬೇಡಿ…

Leave a Reply