ತಮಿಳ್ನಾಡಿನಲ್ಲಿ ‘ಸಾಧನೈ ಸಂಗಮಂ’

ಸುದ್ದಿಗಳು - 0 Comment
Issue Date : 12.05.2015

ಪದ್ಮನಾಭಪುರಂ (ಕನ್ಯಾಕುಮಾರಿ ಜಿಲ್ಲೆ): ‘ಸಾಧನೈ ಸಂಗಮಂ’ – ಸೇವಾವ್ರತಿಗಳ ಸಮಾವೇಶವು ಏ. 17ರಂದು ಇಲ್ಲಿ ನಡೆಯಿತು. ಸೇವಾ ಭಾರತಿ ಈ ಸಮಾವೇಶವನ್ನು ಸಂಘಟಿಸಿತ್ತು. ವಿವಿಧ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 4850 ಮಹಿಳೆಯರು ಹಾಗೂ 300 ಪುರುಷರು ಸೇರಿದಂತೆ ಒಟ್ಟು 5150 ಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು. 

 ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅ.ಭಾ. ಸೇವಾ ಪ್ರಮುಖ್ ಸುಹಾಸ್‌ರಾವ್ ಹಿರೇಮಠ್ ಅವರು, ಸ್ವಯಂಸೇವಕರು ಈ ದಿನಗಳಲ್ಲಿ ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಗ್ರಾಮಗಳ ಉತ್ಥಾನ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶದಾದ್ಯಂತ ಒಟ್ಟು 1,52,000 ಸೇವಾ ಯೋಜನೆಗಳು ನಡೆಯುತ್ತಿವೆ. ಈ ಪೈಕಿ ತಮಿಳ್ನಾಡು ರಾಜ್ಯವೊಂದರಲ್ಲೇ 10,400 ಸೇವಾ ಯೋಜನೆಗಳು ನಡೆಯುತ್ತಿವೆ. ಸೇವೆಯ ಮೂಲಕ ಶಿಕ್ಷಣ, ಸಂಸ್ಕೃತಿ, ಆರ್ಥಿಕತೆ, ಸ್ವಾವಲಂಬನೆ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜನರ ನೈತಿಕತೆಯಲ್ಲಿ ಹೊಸ ಹೊಳಪನ್ನು ಕಾಣಬಹುದಾಗಿದೆ ಎಂದು ನುಡಿದರು.

 ಸ್ವಾಮಿ ವಿವೇಕಾನಂದರ ಚಿಂತನೆಯಾದ ‘ನರಸೇವಾ, ನಾರಾಯಣ ಸೇವಾ’ಅನ್ನು ಪ್ರತ್ಯಕ್ಷವಾಗಿ ದೇಶದಲ್ಲಿಂದು ಕಾಣಬಹುದಾಗಿದೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಒಟ್ಟು 1, 940 ಗ್ರಾಮಗಳಿವೆ. ಈ ಪೈಕಿ ಒಟ್ಟು 1550 ಗ್ರಾಮಗಳಲ್ಲಿ 6597 ಸೇವಾ ಚಟುವಟಿಕೆಗಳು ನಡೆಯುತ್ತಿವೆ ಎಂದವರು ವಿವರಿಸಿದರು. ಈ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ಹಿರೇಮಠ್ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಕುಗ್ರಾಮಗಳಿಗೂ ಸೇವಾ ಕಾರ್ಯ ತಲುಪುವಂತೆ ಶ್ರಮಿಸಬೇಕೆಂದು ಮನವಿ ಮಾಡಿದರು.

 ದಿವ್ಯ ಸಾನ್ನಿಧ್ಯವಹಿಸಿದ್ದ ವೆಲ್ಲಿ ಮಲೈ ಸ್ವಾಮಿ ಸೈದಾನ್ಯನಂದ ಅವರು ಮತಾಂತರ ತಡೆಗೆ ಕರೆ ನೀಡಿದರು. ಮೂಗಾಂಬಿಗೈ ಮೆಡಿಕಲ್ ಕಾಲೇಜಿನ ಬಾಲಚಂದ್ರನ್, ದಕ್ಷಿಣ ಕ್ಷೇತ್ರ ಸೇವಾ ಪ್ರಮುಖ್ ಪದ್ಮಕುಮಾರ್, ರಾಷ್ಟ್ರೀಯ ಸೇವಾ ಭಾರತಿಯ ಸಂಘಟನಾ ಕಾರ್ಯದರ್ಶಿ ಸುಂದರಲಕ್ಷ್ಮಣ್, ಸೇವಾ ಭಾರತಿಯ ಪ್ರಾಂತ ಅಧ್ಯಕ್ಷ ರಾಮನಾಥನ್,  ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ ವಿನಾಯಕಂ, ಪ್ರಾಂತ ಪ್ರಚಾರಕ್ ಸೆಂಥಿಲ್‌ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

 

 

±Ü¨Ü¾®Ý»Ü±ÜâÃÜí (PÜ®ÝÂPÜáÊÜÞÄ iÇæÉ): “ÓÝ«Ü®æç ÓÜíWÜÊÜáí’ & ÓæàÊÝÊÜÅ£WÜÙÜ ÓÜÊÜÞÊæàÍÜÊÜâ H. 17ÃÜí¨Üá CÈÉ ®ÜvæÀáñÜá. ÓæàÊÝ »ÝÃÜ£ D ÓÜÊÜÞÊæàÍÜÊÜ®Üá° ÓÜíZqÔñÜᤙ. ËË«Ü ÓæàÊÝ PæÒàñÜÅWÜÙÜÈÉ PÝ¿áì¯ÊÜì×ÓÜᣤÃÜáÊÜ 4850 ÊÜá×Ùæ¿áÃÜá ÖÝWÜã 300 ±ÜâÃÜáÐÜÃÜá ÓæàĨÜíñæ Joár 5150 ÓæàÊÝ PÝ¿áìPÜñÜìÃÜá ±ÝÇæãYíw¨ÜªÃÜá. ÓÜÊÜÞÊæàÍÜÊÜ®Üá° E¨æªàÎÔ ÊÜÞñÜ®Ýw¨Ü ÓÜíZ¨Ü A.»Ý. ÓæàÊÝ ±ÜÅÊÜááT… ÓÜáÖÝÓ…ÃÝÊ… ×ÃæàÊÜás… AÊÜÃÜá, ÓÜÌ¿áíÓæàÊÜPÜÃÜá D ©®ÜWÜÙÜÈÉ ÎPÜÒ|, BÃæãàWÜ™, ÓÜíÓÜ¢£, ÓÝÊÜÞiPÜ ÓÝÊÜáÃÜÓÜ™, WÝÅÊÜáWÜÙÜ Eñݧ®Ü CñÝ© ÖÜÆÊÝÃÜá PæÒàñÜÅWÜÙÜÈÉ ÓæàÊæ ÓÜÈÉÓÜᣤ¨ÝªÃæ. ¨æàÍܨݨÜÂíñÜ Joár 1,52,000 ÓæàÊÝ Áãàg®æWÜÙÜá ®Üvæ¿áᣤÊæ. D ±æçQ ñÜËáÙÝ°vÜá ÃÝgÂÊæäí¨ÜÃÜÇæÉà 10,400 ÓæàÊÝ Áãàg®æWÜÙÜá ®Üvæ¿áᣤÊæ. ÓæàÊæ¿á ÊÜáãÆPÜ ÎPÜÒ|, ÓÜíÓÜ¢£, B¦ìPÜñæ, ÓÝÌÊÜÆퟮæ ÖÝWÜã ÓÝÊÜÞiPÜÊÝX ×í¨ÜáÚ¨Ü g®ÜÃÜ ®æç£PÜñæ¿áÈÉ ÖæãÓÜ ÖæãÙܱܮÜá° PÝ|ŸÖÜá¨ÝX¨æ Gí¨Üá ®Üáw¨ÜÃÜá.ÓÝÌËá ËÊæàPÝ®Üí¨ÜÃÜ bíñÜ®æ¿Þ¨Ü “®ÜÃÜÓæàÊÝ, ®ÝÃÝ¿á| ÓæàÊÝ’A®Üá° ±ÜÅñÜÂPÜÒÊÝX ¨æàÍܨÜÈÉí¨Üá PÝ|ŸÖÜá¨ÝX¨æ. PÜ®ÝÂPÜáÊÜÞÄ iÇæÉ¿áÈÉ Joár 1, 940 WÝÅÊÜáWÜÚÊæ. D ±æçQ Joár 1550 WÝÅÊÜáWÜÙÜÈÉ 6597 ÓæàÊÝ aÜoáÊÜqPæWÜÙÜá ®Üvæ¿áᣤÊæ Gí¨ÜÊÜÃÜá ËÊÜÄÔ¨ÜÃÜá. D ÓæàÊÝ aÜoáÊÜqPæWÜÙÜ®Üá° ÍÝÉ\st ×ÃæàÊÜás… AÊÜÃÜá, ÊÜááí©®Ü ©®ÜWÜÙÜÈÉ iÇæÉ¿á PÜáWÝÅÊÜáWÜÚWÜã ÓæàÊÝ PÝ¿áì ñÜÆá±ÜâÊÜíñæ ÍÜÅËáÓܸæàPæí¨Üá ÊÜá®ÜË ÊÜÞw¨ÜÃÜá.©ÊÜ Óݯ°«ÜÂÊÜ×Ԩܪ ÊæÈÉ ÊÜáÇæç ÓÝÌËá Óæç¨Ý®Ü®Üí¨Ü AÊÜÃÜá ÊÜáñÝíñÜÃÜ ñÜvæWæ PÜÃæ ¯àw¨ÜÃÜá. ÊÜáãWÝí¹Wæç ÊæáwPÜÇ… PÝÇæài®Ü ¸ÝÆaÜí¨ÜÅ®…, ¨ÜQÒ| PæÒàñÜÅ ÓæàÊÝ ±ÜÅÊÜááT… ±Ü¨Ü¾PÜáÊÜÞÃ…, ÃÝÑóà¿á ÓæàÊÝ »ÝÃÜ£¿á ÓÜíZo®Ý PÝ¿áì¨ÜÎì ÓÜáí¨ÜÃÜÆPÜÒ$¾O…, ÓæàÊÝ »ÝÃÜ£¿á ±ÝÅíñÜ A«ÜÂPÜÒ ÃÝÊÜá®Ý¥Ü®…,  ¹hæ² ÃÝg ÓÜíZo®Ý PÝ¿áì¨ÜÎì PæàÍÜÊÜ Ë®Ý¿áPÜí, ±ÝÅíñÜ ±ÜÅaÝÃÜP… Óæí¦Ç…PÜáÊÜÞÃ… Êæã¨ÜÇݨÜÊÜÃÜá D ÓÜí¨Ü»Üì¨ÜÈÉ ÖÝgĨܪÃÜá.

 
   

Leave a Reply