ತೇಜಸ್ ಸೇರ್ಪಡೆಯಿಂದ ಹೆಚ್ಚಿದ ಭಾರತದ ರಕ್ಷಣಾ ಪಡೆಯ ತೇಜಸ್ಸು

ಪ್ರಚಂಡ ಭಾರತ - 0 Comment
Issue Date : 21.12.2013

ಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಗುರ ಯುದ್ಧ ವಿಮಾನ ತೇಜಸ್ ನ 2ನೇ ಹಂತದ ಪರೀಕ್ಷಾರ್ಥ ಹಾರಾಟ  ಡಿ.20ರಂದು  ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಡೆಯಿತು. ನಂತರ ಇದನ್ನು ಹೆಚ್ಚಿನ ಹಾರಾಟಕ್ಕೆ ರಕ್ಷಣಾ ಪಡೆಗೆ ಹಸ್ತಾಂತರಿಸಲಾಯಿತು. ಈ ಮೂಲಕ ದೇಶದ ರಕ್ಷಣಾ ವ್ಯವಸ್ಥೆಯ ಬಲ ಮತ್ತಷ್ಟು ಹೆಚ್ಚಿದಂತಾಗಿದೆ. 4ನೇ ತಲೆಮಾರಿನ ಹಗುರ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಭಾರತ ಮೇಲುಗೈ ಸಾಧಿಸಿದಂತಾಗಿದೆ.  ಇದು ಅತ್ಯುತ್ತಮ ಶಬ್ಧಾತೀತ ವೇಗದ ಯುದ್ಧ ವಿಮಾನ. ಎಚ್ಎಎಲ್ ವೈಮಾನಿಕ ಸಂಶೋಧನಾ ಸಂಸ್ಥೆ, ಸಿಎಸ್ಆರ್ಆರ್  ಮೊದಲಾದ ಸಂಸ್ಥೆಗಳು ಈ ವಿಮಾನ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡಿವೆ.

ತೇಜಸ್ವಿ ವಿಮಾನದ ವಿಶೇಷತೆ:

1.  ಸರ್ವಋತು ಕಾರ್ಯ ಸಾಮರ್ಥ್ಯ.

2. 3500 ಕೆ.ಜಿ. ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲುದು.

3. ಪ್ರತಿ ಗಂಟೆಗೆ 1500 ಕಿ.ಮೀ ವೇಗ

4. ಮಲ್ಟಿ ಮೋಡ್ ರೇಡಾರ್ ವ್ಯವಸ್ಥೆ

5. ರಾತ್ರಿ ವೇಳೆಯಲ್ಲೂ ಕಾರ್ಯ ನಿರ್ವಹಣೆ

6. ಕಂಪ್ಯೂಟರ್ ಆಧಾರಿತ ನಿಯಂತ್ರಣ ವ್ಯವಸ್ಥೆ

  

   

Leave a Reply