ಥೈಲ್ಯಾಂಡ್ – ಫಿಲಿಫೈನ್ಸ್

ಜಗದ್ಗುರು ಭಾರತ - 0 Comment
Issue Date : 30.04.2015

 • ಥಾಯ್ ಜನರ ದೈನಂದಿನ ಬದುಕಿನಲ್ಲಿ ಸಂಸ್ಕೃತದ ಹೆಸರು ಮತ್ತು ನುಡಿಗಟ್ಟುಗಳು ಚಾಲ್ತಿಯಲ್ಲಿರುವುದು. ಅವರಲ್ಲಿ ಹಿಂದೂ ಧರ್ಮ ಅದೆಷ್ಟು ಹಾಸುಹೊಕ್ಕಾಗಿದೆ ಅನ್ನುವುದನ್ನು ಸಾರುತ್ತದೆ.
 • ಇಲ್ಲಿ ರಾಮಕಿನ್ ಎಂದು ಕರೆಸಿಕೊಳ್ಳುವ ರಾಮಾಯಣ, ರಾಷ್ಟ್ರೀಯ ಮಾನ್ಯತೆಯ ಕೃತಿಯಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಅದನ್ನು ಅಭಿನಯಿಸಲಾಗುತ್ತದೆ.
 • ಪ್ರಾಚೀನ ಕಾಲದಿಂದಲೂ ಥಾಯ್ ಜನರು ರಾಮಾಯಣದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಶ್ಯಾಮ ದೇಶದ ಮುಖ್ಯ ನಗರವೊಂದಕ್ಕೆ ಅಯೋಧ್ಯೆಯ ನೆನಪಿಗಾಗಿ ಅಯುತ್ತಯ ಎಂದೇ ಹೆಸರಿಡಲಾಗಿತ್ತು.
 • ಇಂದಿಗೂ ಅಲ್ಲಿ ರಾಷ್ಟ್ರದ ಮುಖ್ಯಸ್ಥರಾಗಿ ಅಧಿಕಾರ ವಹಿಸುವವರು ಪ್ರಮಾಣ ವಚನ ಸ್ವೀಕರಿಸುವುದು ರಾಮನ ಪಾದುಕೆಯ ಸಾಕ್ಷಿಯಾಗಿಯೇ.
 • ಗಣಪತಿ ಥಾಯ್ ಜನರ ಅಚ್ಚುಮೆಚ್ಚಿನ ದೈವವಾಗಿದ್ದು, ಭಿನ್ನ ರೂಪಗಳ, ಭಿನ್ನ ಶೈಲಿಗಳ ಗಣೇಶ ವಿಗ್ರಹಗಳು ಇಲ್ಲಿ ಕಾಣ ಸಿಗುತ್ತವೆ.
 • ತನ್ನ ಇಂದಿನ ಇಸ್ಸಾಮಿ ಗುರುತನ್ನೂ ಮೀರಿ ಥಾಯ್ಲೆಂಡ್, ತನ್ನ ಆಡಳಿತ ಯಂತ್ರದಲ್ಲಿ ಸಂಸ್ಕೃತ ಘೋಷ ವಾಕ್ಯಗಳನ್ನೂ ಹೆಸರುಗಳನ್ನೂ ಹಾಗೆಯೇ ಹಿಂದೂ ದೇವತೆಗಳ ಸಂಕೇತಗಳನ್ನೂ ಉಳಿಸಿಕೊಂಡಿವೆ.
 • ಇಂದಿಗೂ ಗರುಡ ಇಲ್ಲಿಯ ರಾಜ ಲಾಂಛನವಾಗಿ ಮನ್ನಣೆ ಪಡೆದಿದೆ.
 • ಬ್ಯಾಂಗ್‌ಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ಮಂದರ ಪರ್ವತ ಹೊತ್ತಿರುವ ಕೂರ್ಮಾವತಾರದ ಹಾಗೂ ಗರುಡ ವಾಹನ ನಾರಾಯಣನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.
 • ಥಾಯ್‌ಲೆಂಡ್‌ನಲ್ಲಿ ಥೇರವಾದ ಬೌದ್ಧ ಪಂಥವು ಹೆಚ್ಚು ಜನಪ್ರಿಯವಾಗಿದ್ದು, ಹಿಂದೂ ರಿವಾಜುಗಳೊಂದಿಗೆ ಬೆಸೆದುಕೊಂಡಿದೆ.
 • ಪ್ರಸ್ತುತ ಭಾರತೀಯರೇ ಕೈಬಿಡುತ್ತಿರುವ ಪ್ರಮುಖ ವೈದಿಕ ದೇವತೆ ವರುಣನ ಪೂಜೆಯನ್ನು ಥಾಯ್ ಜನರು ಬರನ್ ಸತ್ರ ಎಂಬ ಹೆಸರಿನಿಂದ ಆಚರಿಸುತ್ತಾರೆ.
 • ಇಲ್ಲಿ ದೀಪಾವಳಿ, ಬೈಸಾಖಿ ಸೇರಿದಂತೆ ಹಲವು ಹಿಂದೂ ಹಬ್ಬಗಳು ಸಾಂಸ್ಕೃತಿಕ ಹಬ್ಬಗಳಂತೆ ಜಾತ್ಯತೀತವಾಗಿ ಆಚರಿಸಲ್ಪಡುತ್ತವೆ.
 • ಶ್ಯಾಮ ದೇಶದ ಆಯುತ್ತಯವನ್ನಾಳಿದ ರಾಜಾ ರಾಮತಿ ಬೋಡಿಯು ಹಿಂದೂ ಶಾಸ್ತ್ರಗಳ ಆಧಾರದ ಮೇಲೆ ಧರ್ಮಶಾಸ್ತ್ರವೊಂದನ್ನು ರಚಿಸಿದ್ದನು. ಸುಮಾರು ಐದು ಶತಮಾನಗಳ ಕಾಲ ಇದು ಅಲ್ಲಿನ ನ್ಯಾಯಾಂಗದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
 • ಪಲ್ಲವ ಹಾಗೂ ಗುಪ್ತ ರಾಜವಂಶಗಳು ದ್ವಾರಾವತಿಯನ್ನು ಆಳಿದ್ದವು. ಪಲ್ಲವರ ಕಾಲದ ಅನೇಕ ಸಂಸ್ಕೃತ ಶಾಸನಗಳು ಅಲ್ಲಿ ದೊರಕಿವೆ.
 • ಇಲ್ಲಿಯ ಮತ್ತೊಂದು ಮುಖ್ಯ ನಗರ ದ್ವಾರಾವತಿಯಲ್ಲಿ ವೈಭವದ ಲಕ್ಷ್ಮಿ ಗಣೇಶ ಹಾಗೂ ಶಿವ ದೇವಾಲಯಗಳು ನಿರ್ಮಾಣಗೊಂಡಿದ್ದವು.
 • ಬ್ಯಾಂಗ್‌ಕಾಕ್‌ನಲ್ಲಿ ಹಲವು ಹಿಂದೂ ದೇವಾಲಯಗಳಿದ್ದು ಬಟು ಕೇವ್ಸ್ (ಸಂಸ್ಕೃತದ ವಟು ಪದದ ಸ್ಥಳೀಯ ಉಚ್ಚಾರ)ನಲ್ಲಿ ಮುರುಗನ್ ದೇಗುಲವಿದ್ದು, 140 ಅಡಿ ಎತ್ತರದ ಮುರುಗನ ಬೃಹತ್ ವಿಗ್ರಹವನ್ನು ಸ್ಥಾಪಿಸಲಾಗಿದೆ.
 • ಥಾಯ್‌ಲೆಂಡ್‌ಗೆ ಸಮೀಪದ ರಾಷ್ಟ್ರ ಫಿಲಿಪ್ಪೀನ್ಸ್ ಕೂಡ ಹಿಂದೂ ಧರ್ಮದ ಪ್ರಭಾವದಿಂದ ಹೊರತಾಗಿರಲಿಲ್ಲ. ಇದಕ್ಕೆ ಇಂದಿಗೂ ಅಲ್ಲಿಚಾಲ್ತಿಯಲ್ಲಿರುವ ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿಗಳು ಸಾಕ್ಷ್ಯ ನುಡಿಯುತ್ತವೆ.
 • ಫಿಲಿಪ್ಪೀನ್ಸ್ ತನ್ನ ಸಂವಿಧಾನದ ಕರಡು ರೂಪಿಸುವಾಗ ಸದನದಲ್ಲಿ ಸ್ಮತಿಕಾರ ಮನುವಿನ ವಿಗ್ರಹವನ್ನಿರಿಸಿ, ಮನುಕುಲದ ಮೊತ್ತಮೊದಲ ಹಾಗೂ ಸರ್ವಶ್ರೇಷ್ಠ ನ್ಯಾಯತಜ್ಞ ಎಂದು ನಮೂದಿಸಲಾಗಿತ್ತು.
 • ಭಾರತ ಮೂಲದ ಶ್ರೀ ವಿಜಯ ಸಾಮ್ರಾಜ್ಯ ಕಾಲದಲ್ಲಿ ಫಿಲಿಪ್ಪೀನ್ಸ್ ಸುವರ್ಣ ಯುಗವನ್ನು ಕಂಡಿತ್ತೆಂದು ಐತಿಹಾಸ ದಾಖಲಿಸುತ್ತದೆ.
 • ಭಾರತದ ಚಂಪಕ (ಸಂಪಿಗೆ) ಫಿಲಿಪ್ಪೀನ್ಸ್‌ನ ರಾಷ್ಟ್ರ ಪುಷ್ಪವೆಂಬ ಮಾನ್ಯತೆ ಪಡೆದಿದೆ. ಇದನ್ನವರು ಸ್ವರ್ಗದ ಹೂವೆಂದು ಪರಿಗಣಿಸುತ್ತಾರೆ.
 • ದೀರ್ಘಕಾಲದವರೆಗೆ ಫಿಲಿಪ್ಪೀನ್ಸ್ ಭಾಷೆಯನ್ನು ಸಂಸ್ಕೃತ ಲಿಪಿಯಲ್ಲಿ (ಪಲ್ಲವ ಶೈಲಿ) ಬರೆಯಲಾಗುತ್ತಿತ್ತು.
 • ಭಾರತೀಯ ಜ್ಯೋತಿಷ್ಯ ಶಾಸ್ತ್ರವು ಫಿಲಿಪ್ಪೀನ್ಸ್‌ನ ಪಂಚಾಂಗಕ್ಕೆ ಮೂಲಾಧಾರವಾಗಿತ್ತು.
 • ರಾಮಾಯಣ ಹಾಗೂ ಮಹಾಭಾರತಗಳು ಈ ದೇಶದ ಜನಪದ ಕಥೆಗಳಂತೆ ಜನಸಾಮಾನ್ಯರ ನಡುವೆ ಸೇರಿಕೊಂಡಿವೆ.
 • ಫಿಲಿಪ್ಪೀನ್ಸ್ ಪುರಾಣಗಳು ಭಾರತೀಯ ಪುರಾಣ ಕಥೆಗಳನ್ನೂ ದೇವತೆಗಳು ಹಿಂದೂ ದೇವತಾ ಪರಿಕಲ್ಪನೆಗಳನ್ನೂ ಎರವಲು ಪಡೆದುಕೊಂಡಿವೆ. ಇಲ್ಲಿ ದೇವತೆಗಳನ್ನು ದಿವತಾ ಎಂದು ಕರೆಯಲಾಗುತ್ತದೆ.
 • ಇಲ್ಲಿ ಥೇರಾವಾದ ಹಾಗೂ ವಜ್ರಯಾನ ಬೌದ್ಧ ಪಂಥಗಳೂ ಹಿಂದೂ ಧರ್ಮವೆಂದೇ ಪರಿಗಣಿಸಲ್ಪಟ್ಟಿದ್ದು, ಹಿಂದೂ ರೀತಿನೀತಿಗಳನ್ನೆ ಅವರು ಅನುಸರಿಸುತ್ತಾರೆ.
 • ವ್ಯಾಪಾರಕ್ಕೆಂದು ಫಿಲಿಪ್ಪೀನ್ಸ್‌ಗೆ ತೆರಳಿದ ಸಿಖ್ ಜನಾಂಗವು ಈ ದೇಶದಲ್ಲಿ ನೆಲೆನಿಂತು ತಮ್ಮ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪ್ರಭಾವವನ್ನು ಪರಿಣಾಮಕಾರಿಯಾಗಿ ಹರಡಿದ್ದಾರೆ.
 • ಮನಿಲಾ ನಗರದಲ್ಲಿ ಬೌದ್ಧ ಮಂದಿರ, ಹಿಂದೂ ದೇಗುಲ ಹಾಗೂ ಗುರುದ್ವಾರಗಳಿದ್ದು, ಪ್ರಮುಖ ಆಕರ್ಷಣೆಯ ಕೇಂದ್ರಗಳಾಗಿವೆ.
   

Leave a Reply