ದಕ್ಷಿಣ ಕರ್ನಾಟಕ ಪ್ರಾಂತ ಸಂಘಚಾಲಕರಾಗಿ ಮ. ವೆಂಕಟರಾಮು ಪುನರಾಯ್ಕೆ

ಬೆಂಗಳೂರು - 0 Comment
Issue Date : 26.11.2014

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಹಾಗೂ ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕರಾಗಿರುವ ಮ.ವೆಂಕಟರಾಮು ಅವರು ಮತ್ತೊಂದು ಅವಧಿಗೆ ಸಂಘದ ದಕ್ಷಿಣ ಕರ್ನಾಟಕದ ಪ್ರಾಂತ ಸಂಘಚಾಲಕರಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿ ನ.16ರಂದು ಜರುಗಿದ ಪ್ರಾಂತದ ಜಿಲ್ಲಾಕಾರ್ಯವಾಹ ಮತ್ತು ಮೇಲ್ಪಟ್ಟ ಕಾರ್ಯಕರ್ತರ ಬೈಠಕ್ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ವೆಂಕಟರಾಮು ಅವರು ಅವಿರೋಧವಾಗಿ ನಾಲ್ಕನೇ ಬಾರಿಗೆ ಪ್ರಾಂತಸಂಘಚಾಲಕರಾಗಿ ಆಯ್ಕೆಯಾದರು. 2006ರಿಂದ ಅವರು ಸಂಘದ ದಕ್ಷಿಣ ಕರ್ನಾಟಕದ ಪ್ರಾಂತ
ಸಂಘಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ಬಳಿಕ ಅವರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಸೇವಾಭಾರತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

   

Leave a Reply