ನಾಗಾಲ್ಯಾಂಡ್‌ನಲ್ಲಿ ಹಿಂದು ಸಮ್ಮೇಳನ

ವಿಶ್ವ ಹಿಂದೂ ಪರಿಷತ್ - 0 Comment
Issue Date :

ದಿಮಾಪುರ: ವಿಶ್ವ ಹಿಂದು ಪರಿಷತ್‌ನ ಸ್ವರ್ಣಜಯಂತಿ ಅಂಗವಾಗಿ ಇಲ್ಲಿ ಹಿಂದು ಸಮ್ಮೇಳನವನ್ನು ಆಯೋಜಿಸಲಾಗಿತ್ತು. ವಿಶ್ವ ಹಿಂದು ಪರಿಷತ್‌ನ ಹಿರಿಯರಾದ, ಕೇಂದ್ರೀಯ ಮಾರ್ಗದಶಕ ಮಂಡಳದ ಸ್ವಾಮಿ ಚಿನ್ಮಯಾನಂದ ಅವರು ಸಮ್ಮೇಳನವನ್ನು ಉದ್ಘಾಟಿಸಿದರು.

ನಾಗಾಲ್ಯಾಂಡ್‌ನಲ್ಲಿ ಹಿಂದುಗಳ ಸಂಖ್ಯೆ ಅತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ಸಮ್ಮೇಳನ ಮಹತ್ವದ್ದಾಗಿತ್ತು. ಸಮ್ಮೇಳನಕ್ಕೆ ಸ್ಥಳೀಯ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸ್ವಾಮಿ ಚಿನ್ಮಯಾನಂದ ಅವರು, ನಾಗಾಲ್ಯಾಂಡ್‌ನಲ್ಲಿ ತಮ್ಮ ಅಸ್ಮಿತೆ ಹಾಗೂ ಹಿಂದು ಪರಂಪರೆಗಳನ್ನು ಪ್ರತಿಕೂಲ ಸನ್ನಿವೇಶದಲ್ಲೂ ಬಿಗಿಯಾಗಿ ಕಾಪಾಡಿಕೊಂಡಿರುವ ಅಲ್ಲಿನ ಹಿಂದುಗಳ ಇಚ್ಛಾಶಕ್ತಿ ಹಾಗೂ ಬದ್ಧತೆಯನ್ನು ಶ್ಲಾಘಿಸಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಸುಮನ್‌ಚಂದ್ ಬಝಾರಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಿಹಿಂಪ ಈಶಾನ್ಯ ವಲಯದ ಸಂಘಟನಾ ಕಾರ್ಯದರ್ಶಿ ದಿನೇಶ್‌ಚಂದ್ರ ಉಪಾಧ್ಯಾಯ ಅವರು ಹಿಂದು ಸಮ್ಮೇಳನದ ಮಹತ್ವ ಹಾಗೂ ವಿಹಿಂಪ ಚಟುವಟಿಕೆಗಳ ಕುರಿತು ಮಾತನಾಡಿದರು. ಕಚಾರಿ ಟ್ರೈಬಲ್ ಕೌನ್ಸಿಲ್ ಅಧ್ಯಕ್ಷರಾದ ಎಸ್.ಕೆ. ಕೆಂಪ್‌ರಾಯ್ ಅವರ ಭಾಷಣವನ್ನು ಎಲ್ಲರೂ ಶ್ಲಾಘಿಸಿದರು.
ವಿವಿಧ ದೇಗುಲಗಳ ಹಾಗೂ ಧಾರ್ಮಿಕ ಕೇಂದ್ರಗಳ ಪ್ರಮುಖರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ತಂಡಗಳ ಕಲಾವಿದರು ಸಾಂಪ್ರದಾಯಿಕ ನೃತ್ಯಗಳ ಮೂಲಕ ಮನರಂಜಿಸಿದರು. ದುರ್ಗಾವಾಹಿನಿ ವತಿಯಿಂದ ಒಂದು ಮಾತೃ ಸಮ್ಮೇಳವನ್ನೂ ಆಯೋಜಿಸಲಾಗಿತ್ತು. ಸ್ಥಳೀಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿಹಿಂಪ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

   

Leave a Reply