ನಿಧನ ವಾರ್ತೆ

ಸ್ಮರಣೆ - 0 Comment
Issue Date :

ಗೋಪಾಲರಾವ್ ಜುಜಾರ್
ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿಯ ಹಿರಿಯ ಕಾರ್ಯಕರ್ತ ಗೋಪಾಲರಾವ್ ಜುಜಾರ್(87) ಅವರು ಮೇ 6ರಂದು ನಿಧನ ಹೊಂದಿದರು. ಅವರು ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಗೋಪಾಲರಾವ್ ಅವರು ಅನೇಕ ವರ್ಷಕಾಲ ಸಂಘದ ಧಾರವಾಡ ವಿಭಾಗ ಕಾರ್ಯವಾಹಕರಾಗಿ ಕೆಲಸ ಮಾಡಿದ್ದರು. ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯನ್ನು ಸ್ಥಾಪಿಸುವುದರಲ್ಲಿ ಅವರ ಹೆಚ್ಚಿನ ಪರಿಶ್ರಮವಿದೆ. ತುರ್ತುಪರಿಸ್ಥಿತಿಯಲ್ಲಿ ಅವರು ಕಾರಾಗೃಹವಾಸವನ್ನೂ ಅನುಭವಿಸಿದ್ದರು.

   

Leave a Reply