ನಿವೃತ್ತ ಶಿಕ್ಷಕರಿಗೆ ‘ಸೇವಾ ಸಿಂಧು’ ಸನ್ಮಾನ

ಬೆಂಗಳೂರಿನ ಸುದ್ದಿಗಳು - 0 Comment
Issue Date : 15.01.2014

ಬೆಂಗಳೂರು: ‘ಸೇವಾ ಸಿಂಧು’ ಗ್ರಾಮೀಣ ವಿಕಾಸ ಸಂಸ್ಥೆಯ ವತಿಯಿಂದ ಪ್ರತೀವರ್ಷದಂತೆ ಈ ವರ್ಷ ಕೂಡಾ ಜ. 4ರಂದು ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ತಾವರೇಕೆರೆ ಗ್ರಾಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ತರಬೇತಿ ಶಿಬಿರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ವಿಕ್ರಮ ವಾರಪತ್ರಿಕೆಯ ನ. ನಾಗರಾಜ ಅವರು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಪರಮ್‌ ಫೌಂಡೇಶನ್‌ನ ಪ್ರಮುಖರಾದ ರಾಧಾಕೃಷ್ಣ ಹೊಳ್ಳ ಮತ್ತು ವಕೀಲ ಭೋಜರಾಜ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಪರಮ್‌ ಫೌಂಡೇಶನ್‌ ಮತ್ತು ಫಿಲಿಪ್‌‌ಸ ಕಂಪೆನಿಯ ಸಹಕಾರದೊಂದಿಗೆ ‘ಸೇವಾ ಸಿಂಧು’ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಲಕರಣೆಗಳನ್ನು ನೀಡಿತು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ಹತ್ತು ವಿವಿಧ ಶಾಲೆಗಳಿಂದ ಸುಮಾರು ಐನೂರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ಶ್ರೀಮತಿ ಎ. ಪದ್ಮ  ಸ್ವಾಗತಿಸಿದರು. ಜೈರಾಜ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಕುಮಾರಿ ಸಿಂಧು ನಿರ್ವಹಿಸಿದರು.

 

   

Leave a Reply