ನೀರು, ಕಾಡು, ಪ್ರಾಣಿಗಳು ಹಾಗೂ ಭೂಮಿಯನ್ನು ರಕ್ಷಿಸಲು ದೃಢ ಹೆಜ್ಜೆ ಕೈಗೊಳ್ಳಿ: ದತ್ತಾತ್ರೇಯ ಹೊಸಬಾಳೆ

ಸುದ್ದಿಗಳು - 0 Comment
Issue Date : 12.05.2015

ಸಿವಾನ್ (ಬಿಹಾರ): ನೀರು, ಕಾಡು, ಪ್ರಾಣಿಗಳು ಹಾಗೂ ಭೂಮಿಯನ್ನು ಸಂರಕ್ಷಿಸಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಆರೆಸ್ಸೆಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಅಭಿಪ್ರಾಯಪಟ್ಟರು. ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಬೇಕೆಂದೂ ಅವರು ಆಗ್ರಹಿಸಿದರು.
ಅವರು ಇಲ್ಲಿನ ಮಹಾವೀರ ಸರಸ್ವತಿ ವಿದ್ಯಾ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದರು. ಧರ್ಮ ರಕ್ಷಾ ಸಮಿತಿ ಈ ವಿಚಾರಸಂಕಿರಣವನ್ನು ಆಯೋಜಿಸಿತ್ತು. ಪ್ರತಿಯೊಂದು ಗ್ರಾಮದಲ್ಲಿ ಧರ್ಮರಕ್ಷಾ ಸಮಿತಿ ಸ್ಥಾಪಿಸಬೇಕಾದ ಅಗತ್ಯವನ್ನು ದತ್ತಾತ್ರೇಯ ಅವರು ಒತ್ತಿ ಹೇಳಿದರು.
ಧರ್ಮಜಾಗರಣ ವಿಭಾಗದ ಕ್ಷೇತ್ರ ಪ್ರಮುಖ್ ಸುಬೇದಾರ್ ಸಿಂಗ್ ಮಾತನಾಡಿ, ಮಾತೃಧರ್ಮಕ್ಕೆ ಮರಳಿ ಬರುವುದು ನಮ್ಮ ದೇಶದಲ್ಲಿ ಹೊಸತೇನಲ್ಲ. ಆದಿ ಶಂಕಾಚಾರ್ಯರು ಅನೇಕ ಮುಸ್ಲಿಂ ಹಾಗೂ ಕ್ರೈಸ್ತರನ್ನು ತನ್ನ ಜ್ಞಾನದ ಬಲದಿಂದ ಮರಳಿ ಮಾತೃಧರ್ಮಕ್ಕೆ ಕರೆತಂದಿದ್ದರು ಎಂದು ಹೇಳಿದರು. ಮೀರ್ ಕಾಸಿಂ ಅರಬ್‌ಗೆ 35 ಸಾವಿರ ಭಾರತೀಯ ಮಹಿಳೆಯರನ್ನು ಮಾರಾಟ ಮಾಡಿದ್ದ. ಅಂತಹ ಸಂದರ್ಭದಲ್ಲಿ ಧರ್ಮ ಜಾಗರಣ ಸಮನ್ವಯ ಆರಂಭಗೊಂಡಿತು. ಮೊಗಲರ ಕಾಲದಲ್ಲಿ ಅನೇಕ ಸರ್ವಾಧಿಕಾರಿಗಳು ಹಿಂದುಗಳನ್ನು ಮತಾಂತರಿಸಲು ಪ್ರಯತ್ನಿಸಿದರು. ಆದರೆ ಅವರು ವಿಫಲರಾದರು. ಆ ಕಾಲದಲ್ಲಿ ಮತಾಂತರಕ್ಕೆ ಹಿಂದು ಸಮಾಜ ದಿಟ್ಟವಾಗಿ ಪ್ರತಿಭಟಿಸಿದಂತೆಯೇ ಈ ಕಾಲದಲ್ಲೂ ಪ್ರತಿಭಟಿಸಬೇಕಾಗಿದೆ ಎಂದು ಹೇಳಿದರು. ಪ್ರತಿಯೊಂದು ಹಳ್ಳಿಯಲ್ಲಿ ಧರ್ಮರಕ್ಷಾ ಸಮಿತಿಯನ್ನು ಈ ಹಿನ್ನೆಲೆಯಲ್ಲಿ ಆರಂಭಿಸಲಾಗುವುದು ಎಂದರು.
ಸಿವಾನ್, ಗೋಪಾಲ್‌ಗಂಜ್, ಛಾಪ್ರಾ ಮತ್ತಿತರ ಜಿಲ್ಲೆಗಳಿಂದ ಕಾರ್ಯಕರ್ತರು ಪಾಲ್ಗೊಂಡಿದ್ದರು.

   

Leave a Reply