ನೇಪಾಳದ ಲುಂಬಿನಿಯಲ್ಲಿ ಪುರಾತನ ಬೌದ್ಧ ಮಂದಿರ ಪತ್ತೆ

ದೇವಸ್ಥಾನಗಳು - 0 Comment
Issue Date : 27.11.2013

ವಿಶ್ವ ಪರಂಪರೆ ತಾಣಗಳಲ್ಲೊಂದಾಗಿರುವ ಬುದ್ಧನ ಜನ್ಮಸ್ಥಳವೆಂದೇ ಬಹು ಹಿಂದಿನಿಂದಲೂ ಪ್ರಚಲಿತವಾಗಿರುವ ನೇಪಾಳದ ಲುಂಬಿನಿಯಲ್ಲಿನ ಮಾಯಾದೇವಿ ದೇವಸ್ಥಾನದೊಳಗೆ ನಡೆಸಲಾದ ಉತ್ಖನನದಲ್ಲಿ ಸರಣಿ ಇಟ್ಟಿಗೆ ಮಂದಿರಗಳ ಕೆಳಗೆ ಈ ಹಿಂದೆಂದೂ ಕಂಡರಿಯದ ಕ್ರಿ.ಪೂ. ಆರನೇ ಶತಮಾನದ ಕಟ್ಟಿಗೆಯ ರಚನೆಯೊಂದು ಪತ್ತೆಯಾಗಿದೆ.  ಕಟ್ಟಿಗೆಯ ರಚನೆಯ ಮಧ್ಯಭಾಗದಲ್ಲಿ ಖಾಲಿ ಸ್ಥಳವೊಂದಿದ್ದು ಅದರ ತಳದಲ್ಲಿ  ಪುರಾತನ ಮರವೊಂದರ ಬೇರುಗಳು ಇದ್ದು, ಈ ಖಾಲಿ ಸ್ಥಳದಲ್ಲಿ ಹಿಂದೆ ಮರವಿದ್ದಿರಬೇಕು ಎನ್ನುವುದು ಪುರಾತತ್ವ ಶಾಸ್ತ್ರಜ್ಞರ ಅಭಿಮತ.

ಲುಂಬಿನಿಯನ್ನು ಗೌತಮ ಬುದ್ಧನ ಜನ್ಮಸ್ಥಳವೆಂದು ನಂಬಿದ್ದ ಲಕ್ಷಾಂತರ ಭಕ್ತರು ಯಾತ್ರಾರ್ಥಿಗಳಾಗಿ ಇಲ್ಲಿಗೆ ಬರುತ್ತಿದ್ದರು.  ಆದರೂ ಬುದ್ಧ ನಿಜವಾಗಿಯೂ ಬದುಕಿದ್ದು ಎಲ್ಲಿ, ಯಾವಾಗ ಎಂಬ ಬಗ್ಗೆ ಗೊಂದಲಗಳಿದ್ದುದರಿಂದ ಪುರಾತತ್ವ ತಜ್ಞರು ದೇವಾಲಯದ ಹೃದಯ ಭಾಗದಲ್ಲಿ ಉತ್ಖನನ ಆರಂಭಿಸಿದ್ದರು. ಈಗ ಇಲ್ಲಿ ಅತ್ಯಂತ ಹಳೆಯ ಬೌದ್ಧ ದೇಗುಲ ಪತ್ತೆಯಾಗಿದೆ.  ರಾಣಿ ಮಾಯಾ ದೇವಿ ಅವರು ಲುಂಬಿನ ಉದ್ಯಾನದಲ್ಲಿದ್ದ ಮರವೊಂದರ ಕೊಂಬೆಯನ್ನು ಎಳೆದು ಅದರೆಡೆಯಲ್ಲೇ ಗೌತಮ ಬುದ್ಧನಿಗೆ ಜನ್ಮ ನೀಡಿದಳು ಎಂಭ ಪ್ರತೀತಿ ಇದೆ.

 

ಬುದ್ಧನ ಜೀವಿತ ಮತ್ತು ಬೌದ್ಧಧರ್ಮದ ಆರಂಭವನ್ನು ನಿರ್ದಿಷ್ಟ ಶತಮಾನದೊಂದಿಗೆ ಗುರುತಿಸುವಲ್ಲಿ   ಈ  ಬೌದ್ಧಮಂದಿರವು ಮೊದಲ ಪುರಾತತ್ವ ಕುರುಹು ಆಗಿದೆ.

   

Leave a Reply