ನೇಪಾಳ ಸಂತ್ರಸ್ತರಿಗೆ ನೆರವಾಗಿ: ಆರೆಸ್ಸೆಸ್ ಮನವಿ

ರಾಜ್ಯಗಳು - 0 Comment
Issue Date : 07.05.2015

ಹೊಸದಿಲ್ಲಿ: ಭೂಕಂಪ ಪೀಡಿತ ನೇಪಾಳದ ಸಂತ್ರಸ್ತರಿಗೆ ತಕ್ಷಣ ನೆರವು ನೀಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಷಿ ಸ್ವಯಂಸೇವಕರು ಹಾಗೂ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.
ಏ. 25ರಂದು ನೇಪಾಳ ಹಾಗೂ ಭಾರತದ ಕೆಲವು ಪ್ರದೇಶ ಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಇಡೀ ಜಗತ್ತು ದಿಗ್ಭ್ರಮೆಗೊಂಡಿದೆ. ಪ್ರಕೃತಿಯ ಈ ಆರ್ಭಟದಿಂದ ಇಡೀ ಜನಜೀವನ ಸ್ತಬ್ಧಗೊಂಡಿದೆ. ನೇಪಾಳದಲ್ಲಂತೂ ಭೂಕಂಪದಿಂದ ಸಾವಿಗೀಡಾಗಿರುವ ಜನರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ದಾಟುವ ನಿರೀಕ್ಷೆ ಕಂಡುಬರುತ್ತಿದೆ. ಇದೊಂದು ಕಲ್ಪನೆಗೂ ನಿಲುಕದ ದೊಡ್ಡ ದುರಂತ. ನೇಪಾಳದಲ್ಲಿ ಸಾವಿರಾರು ಜನ ಸಾವಿಗೀಡಾಗಿರುವುದಲ್ಲದೇ ಅಷ್ಟೇ ಸಂಖ್ಯೆಯ ಜನರು ಗಾಯಾಳುಗಳಾಗಿದ್ದಾರೆ. ಅನೇಕರು ಮನೆ ಮಠ ಕಳೆದುಕೊಂಡು ದಿಕ್ಕಿಲ್ಲದವರಾಗಿದ್ದಾರೆ. ಭಾರತದಲ್ಲೂ ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಸಿಕ್ಕಿಂ ಮುಂತಾದ ಕಡೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿರುವ ಸುದ್ದಿ ಪ್ರಕಟವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲ ಭಾರತ ವಾಸಿಗಳು ಸಂತ್ರಸ್ತ ಬಂಧುಗಳಿಗೆ ತಕ್ಷಣ ನೆರವಾಗುವುದು ನಮ್ಮ ಸ್ವಾಭಾವಿಕ ಕರ್ತವ್ಯವಾಗಿದೆ. ಜೊತೆಗೆ ಅದು ನಮ್ಮ ಹೊಣೆಗಾರಿಕೆ ಕೂಡ ಹೌದು ಎಂದು ಅವರು ಹೇಳಿದ್ದಾರೆ.
ಭಾರತ ಸರ್ಕಾರ ನೇಪಾಳದಲ್ಲಿ ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ನೆರವಿಗೆ ಧಾವಿಸಿರುವುದು ಸಂತಸದ ಸಂಗತಿ. ಸಂತ್ರಸ್ತರಿಗೆ ಅಗತ್ಯವಾದ ಸಾಮಗ್ರಿಗಳನ್ನು ಭಾರತೀಯ ವಿಮಾನದಲ್ಲಿ ಕಳುಹಿಸಲಾಗಿದೆ. ಎಲ್ಲ ಬಗೆಯ ಅಗತ್ಯ ನೆರವನ್ನು ಭಾರತ ಸರ್ಕಾರ ನೀಡಿರುವುದು ಶ್ಲಾಘನೀಯ ಎಂದು ಸುರೇಶ್ ಜೋಷಿ ಹೇಳಿದ್ದಾರೆ.
ಆದರೆ ಭೂಕಂಪದ ಹಾನಿ ಅಪಾರವಾಗಿದೆ. ಹಾಗಾಗಿ ನಾವೆಲ್ಲ ಭಾರತ ವಾಸಿಗಳು ಇಂತಹ ಸಂಕಟದ ಸಂದರ್ಭದಲ್ಲಿ ಒಂದಾಗಿ ನಿಂತು ನೇಪಾಳಕ್ಕೆ ಸಾಧ್ಯವಾದಷ್ಟೂ ಎಲ್ಲ ಬಗೆಯ ನೆರವನ್ನು ನೀಡಬೇಕಾಗಿದೆ. ಆದ್ದರಿಂದ ಕಾರ್ಯಕರ್ತ ಬಂಧುಗಳು ತಮ್ಮ ತಮ್ಮ ಪ್ರಾಂತಗಳಲ್ಲಿ ಅಧಿಕೃತವಾಗಿ ನೊಂದಾಯಿತವಾಗಿರುವ ಸಂಸ್ಥೆಯ ಮೂಲಕ ಭೂಕಂಪ ಪೀಡಿತರ ನೆರವಿಗಾಗಿ ಧನ ಸಂಗ್ರಹ ಪ್ರಾರಂಭಿಸಬೇಕು ಎಂದು ತಿಳಿಸಿದ್ದಾರೆ.

   

Leave a Reply